ಮೈಸೂರು: ಹೊರಗಿನ ವಾತಾವರಣ ಮೊಡ ಕವಿದ ವಾತಾವರಣವಿದ್ದರೂ ಧಾರಾಕಾರವಾಗಿ ಸುರಿದಿದ್ದು ಮಾತ್ರ ಗಾಯಕ ಸೋನು ನಿಗಮ್ ಹಾಗೂ ಡಾ.ಶಮಿತ ಮಲ್ನಾಡ್ ಅವರ ಕಂಠಸಿರಿಯಿಂದ ಬಂದ ಸಂಗೀತದ ಸುರಿಮಳೆ ಹಾಗೂ ಕನ್ನಡ ಚಿತ್ರರಂಗದ ನಟರಾದ ಧ್ರುವ ಸರ್ಜಾರ ಆಗಮನದಿಂದ ಬಂದ ಶಿಳ್ಳೆ, ಚಪ್ಪಾಳೆಗಳಿಂದ.
ನಗರದ ಮಹಾರಾಜ ಮೈದಾನದಲ್ಲಿ 5ನೇ ದಿನದ ಯುವ ದಸರಾದಲ್ಲಿ ಕಂಡುಬಂದ ದೃಶ್ಯ. ಧೃವ ಸರ್ಜಾ ಅವರು ವೇದಿಕೆಯ ಮೇಲೆ ಹೆಜ್ಜೆ ಹಾಕಿ ಬರುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳಿಗಾಗಿ ತಮ್ಮದೆ ಚಿತ್ರದ ಡೈಲಾಗ್ ಹೊಡೆದು ಅಭಿಮಾನಿಗಳನ್ನು ಹುಚ್ಚೆದ್ದು ಕುಣಿದು ಕುಪ್ಪಳಿಸುವಂತೆ ಮಾಡಿದರು.
ನಂತರ ಸೋನು ನಿಗಮ್ ಅವರು ಬರುತ್ತಿದ್ದಂತೆ ಪ್ರತಿಯೊಬ್ಬರೂ ಎದ್ದು ನಿಂತು ಸ್ವಾಗತಿಸಿದರೆ ಸೋನು ನಿಗಮ್ ಅವರು ಹಾಡಿನ ಮೂಲಕವೇ ತಮ್ಮದೆ ಆದ ಸಂಗೀತ ಲೋಕಕ್ಕೆ ಎಲ್ಲರನ್ನು ಕರೆದೊಯ್ದು ರಂಜಿಸಿದರು.
ಕನ್ನಡಿಗರು ಕೇವಲ ನನ್ನ ಅಭಿಮಾನಿಗಳಲ್ಲ. ನನ್ನ ಮನೆಯವರಿದ್ದಂತೆ. ನನಗೂ ಕನ್ನಡಕ್ಕೂ ಹಾಗೂ ಕನ್ನಡಿಗರಿಗೂ ಅವಿನಾಭಾವ ಸಂಬಂದವಿದೆ ಎಂದು ಹೇಳಿ ತಮ್ಮ ಪ್ರೀತಿಯನ್ನು ಎಲ್ಲರ ಮುಂದೆ ವ್ಯಕ್ತಪಡಿಸಿದರು.
ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ, ಗಣೇಶ್ ಚಿತ್ರದ ನೀ ಸನಿಹಕೆ ಬಂದರೆ ಹೃದಯದ ಗತಿ ಏನು ಹೇಳು ನೀನು, ಅನಿಸುತಿದೆ ಯಾಕೋ ಇಂದು ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ, ಪುನೀತ್ ರಾಜ್‍ಕುಮಾರ್ ಅಭಿನಯದ ಪರಮಾತ್ಮ ಚಿತ್ರದ ಪರವಶನಾದೆನು ಅರಿಯುವ ಮುನ್ನವೆ, ಸುದೀಪ್ ಚಿತ್ರದ ಏನಾಗಲಿ ಮುಂದೆ ಸಾಗು ನೀ ಬಯಸಿದ್ದೆಲ್ಲ ಸಿಗದು ಬಾಳಲಿ ಸೇರಿದಂತೆ ಅನೇಕ ಹಾಡುಗಳನ್ನು ಹಾಡಿ ರಸದೌತಣವನ್ನು ಉಣ ಬಡಿಸಿದರು.
ಬೆಳ್ಳಿ ಕಾಲುಂಗುರ ಚಿತ್ರದ ಕೇಳಿಸದೆ ಕಲ್ಲು ಕಲ್ಲಿನಲ್ಲಿ, ಮಹದೇಶ್ವರ ಕುರಿತ ಜಾಪದ ಗೀತೆಯಾದ ಚೆಲ್ಲಿದರೂ ಮಲ್ಲಿಗೆಯಾ ಹಾಡಿಗೆ ಹಾಗೂ ಜೋಗಿ ಚಿತ್ರದ ಏಳು ಮಲೆ ಏರಿ ಕುಂತಾವ್ನೆ ಮಾದೇವ ಹಾಡಿಗೆ, ರಂಗಿತರಂಗ ಚಿತ್ರದ ಹಾಡಿಗೆ ಮತ್ತು ಕೊಡವ ನೃತ್ಯ ಸೇರಿದಂತೆ ಕರ್ನಾಟಕದ ಹಲವಾರು ಸ್ಥಳೀಯ ನೃತ್ಯಗಳನ್ನು ಅಮೋಘವಾಗಿ ಪ್ರದರ್ಶಿಸಿದ ಮೈಸೂರಿನ ಶ್ರೀ ವಾಣಿ ವಿಲಾಸ ಅರಸು ಪ್ರಥಮ ದರ್ಜೆ ಕಾಲೇಜಿನ ತಂಡದವರು ನೆರೆದಿದ್ದ ಜನರನ್ನು ರಂಜಿಸಿದರು.
ಜೀ ಕನ್ನಡ ಖ್ಯಾತಿಯ ಪುರುಷೋತಮ್ ಅವರ ತಂಡದ ಪ್ರೀಯ ಅವರು ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ನಿನ್ನ ನೋಡಿ ಸುಮ್ನೆ ಹೆಂಗಿರಲಿ, ಪುರುಷೋತ್ತಮ್ ಅವರು ಹಾಗೂ ಪ್ರೀಯಾ ಕಿಚ್ಚ ಸುದೀಪ್ ಚಿತ್ರದ ರಾರಾ ರಕ್ಕಮ್ಮ, ಶರಣ್ ಚಿತ್ರದ ಯಕ್ಕ ನಿನ್ ಮಗ್ಳು ನಂಗೆ ಚಿಕ್ಕವಳಬಲ್ವ ಮತ್ತು ಏಕ್ ಲವ್ಯ ಚಿತ್ರದ ಅನಿತಾ ಓ ಅನಿತಾ ಹಾಡನ್ನು ಹಾಡುವುದರ ಜೊತೆಗೆ ಮನಮೋಹಕವಾಗಿ ನರ್ತಿಸಿದರು.
ಜೋಗಿ ಸುನೀತ ಅವರು ಜೋಗಿ ಚಿತ್ರದ ಎಲ್ಲೋ ಜೋಗಪ್ಪ ನಿನ್ ಅರಮನೆ ಹಾಡನ್ನು ಹಾಡಿದರೆ, ಗಣೇಶ್ ಕಾರಂತ್ ಅವರು ರವಿಚಂದ್ರನ್ ಅವರ ಯಾರೇ ನೀನು ರೋಜಾ ಹೂವೆ ಹಾಡನ್ನು ಹಾಡಿದರು. ಬಿಗ್ ಬಾಸ್ ಸ್ಪರ್ಧಿ ಕಿಶನ್ ಅವರು ಕೆ.ಜಿ.ಎಫ್2 ಹಾಗೂ ವಿಕ್ರಾಂತ್ ರೋಣ ಮತ್ತು ಟಗರು ಚಿತ್ರದ ಹಾಡಿಗೆ ಕುಣಿದು ನೋಡುಗರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು.
ರತ್ನನ್ ಪ್ರಪಂಚ ಚಿತ್ರದ ನಟರಾದ ಉಡಾಳ್ ಬಾಬು ಎಂದೆ ಖ್ಯಾತಿ ಪಡೆದ ಪ್ರಮೋದ್ ಅವರು ಮಾತನಾಡಿ, ಮೈಸೂರು ಜನರಿಗೆ ತುಂಬಾ ಎನರ್ಜಿಯಿದ್ದು, ಎಲ್ಲವನ್ನು ಮರೆತು ಒಂದಾಗಿ ಎಲ್ಲಾ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಾರೆ ಎಂದು ಹೇಳಿ ರತ್ನನ್ ಪ್ರಪಂಚ ಚಿತ್ರದ ಡೈಲಾಗ್ ಹೊಡೆದು ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.
ಸಚಿವರು, ಶಾಸಕರು, ಯುವ ದಸರಾದ ಉಪಸಮಿತಿಯ ಅಧ್ಯಕ್ಷ ಕಿರಣ್ ಗೌಡ, ಉಪಾಧ್ಯಕ್ಷ ಬದ್ರೀಶ್, ಡಾ.ನಿಂಗರಾಜು ಸೇರಿದಂತೆ ಇತರರು ಹಾಜರಿದ್ದರು.
ಬೆಂಗಳೂರು: ಕೆಜಿಎಫ್-2 ಯಶಸ್ಸಿನ ನಂತರ ಇಡೀ ದೇಶದ ಕಾತುರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ…
ತುಮಕೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ಚರ್ಚೆ ನಡುವೆಯೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮತ್ತೆ ದಲಿತ ಸಿಎಂ ವಿಚಾರ ಪ್ರಸ್ತಾಪಿಸಿದ್ದಾರೆ.…
ರಾಯಚೂರು: ರಾಯಚೂರು ಪ್ರವಾಸದಲ್ಲಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ.ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…
ಚಾಮರಾಜನಗರ: ಕಳೆದ ಮೂರು ತಿಂಗಳಿನಿಂದಲೂ ಬಂದ್ ಆಗಿದ್ದ ನಾಗರಹೊಳೆ ಹಾಗೂ ಬಂಡೀಪುರ ಸಫಾರಿ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.…
ಹಾಸನ: ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಹನುಮಂತಪುರ ಬಳಿ ನಡೆದಿದೆ. 27 ವರ್ಷ…
ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ತಾಪಮಾನ ಹೆಚ್ಚಾಗಿದ್ದು, ಬಿಸಿಲ ಝಳ ಆರಂಭವಾಗಿದೆ. ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ. ಕರಾವಳಿ…