ಜಿಲ್ಲೆಗಳು

ಜನನಿಬಿಡ ರಸ್ತೆಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿ: ವ್ಯಾಪಾರಸ್ಥರು, ವಾಹನ ಸವಾರರಿಗೆ ಕಿರಿಕಿರಿ

ಮೈಸೂರು: ಇದು ನಗರದ ಹೃದಯಭಾಗದಲ್ಲಿರುವ ರಸ್ತೆ. ಇಲ್ಲಿ ಲಕ್ಷಾಂತರ ಜನರು ಪ್ರತೀ ದಿನ ಓಡಾಡುತ್ತಾರೆ. ವಾಹನ ಸಂಚಾರ ಕೂಡ ಲೆಕ್ಕವಿಲ್ಲ. ಅಂತಹ ರಸ್ತೆಯನ್ನು ದುರಸ್ಥಿ ನೆಪದಲ್ಲಿ ಕಳೆದ ೧೫ ದಿನಗಳ ಹಿಂದೆ ಅಗೆದಿರುವ ನಗರಪಾಲಿಕೆ ಕಾಮಗಾರಿಯನ್ನು ಅರ್ದಕ್ಕೇ ನಿಲ್ಲಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ.
ಯಾವುದೇ ಕಾಮಗಾರಿ ಕೈಗೆತ್ತಿಕೊಂಡಲ್ಲಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಿದಲ್ಲಿ ಸಾರ್ವಜನಿಕರಿಗೆ ಅದು ಅನುಕೂಲವಾಗುತ್ತದೆ. ಅನುದಾನ ಕಡಿತ. ಹಣ ಬಿಡುಗಡೆಯಾಗಿಲ್ಲ ಎಂಬ ಮುಂತಾದ ಕಾರಣಗಳನ್ನಿಟ್ಟುಕೊಂಡು ಕಾಮಗಾರಿಯನ್ನು ವಿಳಂಬ ಮಾಡಿದಲ್ಲಿ ಸಂಕಷ್ಟಕ್ಕೊಳಗಾಗುವವರು ಮಾತ್ರ ಸಾರ್ವಜನಿಕರು.
ಇದಕ್ಕೆ ತಾಜ ಉದಾಹರಣೆ ನಗರದ ದೇವರಾಜ ಮಾರುಕಟ್ಟೆಯ ಕೂಗಳತೆಯಲ್ಲಿರುವ ಹಾಗೂ ಮಕ್ಕಾಜಿ ಚೌಕದ ಎದುರಿನ ರಸ್ತೆ. ರಸ್ತೆಯಲ್ಲಿ ಚರಂಡಿ ನಿರ್ಮಾಣ ಮಾಡುವ ಕಾಮಗಾರಿಯನ್ನು ನಗರಪಾಲಿಕೆ ಕೈಗೆತ್ತಿಕೊಂಡಿದೆ.
ಕಾಮಗಾರಿಯ ಟೆಂಡರ್ ಪಡೆದ ಗುತ್ತಿಗೆದಾರ ದೀಪಾವಳಿ ಹಬ್ಬದ ಹಿಂದಿನ ದಿನ ಕಾಮಗಾರಿಯನ್ನು ಆರಂಭಿಸಿದ್ದಾರೆ. ಒಂದೆರಡು ದಿನ ಕಾಮಗಾರಿಯನ್ನು ನಡೆಸಿ ಚರಂಡಿ ನಿರ್ಮಾಣಕ್ಕೆ ಹಳ್ಳ ತೋಡಿದ್ದಾರೆ. ಇದಾದ ನಂತರ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ನೀರಿನ ಟ್ಯಾಂಕರ್ ನಿಲ್ಲಿಸಿ ಹೋದವರು ಇದುವರೆವಿಗೂ ಪತ್ತೆ ಇಲ್ಲ.
ಈ ರಸ್ತೆ ಸಯ್ಯಾಜಿರಾವ್ ರಸ್ತೆಯನ್ನು ಸಂಪರ್ಕಿಸುತ್ತದೆ. ಒಲಂಪಿಯಾ ಚಿತ್ರಮಂದಿರದ ಸುತ್ತಮುತ್ತಲಿನ ಮಳಿಗೆಗಳ ಸಂಪರ್ಕ ಕೂಡ ಇದೇ ರಸ್ತೆಯಿಂದ ಆಗುತ್ತದೆ. ಪ್ರತೀದಿನ ಕೋಟ್ಯಾಂತರ ರೂ. ವಹಿವಾಟು ನಡೆಯುವ ಸ್ಥಳದಲ್ಲಿ ಈ ರಸ್ತೆ ಇದೆ.
ಕಾಮಗಾರಿ ಅರ್ದಕ್ಕೆ ನಿಂತಿರುವುದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಜನರು ಕೂಡ ವಸ್ತುಗಳ ಖರೀದಿಗೆ ಕೆಟಿ ಸ್ಟ್ರೀಟ್ ರಸ್ತೆ ಮೂಲಕ ಒಂದು ಸುತ್ತುಹಾಕಿ ಅಲ್ಲಿಗೆ ಬರಬೇಕಿದೆ. ಈ ಬಗ್ಗೆ ವ್ಯಾಪಾರಸ್ಥರು ಸಾಕಷ್ಟು ದೂರು ಹೇಳಿಕೊಂಡರು ಕೂಡ ನಗರಪಾಲಿಕೆ ಅಧಿಕಾರಿಗಳ ಕಿವಿಗೆ ಬಿದ್ದಿಲ್ಲ. ಈಗಲಾದರೂ ಸಂಬಂದಪಟ್ಟವರು ಕಾಮಗಾರಿಯನ್ನು ತುರ್ತಾಗಿ ಪುರ್ಣಗೊಳಿಸಬೇಕಿದೆ.

ಚರಂಡಿ ನಿರ್ಮಾಣಕ್ಕೂ ಮುನ್ನ ಅಲ್ಲಿ ಒಳ ಚರಂಡಿಯ ಪೈಪ್‌ಲೈನ್ ಅಳವಡಿಸಬೇಕಾಗಿದೆ. ಈ ಕಾಮಗಾರಿಗಾಗಿ ಹಣ ಬಿಡುಗಡೆಯಾಗಿಲ್ಲದ ಕಾರಣ ಗುತ್ತಿಗೆದಾರರು ಕೆಲಸವನ್ನು ಅರ್ದಕ್ಕೆ ನಿಲ್ಲಿಸಿದ್ದಾರೆ. ಇದರ ಬಗ್ಗೆ ನಗರಪಾಲಿಕೆ ಆಯುಕ್ತರೊಂದಿಗೆ ಮಾತನಾಡಲಾಗಿದೆ. ಆದಷ್ಟು ಶೀಘ್ರವಾಗಿ ಕಾಂಗಾರಿ ಪೂರ್ಣಗೊಳ್ಳಲಿದೆ.
-ಎಂ.ಡಿ.ನಾಗರಾಜು, ನಗರಪಾಲಿಕೆ ಸದಸ್ಯರು.

ಇದು ಮಾರುಕಟ್ಟೆಯ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಒಂದು. ಪ್ರತೀದಿನ ಸಾವಿರಾರು ವಾಹನಗಳ ಸಂಚಾರವಿದೆ. ಕಾಮಗಾರಿ ಅರಂಭವಾಗಿ ೧೫ ದಿನಗಳು ಕಳೆದರೂ ಪೂರ್ಣಗೊಂಡಿಲ್ಲ. ಇದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ನಗರಪಾಲಿಕೆ ಅಧಿಕಾರಿಗಳು ಇತ್ತ ಗಮನ ಹರಿಸಬೇಕು.
-ಅಸ್ಮತ್ ಅಲಿ, ರೆಡಿಮೇಡ್ ಉಡುಪು ವ್ಯಾಪಾರಿ.

andolanait

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

10 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

14 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

14 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

14 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

14 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

14 hours ago