ಕೆ. ಕಿಸಾನ್ ಆಪ್ ನಡಿ ಎಲ್ಲ ರೈತರ ಕಡ್ಡಾಯ ನೋಂದಣಿ, ಐಡಿ ಇಲ್ಲದ ರೈತರಿಗೆ ಸರ್ಕಾರಿ ಸೌಲಭ್ಯ ಕಟ್
ಮೈಸೂರು: ಇನ್ನು ಮುಂದೆ ಕೆ ಕಿಸಾನ್ ಆನ್‌ಲೈನ್ ಆಪ್‌ಗೆ ರೈತರು ಜೋಡಣೆಯಾಗದಿದ್ದಲ್ಲಿ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತರಾಗಲಿದ್ದಾರೆ. ಸರ್ಕಾರದಿಂದ ಸಿಗುವ ಸಹಾಯಧನ, ಉಚಿತವಾಗಿ ಸಿಗುವ ಔಷಧಿಗಳು, ಸಬ್ಸಿಡಿ ದರದಲ್ಲಿ ಸಿಗುವ ಕೃಷಿ ಉಪಕರಣಗಳು ಇತ್ಯಾದಿಗಳು ಇನ್ನು ಮುಂದೆ ಫಾರ್ಮರ್ ಐಡಿ ಇಲ್ಲದ ರೈತರಿಗೆ ಸಿಗುವುದಿಲ್ಲ.
ರೈತರನ್ನು ಡಿಜಿಟಲೀಕರಣಗೊಳಿಸುವತ್ತ ರಾಜ್ಯದ ಕೃಷಿ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದ್ದು 2-023ರ ಏಪ್ರಿಲ್ ಒಂದರಿಂದ ರೈತರು ಸಂಪೂರ್ಣ ಕಾಗದರಹಿತ ಹಾಗೂ ಪಾರದರ್ಶಕ ರೀತಿಯಲ್ಲಿ ಖರೀದಿ ಮತ್ತು ವಿತರಣಾ ಪ್ರಕ್ರಿಯೆ ಮಾಡುವದನ್ನು ಕಡ್ಡಾಯ ಮಾಡಿದೆ. ಈ ನಿಟ್ಟಿನಲ್ಲಿ 2022ರ ಆರಂಭದಿಂದಲೇ ಶಿವಮೊಗ್ಗ, ಮೈಸೂರು,ವಿಜಯಪುರ ಹಾಗೂ ಚಿತ್ರದುರ್ಗ ಒಳಗೊಂಡು ನಾಲ್ಕು ಜಿಲ್ಲೆಗಳಲ್ಲಿ ಆನ್‌ಲೈನ್ ವಿತರಣೆ ಹಾಗೂ ಖರೀದಿ ಮಾಡುವ ಸೌಲಭ್ಯ ಕಲ್ಪಿಸಿತ್ತು.
ಜನವರಿ ಒಂದರಿಂದ ಪ್ರಾಯೋಗಿಕವಾಗಿ ಎಲ್ಲ31 ಜಿಲ್ಲೆಗಳಲ್ಲಿ ಪ್ರಾರಂಭಿಸಲು ಸರ್ಕಾರ ಉದ್ಧೇಶಿಸಿದೆ. ಮೈಸೂರಿನಲ್ಲಿಯೂ ಇದೀಗ ನೂತನ “ಇ ಕಚೇರಿʼ ಆರಂಭಿಸಲು ಉದ್ಧೇಶಿಸಲಾಗಿದೆ.
ಕೆ ಕಿಸಾನ್ ಆನ್‌ಲೈನ್ ಆಪ್‌ಗೆ ರೈತರು ಕಡ್ಡಾಯವಾಗಿ ನೋಂದಣಿ ಆಗುವ ಮೂಲಕ ಸರ್ಕಾರದ ಎಲ್ಲ ಸಹಾಯ ಸೌಲಭ್ಯ ಹೊಂದುವಂತೆ ಮೈಸೂರು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.
ಕೆ- ಕಿಸಾನ್ ನೋಂದಣಿ ರೈತರಿಗೆ ಕೃಷಿ ಇಲಾಖೆಯಿಂದ ನೀಡಲಾಗುವ ಪರಿಕರ,ಕೀಟನಾಶಕ ಔಷಧಿ ವಿತರಣೆ ಎಲ್ಲವೂ ದಾಖಲಾಗುವುದರಿಂದ ಹೆಚ್ಚಿನ ಫಲಾನುಭವಿಗಳಿಗೆ ಲಾಭ ಸಿಗಲಿದೆ. ರೈತರ ಪ್ರೋತ್ಸಾಹಧನ, ಸಹಾಯ ಧನ ಎಲ್ಲವೂ ರೈತರ ಬ್ಯಾಂಕ್ ಖಾತೆಗೆ ನೇರ ಜಮಾ ಆಗುತ್ತಿದೆ. ರೈತರು ಹೊಂದಿರುವ ಸಮಗ್ರ ಕೃಷಿ ಪ್ರದೇಶಗಳ ಮಾಹಿತಿ,ಸರ್ಕಾರದಿಂದ ಹೊಂದಿಕೊಂಡಿರುವ ಸವಲತ್ತು ದಾಖಲಾಗುವದರಿಂದ ವಂಚನೆ,ಶೋಷಣೆಗೆ ಕಡಿವಾಣ ಬೀಳಲಿದೆ.
ಕೆ ಕಿಸಾನ್‌ನಲ್ಲಿ ಕರ್ನಾಟಕದ ಸಮಗ್ರ ರೈತರ ಮಾಹಿತಿ ಸಿಗಲಿದೆ. ಕೆ ಕಿಸಾನ್ ಮೂಲಕ ರೈತರ ಆಧಾರ್ ಮತ್ತು ಪಹಣಿ (ಭೂ ದಾಖಲೆ)ಗೆ ಲಿಂಕ್ ಮಾಡುವ ಮೂಲಕ ರೈತರಿಗೆ ಗುರುತಿನ ಚೀಟಿ (ಫಾರ್ಮರ್ ಐಡಿ) ನೀಡಲಾಗುತ್ತಿದೆ. ಕೃಷಿ ಇಲಾಖೆ ಅಧೀನದಲ್ಲಿರುವ ಎಲ್ಲ ಕಚೇರಿಗಳು, ಜಿಲ್ಲಾ ತರಬೇತಿ ಕೇಂದ್ರಗಳು, ಪ್ರಯೋಗಾಲಯಗಳು ಮತ್ತು ರೈತ ಸಂಪರ್ಕ ಕೇಂದ್ರಗಳು ಸಂಪೂರ್ಣ ಡಿಜಿಟಲೀಕರಣವಾಗಲಿದೆ.
ಈಗಾಗಲೇ ರಾಜ್ಯದ ಐವತ್ತು ಲಕ್ಷಕ್ಕೂ ಅಧಿಕ ರೈತರು ಎಫ್‌ಐಡಿಯನ್ನು ಹೊಂದಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 3,28,000 ರೈತರು ಕೆಕಿಸಾನ್‌ನಲ್ಲಿ ಬರುವುದರಿಂದ ರಾಜ್ಯದ ಸಮಗ್ರ ರೈತರ ಕೃಷಿ ಮಾಹಿತಿ ಅಂತರ್ಜಾಲದಲ್ಲಿ ಪಾರದರ್ಶಕವಾಗಿ ದಾಖಲೀಕರಣಗೊಳ್ಳಲಿದೆ.
ಫಾರ್ಮರ್ ಐಡಿ ಹೊಂದದ ರೈತರು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಪಹಣಿ ಪತ್ರ, ಬ್ಯಾಂಕ್ ಪಾಸ್ ಬುಕ್ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಹೋದಲ್ಲಿ ಕೆ ಕಿಸಾನ್ ಫಾರ್ಮರ್ ಐಡಿ ಹೊಂದಬಹುದು.
ರೈತರು, ರೈತರ ಕುಟುಂಬ, ಭೂಮಿ ವಿಸ್ತೀರ್ಣ, ಮಣ್ಣಿನ ಗುಣಮಟ್ಟ,ಸಮಗ್ರ ಬೆಳೆ ಮಾಹಿತಿ, ಆಧಾರ್ ಮಾಹಿತಿ, ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ರೈತರಿಗೆಲ್ಲ ಒಂದೇ ಮಾದರಿ ಐಡಿ ನೀಡಲಾಗುತ್ತದೆ. ರೈತ ಗುರುತಿನ ಚೀಟಿ ಹೊಂದಿದವರು ಯಾವುದೇ ಅಡೆತಡೆ ಇಲ್ಲದೆ ಕೃಷಿ ಇಲಾಖೆಯಿಂದ ನೇರ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.
ರೈತರು ಮೊಬೈಲ್ ಮೂಲಕವೂ ಉಚಿತವಾಗಿ ಕೆ ಕಿಸಾನ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೂ ನೇರ ಸೌಲಭ್ಯ ದೊರೆಯುತ್ತದೆ. ನೀರಾವರಿ ಯಂತ್ರೋಪಕರಣಗಳು, ಕೃಷಿ ಉಪಕರಣ,ಕಳೆ ಕೊಚ್ಚುವ ಯಂತ್ರ ಇತ್ಯಾದಿ ಸಬ್ಸಿಡಿ ದರದಲ್ಲಿ ಪಡೆಯಲು ಹಾಗೂ ಸರ್ಕಾರ ನೀಡುವ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆ ಮೂಲಕ ಪಡೆಯಲು ಕೆ. ಕಿಸಾನ್ ನೋಂದಣಿ ನೆರವಾಗಲಿದೆ.
ಹಾಸನ: ರಾಕಿಂಗ್ ಸ್ಟಾರ್ ಯಶ್‌ಗೆ ಭೂ ಒತ್ತುವರಿ ತೆರವು ಶಾಕ್ ನೀಡಲಾಗಿದೆ. ಹಾಸನದಲ್ಲಿರುವ ಲಕ್ಷ್ಮಮ್ಮ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ…
ಮೈಸೂರು ನಗರದ ಕುವೆಂಪು ನಗರದ ವಿವೇಕಾನಂದ ವೃತ್ತದಿಂದ ಶ್ರೀರಾಂಪುರದ ಕಡೆಗೆ ಹೋಗುವ ಮುಖ್ಯ ರಸ್ತೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ…
ರಾಜ್ಯದ ವಿವಿಧ ಭಾಗಗಳಲ್ಲಿ ರಾಗಿ, ಭತ್ತ, ಜೋಳ ಮೊದಲಾದ ಫಸಲನ್ನು ಒಕ್ಕಣೆ ಮಾಡಲು ರಸ್ತೆಯನ್ನೇ ಬಳಸುತ್ತಿದ್ದು, ಇದರಿಂದ ಅಪಘಾತಗಳು ಸಂಭವಿಸಿ…
ಮೈಸೂರು ವಿಭಾಗದಲ್ಲಿ ಹುಲಿ ಚಿರತೆಗಳ ದಾಳಿಯಿಂದಾಗಿ ಹಲವಾರು ಮಂದಿ ಸಾವನ್ನಪ್ಪಿದ್ದರು. ಮಾನವ-ಪ್ರಾಣಿ ಸಂಘರ್ಷವನ್ನು ತಪ್ಪಿಸುವಂತೆ ರೈತ ಸಂಘ ಹಾಗೂ ಗ್ರಾಮಸ್ಥರು…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಕಳೆದ ವರ್ಷ ೨೦೨೫ರಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ…
ನವೀನ್ ಡಿಸೋಜ ಅನುದಾನ ಬಿಡುಗಡೆಯಾದರೂ ಆರಂಭವಾಗದ ಕಾಮಗಾರಿ ಶೀಘ್ರ ಸೇತುವೆ ನಿರ್ಮಾಣಕ್ಕೆ ಒತ್ತಾಯ ಮಡಿಕೇರಿ: ಕುಶಾಲನಗರ ತಾಲ್ಲೂಕಿನ ದುಬಾರೆ ತೂಗು…