ಜಿಲ್ಲೆಗಳು

ಶ್ರೀರಂಗಪಟ್ಟಣ ದಸರಾ ಜಾನಪದ ಕಲಾವಿದರ ಪರದಾಟ

ಸಿಗದ ಸೂಕ್ತ ಸಂಭಾವನೆ : ಅಸಮಾಧಾನ ಹೊರಹಾಕಿದ ಸ್ಥಳೀಯ ಕಲಾವಿದರು

ಹೇಮಂತ್‌ಕುಮಾರ್ 
ಮಂಡ್ಯ: ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬ ಗಾದೆ ಮಾತಿಗೆ ಅನ್ವರ್ಥವಾಗುವಂತೆ ಶ್ರೀರಂಗಪಟ್ಟಣ ದಸರಾದಲ್ಲಿ ಸ್ಥಳೀಯ ಜನಪದ ಕಲಾವಿದರಿಗೊಂದು, ಬೆಂಗಳೂರಿನಿಂದ ಬಂದ ಕಲಾವಿದರಿಗೊಂದು ರೀತಿಯ ಸಂಭಾವನೆ ಕೊಡುವ ಅಧಿಕಾರಿಗಳ ನಡೆಯಿಂದ ಕೆಲವು ಕಲಾವಿದರು ಬೇಸರಗೊಂಡಿದ್ದಾರೆ.
ವಾಹನ ಬಾಡಿಗೆ, ತಿಂಡಿ ಊಟದ ವೆಚ್ಚಗಳಿಗೂ ಸಾಲದಂತಹ ಸಂಭಾವನೆ ನೀಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಓಬಿರಾಯನ ಕಾಲದ ದರಪಟ್ಟಿ ನಗೆಪಾಟಲಿಗೆ ಈಡಾಗಿದೆ. ಆದರೆ, ಈ ದರಗಳು ಬಣ್ಣ ಬಣ್ಣದ ಪೋಷಾಕಿನಲ್ಲಿ ಮಿಂಚಿ ಹೋಗುವ, ಸಿನಿವಾ ಹಾಡಿಗೆ ಹೆಜ್ಜೆಹಾಕಿ ಹೋಗುವ ಕಲಾವಿದರಿಗೆ ಅನ್ವಯಿಸುವುದಿಲ್ಲ.
ಅವರಿಗೆ ಕೈತುಂಬ ಸಂಭಾವನೆ ಕೊಟ್ಟುಕಳಿಸುವುದನ್ನು ಕಂಡು ಜನಪದ ಕಲಾವಿದರು ಕಂಡು ಮರುಗುವಂತಾಗಿದೆ.
ಜಂಬೂ ಸವಾರಿುಂಲ್ಲಿ ಬಹಳ ದೂರ ತಮ್ಮ ಕಲಾಪ್ರದರ್ಶನ ನೀಡುತ್ತಲೇ ಮೆರವಣಿಗೆಯಲ್ಲಿ ಸಾಗುವ ಜನಪದ ಕಲಾವಿದರಿಗೆ ಶ್ರೀರಂಗಪಟ್ಟಣ ದಸರಾ ಉತ್ಸವ ಸಮಿತಿ ಕೊಂಚವೂ ಕರುಣೆಯಿಲ್ಲದೆ ನಡೆಸಿಕೊಂಡಿದೆ ಎಂಬ ದೂರು ಸಾವಾನ್ಯವಾಗಿದೆ. ಸಾವಾನ್ಯವಾಗಿ ಜನಪದ ಕಲಾವಿದರು ಏಳೆಂಟು ಮಂದಿ ಸೇರಿ ಒಂದು ತಂಡ ಕಟ್ಟಿಕೊಂಡಿರುತ್ತಾರೆ. ಅವರು ಒಂದು ಟೆಂಪೋ ವಾಡಿಕೊಂಡು ಕಾರ್ಯಕ್ರಮದ ಸ್ಥಳ ತಲುಪಲು, ಊಟ ತಿಂಡಿ ಸೇರಿದಂತೆ ಇತರೆ ಖರ್ಚು-ವೆಚ್ಚಗಳನ್ನು ಪೂರೈಸಿಕೊಳ್ಳಲು ಸಾಲ ವಾಡಿ ಬಂಡವಾಳ ಹೂಡಬೇಕಾಗುತ್ತದೆ. ಬಳಿಕ ಸಮಿತಿಯವರು ನೀಡುವ ಸಂಭಾವನೆಯತ್ತ ಕಾತರರಾಗಿರುತ್ತಾರೆ. ಆದರೆ ಶ್ರೀರಂಗಪಟ್ಟಣ ದಸರಾದಲ್ಲಿ ಪಾಲ್ಗೊಂಡ ಜನಪದ ಕಲಾವಿದರಿಗೆ ಕೇವಲ ೫ ಸಾವಿರ ರೂ. ಸಂಭಾವನೆ ನೀಡಲು ಮುಂದಾದಾಗ ನಿಜಕ್ಕೂ ಕಲಾವಿದರು ಕೆರಳಿ ನಿಂತರು.
೨೦೦೯ರ ದಸರಾ ಕಾರ್ಯಕ್ರಮದಲ್ಲೂ ಈ ಐದು ಸಾವಿರ ನೀಡಲೂ ಅಲೆದಾಡಿಸಿದ್ದ ಸಮಿತಿ ಈಗಲೂ ಐದು ಸಾವಿರ ನೀಡಲು ಮುಂದಾಗಿದೆ. ಇದು ಯಾವುದಕ್ಕೂ ಸಾಲುತ್ತಿಲ್ಲ. ಆದರೆ, ಬೆಂಗಳೂರು ಮತ್ತಿತರ ದೂರದಿಂದ ಬರುವ ಹಿನ್ನೆಲೆ ಗಾುಂಕರು, ಇತರೆ ಕಲಾವಿದರಿಗೆ ಸ್ಥಳದಲ್ಲೇ ಪೇಮೆಂಟ್ ನೀಡುತ್ತಾರೆ. ಏಕೆ ಈ ತಾರತಮ್ಯ ಎಂಬ ಪ್ರಶ್ನೆಗೆ ಯಾವ ಅ ಧಿಕಾರಿಗಳಿಂದಲೂ ಉತ್ತರವಿಲ್ಲ.
ಸೆ.೨೯ರಂದು ಬೆಳಿಗ್ಗೆ ೯ ಗಂಟೆಗೆ ಶ್ರಿರಂಗ ವೇದಿಕೆ ಬಿಕೋ ಎನ್ನುತ್ತಿತ್ತು. ಆದರೂ ತತ್ವಪದ, ಜಾನಪದಗೀತೆ, ಭಾವಗೀತೆ, ದಾಸರ ಪದಗಳು ಹಾಗೂ ಸಂತಕೆಸಲಗೆರೆ ಶಿವಗಂಗಾ ಸಾಂಸ್ಕೃತಿಕ ಯುವಕರ ಸಂಘದ ಬಸವರಾಜು ಮತ್ತು ತಂಡದಿಂದ ಸಾಂಸ್ಕೃತಿಕ ಹಾಗೂ ಸುಗಮ ಸಂಗೀತ ಕಾರ್ಯಕ್ರಮಗಳಿದ್ದವು. ಆದರೆ ಪ್ರೇಕ್ಷಕರೇ ಇಲ್ಲದೆ ವೇದಿಕೆಯಲ್ಲಿ ಕೇವಲ ೧೦ ನಿಮಿಷದಲ್ಲಿ ಜನಪದ, ಮತ್ತಿತರ ಕಲೆ ಪ್ರದರ್ಶಿಸಿ ಹೋಗಬೇಕಾದ ಪರಿಸ್ಥಿತಿ ಕೂಡ ಜನಪದ ಕಲಾವಿದರನ್ನು ವಿಚಲಿತಗೊಳಿಸಿದೆ.
ಈ ಎಲ್ಲ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರೆ, ಅವರು ಈಗಿನ ಜಿಲ್ಲಾಡಳಿತದಲ್ಲಿ ಯಾವ ನಮ್ಮ ವಾತು ಕೇಳುತ್ತಿಲ್ಲ. ಎಲ್ಲ ಅವರವರ ಮೂಗಿನ ನೇರಕ್ಕೆ ನಡೆದುಕೊಳ್ಳುತ್ತಿದ್ದಾರೆ. ನಾನೂ ನಿಮ್ಮ ಸಮಸ್ಯೆ ಕುರಿತು ಸಮಿತಿ ಗಮನಕ್ಕೆ ತರುತ್ತೇನೆ ಎನ್ನುತ್ತಾರೆ. ಇನ್ನು ಜಿಲ್ಲಾಡಳಿತದ ಮುಖ್ಯಸ್ಥರಾದ ಜಿಲ್ಲಾಧಿಕಾರಿಗಳು ಈಗ ಬಂದಿರುವ ಅನುದಾನದಲ್ಲಿ ಎಲ್ಲವನ್ನೂ ನಿಭಾಯಿಸಲಾಗುತ್ತಿದೆ. ಕಲಾವಿದರ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಕಳಚಿಕೊಳ್ಳುತ್ತಾರೆ. ಇನ್ನು ಶ್ರೀರಂಗಪಟ್ಟಣ ದಸರಾ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ‘ನಿಮಗೆ ಒಂದು ಅವಕಾಶ ಕೊಟ್ಟಿದ್ದೇವಷ್ಟೇ, ಕಾರ್ಯಕ್ರಮಕ್ಕೆ ಇಂತಿಷ್ಟು ಕೊಡುತ್ತೇವೆಂದು ನಾವು ಹೇಳಿಲ್ಲ. ಇಲಾಖೆ ನಿರ್ದೇಶನದಂತೆ ಕಲಾವಿದರಿಗೆ ಸಂಭಾವನೆ ನೀಡಲಾಗುತ್ತಿದೆ’ ಎಂದಿರುವುದು ಸ್ಥಳೀುಂ ಜನಪದರನ್ನು ನಿರಾಶೆಗೊಳಿಸಿದೆ.

—ಹೇಳಿಕೆ—
ಮೈಸೂರು ದಸರಾ ಉತ್ಸವ ಸಮಿತಿಯ ಒಂದೊಂದು ತಂಡಕ್ಕೆ ಕನಿಷ್ಠ ೩೦ ಸಾವಿರ ರೂ. ಸಂಭಾವನೆ ಕೊಡುತ್ತದೆ. ಆದರೆ ಶ್ರೀರಂಗಪಟ್ಟಣದಲ್ಲಿ ಮಂಡ್ಯ ನೆಲದ ಕಲಾವಿದರ ಮೇಲೇಕೆ ಈ ಮಲತಾಯಿ ಧೋರಣೆ ಎಂಬುದು ಅರ್ಥವಾಗುತ್ತಿಲ್ಲ. ಕಲಾವಿದರನ್ನು ನಿಕೃಷ್ಟವಾಗಿ ಕಾಣುವುದು ಸರಿಯಲ್ಲ.
-ನಾಗರಾಜು, ತಡಗವಾಡಿ,

ಕೋಟ್..
ಸ್ಥಳೀಯ ಜನಪದ ಕಲಾವಿದರು ಸಮಸ್ಯೆುಂನ್ನು ಹೇಳಿಕೊಂಡರೆ ಜನಪ್ರತಿನಿಧಿಗಳು, ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ.
ದೊಣ್ಣೆವರಸೆ, ಗಾರುಡಿಗೊಂಬೆ ಇನ್ನಿತರೆ ಕಲಾವಿದರು ಸಾರ್ವಜನಿಕರಿಗೆ ಕಾಣುವುದಿಲ್ಲ. ಆದರೆ ಒಳಗೇ ಬೆವರು ಹರಿಸುತ್ತಾರೆ. ಇಂತವರಿಗೂ ಸಂಭಾವಣೆಯಲ್ಲಿ ವಂಚನೆ ಆಗುತ್ತಿದೆ.
-ಬಸವರಾಜು, ಜಿಲ್ಲಾಧ್ಯಕ್ಷರು, ಜನಪದ ಮತ್ತು ಬೀದಿನಾಟಕ ಕಲಾ ತಂಡಗಳ ಒಕ್ಕೂಟ, ಮಂಡ್ಯ.

ಕೋಟ್..
ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾವನ್ನು ನಡೆಸಲಾಗಿರಲಿಲ್ಲ. ಈ ಬಾರಿ ಅದ್ದೂರಿಯಾಗಿ ಉತ್ಸವ ನಡೆಸಲಾಗುತ್ತದೆಂದು ಹೇಳಿದ್ದ ಜಿಲ್ಲಾಡಳಿತ, ಕಲಾವಿದರಿಗೆ ಯಾವುದೇ ಪ್ರೋತ್ಸಾಹವನ್ನೂ ನೀಡದೆ ನಿರ್ಲಕ್ಷಿಸಿರುವುದು ಸರಿಯಲ್ಲ.
-ವೈರಮುಡಿ, ಹನಿಯoಬಾಡಿ.

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

4 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

6 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

6 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

7 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

8 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

8 hours ago