ಜಿಲ್ಲೆಗಳು

ಬೀದಿನಾಯಿ ಹಾವಳಿ ತಡೆಗಟ್ಟಲು ಸಂತಾನಹರಣ ಶಸ್ತ್ರಚಿಕಿತ್ಸೆ

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿನ ಬೀದಿನಾಯಿಗಳಿಗೆ ಡಬ್ಲ್ಯು ವಿ ಎಸ್ ಸಂಸ್ಥೆಯವರು ಬೀದಿನಾಯಿ ಹಾವಳಿ ತಡೆಯುವ ನಿಟ್ಟಿನಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ನೀಡಿದ್ದಾರೆ.

ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಪಿ ಜಿ ಪಾಳ್ಯ, ಹುತ್ತೂರು, ಒಡೆಯರಪಾಳ್ಯ,ಲೊಕ್ಕನಹಳ್ಳಿ ಜೀರಿಗೆಗದ್ದೆ ಉದ್ದಟ್ಟಿ ಹಾವಿನಮೂಲೆ ಮಾವತ್ತೂರು ಹೊಸದೊಡ್ಡಿ ಜಡೇಗೌಡನದೊಡ್ಡಿ ಕೇಕೆ ಡ್ಯಾಮ್ ಆಂಡಿಪಾಳ್ಯ ಹಿರಿಯಂಬಲ ಹೊಸಪೋಡು ಗುಂಡಿಮಾಳ ಬಸವನಗುಡಿ ಕೊರಮನಕತ್ತರಿ ಗ್ರಾಮಗಳಲ್ಲಿನ 600 ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಟಿಬೆಟಿಯನ್ ಸೆಟ್ಲ್ ಮೆಂಟ್ ಆಸ್ಪತ್ರೆಯಲ್ಲಿ ಸಂತಾನಹರಣ ಚಿಕಿತ್ಸೆ ನೀಡಿ ನಂತರ ಅದೇ ಗ್ರಾಮಗಳಿಗೆ ಬಿಟ್ಟಿದ್ದಾರೆ.

ಈ ವೇಳೆ ಪಿ ಜಿ ಪಾಳ್ಯ ಗ್ರಾಪಂ ಮಾಜಿ ಅಧ್ಯಕ್ಷ ಎನ್ ಕೃಷ್ಣಮೂರ್ತಿ ಮಾತನಾಡಿ ಬೀದಿ ನಾಯಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಡಬ್ಲ್ಯು ವಿ ಎಸ್ ಸಂಸ್ಥೆಯವರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವದು ಸಂತಸದ ವಿಚಾರ ,ಇವರು ಒಳ್ಳೆಯ ದೃಷ್ಟಿಯಿಂದ ನಾಯಿಗಳನ್ನು ಹಿಡಿದು ಚಿಕಿತ್ಸೆ ಮುಗಿದ ನಂತರ ಮತ್ತೆ ಅದೇ ಗ್ರಾಮಕ್ಕೆ ಬಿಡುತ್ತಿದ್ದಾರೆ ಇದರಿಂದ ಸಾರ್ವಜನಿಕರು ಸಂಸ್ಥೆಯವರ ಜತೆ ಸಹಕರಿಸಬೇಕು. ಸಂತಾನ ತಡೆಯುವ ನಿಟ್ಟಿನಲ್ಲಿ ಮನೆಯಲ್ಲಿ ಸಾಕುತ್ತಿರುವ ಸಾಕು ನಾಯಿಗಳಿಗೂ ಸಹ ಚಿಕಿತ್ಸೆ ಕೊಡಿಸಬಹುದು ಎಂದು ತಿಳಿಸಿದರು.

andolanait

Recent Posts

ದಾಖಲೆ ಬಜೆಟ್; ಹಾದಿ ಸುಲಭದ್ದಲ್ಲ

ಹದಿನೇಳನೇ ಬಾರಿಗೆ ರಾಜ್ಯದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿರುವ ವಿತ್ತ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅದರ…

1 hour ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಇವರು ಲಕ್ಕಿ ಪೊಲಿಟಿಷಿಯನ್ ಡುಕಾಟಿ ರಾಮಚಂದ್ರಪ್ಪ

ಪಕ್ಷಕ್ಕೆ ಬಹುಮತ ಬಂದರೆ ಸಿಎಂ, ಬರದಿದ್ದರೆ ಪ್ರತಿಪಕ್ಷ ನಾಯಕರಾಗುವ ಪ್ರಭಾವಿ ವ್ಯಕ್ತಿ ವೇಗವಾಗಿ ಸಾಗುತ್ತಿದ್ದ ಜೀಪು ಸಂಗನಕಲ್ಲು ಕ್ರಾಸ್ ಬಳಿ…

1 hour ago

ಅಭಿವೃದ್ಧಿಯತ್ತ ಕೊಡಗಿನ ಸರ್ಕಾರಿ ಗೋಶಾಲೆ

ನವೀನ್ ಡಿಸೋಜ ೨೦೨೨ರಲ್ಲಿ ಕೆ.ನಿಡುಗಣೆ ಗ್ರಾಮದಲ್ಲಿ ನಿರ್ಮಾಣವಾದ ಗೋಶಾಲೆ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಮತ್ತಷ್ಟು ಜಾನವಾರುಗಳಿಗೆ ಆಶ್ರಯ ಒದಗಿಸಲು ಚಿಂತನೆ …

1 hour ago

60 ದಿನಗಳಲ್ಲಿ ಕಲ್ಲಂಗಡಿ ಬೆಳೆದು ಲಾಭ ಗಳಿಸಿದ ರೈತ

ಮಾಗಳಿ ರಾಮೇಗೌಡ ಬೆಟ್ಟದಪುರ: ಕೇವಲ ೬೦ ದಿನಗಳಲ್ಲಿ ಉತ್ಪಲ ಕಂಪೆನಿಯ ತೃಪ್ತಿ ತಳಿಯ ಕಲ್ಲಂಗಡಿ ಹಣ್ಣನ್ನು ಬೆಳೆದು ಒಂದೂವರೆ ಲಕ್ಷ…

1 hour ago

108 ವರ್ಷಗಳ ಶಾಲೆಯಲ್ಲಿ ನೂರಾರು ಮಕ್ಕಳ ಕಲರವ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ವಯಸ್ಸಾದವರು ಈ ಶಾಲೆಯನ್ನು ನೋಡಿದರೆ, ತಮ್ಮ ಬಾಲ್ಯದ ನೆನಪುಗಳಿಗೆ ರೆಕ್ಕೆಪುಕ್ಕ…

2 hours ago

ಮೈಸೂರು ಜಿಲ್ಲೆಗೆ 13 ನಮ್ಮ ಕ್ಲಿನಿಕ್ ಮಂಜೂರು

ಕೆ.ಬಿ.ರಮೇಶನಾಯಕ ಯಾತ್ರಾಸ್ಥಳ ಚಾಮುಂಡಿಬೆಟ್ಟ, ಅಲ್ಪಸಂಖ್ಯಾತರು ಹೆಚ್ಚಿರುವ ಬಡೇಮಕಾನ್‌ನಲ್ಲಿ ಶೀಘ್ರ ಆರಂಭ ಮೈಸೂರು: ನಗರ ಪ್ರದೇಶದ ಜನರಿಗೆ ಸ್ಥಳೀಯವಾಗಿ ಚಿಕಿತ್ಸೆ ದೊರೆಯುವಂತೆ…

2 hours ago