೧೯೮೦ರ ದಶಕದಲ್ಲಿ ಮೈಸೂರಿನ ಸುತ್ತೂರು ಮಠಕ್ಕೆ ಮೊದಲ ಭೇಟಿ
ಟಿ.ವಿ.ರಾಜೇಶ್ವರ
ತತ್ವಜ್ಞಾನಿ, ಚಿಂತಕ, ಸಿದ್ದೇಶ್ವರ ಸ್ವಾಮೀಜಿ ಅವರು, ನುಡಿದಂತೆ ನಡೆದ ಅಪರೂಪದ ವ್ಯಕ್ತಿತ್ವ ಹೊಂದಿದ್ದವರು. ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಸರಳತೆ, ಬೇರ್ಪಡುವಿಕೆ,ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ಜತೆಗೆ ಪ್ರಬುದ್ಧರಾಗಿದ್ದರು. ಅವರ ಪ್ರವಚನವು ಅವರ ನಿಖರತೆ ಮತ್ತು ಆಕ್ರಮಣಿಕೆಗೆ ಹಾಗೂ ಮನಮುಟ್ಟುವಿಕೆಗೆ ಹೆಸರುವಾಸಿಯಾಗಿದೆ.
೧೯೮೦ರ ದಶಕದಲ್ಲಿ ಅವರು ಮೊದಲ ಬಾರಿಗೆ ಮೈಸೂರಿನ ಸುತ್ತೂರು ಮಠದ ಆಶ್ರಯದಲ್ಲಿ ಸುಮಾರು ೧೫ ದಿನಗಳ ಕಾಲ ಪ್ರವಚನ ನೀಡಿದ್ದರು. ಅಂದು ಮೈಸೂರಿನ ಪ್ರಾದೇಶಿಕ ಪತ್ರಿಕೆಯೊಂದು ಪ್ರತಿದಿನ ಅವರ ಪ್ರವಚನವನ್ನು ಧ್ವನಿಮುದ್ರಿಸಿಕೊಂಡು ಮರುದಿನ ಪತ್ರಿಕೆಯಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿತ್ತು. ಈ ಜವಾಬ್ಧಾರಿಯನ್ನು ಪತ್ರಕರ್ತ ಕೆ.ಎಂ.ವಿಶ್ವನಾಥ್ ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಆ ಪತ್ರಿಕೆಯಲ್ಲಿ ನಾನು ಮುಖ್ಯ ಉಪಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೆ. ಮೊದಲ ಬಾರಿಗೆ ಸಿದ್ದೇಶ್ವರ ಶ್ರೀಗಳನ್ನು ನೋಡುವ ಹಾಗೂ ಅವರ ಪ್ರವಚನವನ್ನು ಕೇಳುವ ಸುಯೋಗ ನನಗೆ ದೊರೆತಿತ್ತು. ಅದನ್ನು ಧ್ವನಿಮುದ್ರಿಸಿ ಪ್ರಕಟಿಸುವ ಜವಾಬ್ಧಾರಿಯೂ ಒಂದು ದಿನ ನನ್ನ ಪಾಲಿಗೆ ಬಂದಿತ್ತು.
ಅವರ ಪ್ರವಚನ ಅತ್ಯಂತ ಮನಮುಟ್ಟುವಂತೆ ಹಾಗೂ ಸರಳವಾಗಿ ಎಂತಹವರಿಗೂ ಅರ್ಥವಾಗುವಂತೆ ಇರುತ್ತಿತ್ತು. ಅದರಲ್ಲಿ ವೈಚಾರಿಕತೆ, ವಾಸ್ತವಿಕತೆ, ಜೀವನ ದರ್ಶನ, ಅಧ್ಯಾತ್ಮ ಎಲ್ಲವೂ ಒಳಗೊಂಡಿರುತ್ತಿತ್ತು.
ಈ ಸಂದರ್ಭದಲ್ಲಿ ಅವರ ಪ್ರವಚನ ನನ್ನ ಮೇಲೆ ಬಹುದೊಡ್ಡ ಪ್ರಭಾವ ಬೀರಿತು. ಅಂದಿನಿಂದ ಮೈಸೂರಿನಲ್ಲಿ ಅವರ ಪ್ರವಚನ ಮುಗಿಯುವವರೆಗೂ ಪ್ರತಿದಿನ ಜೆಎಸ್‌ಎಸ್ ಪದವಿ ಕಾಲೇಜಿನ (ಇಂದಿನ ಜೆಎಸ್‌ಎಸ್ ಹಳೇ ಆಸ್ಪತ್ರೆ) ಆವರಣಕ್ಕೆ ಸಂಜೆ 6ರ ಸುಮಾರಿಗೆ ಹಾಜರಾಗುತ್ತಿದ್ದೆ. ಇಡೀ ಆವರಣ ತುಂಬಿ ತುಳುಕುತ್ತಿತ್ತು. ಸುತ್ತೂರು ಶ್ರೀಗಳು ಸಭಿಕರ ಸಾಲಿನಲ್ಲಿ ಕುಳಿತು ಪ್ರವಚನ ಆಲಿಸುತ್ತಿದ್ದರು. ನಗರದ ಬಹುತೇಕ ಗಣ್ಯರು ಉಪಸ್ಥಿತರಿರುತ್ತಿದ್ದರು. ಈ ಸಂದರ್ಭದ ಪ್ರವಚನದ ಒಂದು ವಿಷಯ ನನಗೆ ಯಾವಾಗಲೂ ನೆನಪಾಗುತ್ತಿರುತ್ತದೆ.
ಜಗತ್ತಿನಲ್ಲಿ ಬೆಲೆ ಕಟ್ಟಲು ಆಗದಿರುವ ವಸ್ತು ಯಾವುದು ಎನ್ನುವುದನ್ನು ಸಿದ್ದೇಶ್ವರ ಶ್ರೀಗಳು ಅತ್ಯಂತ ಸರಳವಾಗಿ ವಿವರಿಸಿ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. ಅವರ ಮಾತಿನಲ್ಲೇ ಹೇಳುವುದಾದರೆ,
‘ಜಗತ್ತಿನಲ್ಲಿ ಎಲ್ಲದಕ್ಕೂ ಬೆಲೆ ಕಟ್ಟಬಹುದು, ಆದರೆ ಒಂದೇ ಒಂದು ವಸ್ತುವಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಅದು ಅವನನ್ನು ಎಲ್ಲವನ್ನೂ ಅರಿಯುವ ವಸ್ತು. ಅದಕ್ಕಾಗಿ ಯಾರಿಂದಲೂ ಬೆಲೆ ಕಟ್ಟಲು ಆಗುವುದಿಲ್ಲ. ಅಂತಹ ವಸ್ತು ಎಲ್ಲಿದೆ..? ಅದು ನಮ್ಮೊಳಗೆೆಯೇ ಇದೆ. ಅದುವೇ ಜ್ಞಾನ. ಜ್ಞಾನದ ಜ್ಯೋತಿಗೆ ಯಾವುತ್ತೂ ಬೆಲೆ ಕಟ್ಟಲು ಆಗಲ್ಲ.
ಒಂದು ಅರಮನೆಗೆ ಬೆಲೆ ಕಟ್ಟಬಹುದು, ಅರಮನೆಯಲ್ಲಿನ ವಸ್ತುಗಳಿಗೆ ಬೆಲೆ ಕಟ್ಟಬಹುದು. ಅಲ್ಲಿರುವ ವಜ್ರ, ವೈಢೂರ್ಯಗಳಿಗೆ ಬೆಲೆ ಕಟ್ಟಬಹುದು. ಆದರೆ ಆ ಅರಮನೆಯಿಂದ ಬೆಳಗುವ ದೀಪಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದು ಅಲ್ಲಿ ಹೊಳೆಯುವ ಜ್ಞಾನದ ಜ್ಯೋತಿಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ.
ಜ್ಞಾನ ಇರುವ ತನಕ ಈ ಶರೀರಕ್ಕೆ ಬೆಲೆ. ನಮ್ಮ ಮನಸ್ಸಿಗೆ ಬೆಲೆ. ನಮ್ಮ ಸಂಪತ್ತಿಗೆ, ಬುದ್ಧಿಗೆ ಬೆಲೆ ಇರುತ್ತದೆ. ಬಡವರ ಮನೆಯ ಮಣ್ಣಿನ ದೀಪ ಆಗಿರಬಹುದು, ಅಥವಾ ಶ್ರೀಮಂತರ ಮನೆಯಲ್ಲಿರುವ ಮುತ್ತು, ರತ್ನಗಳಿಂದ ಮಾಡಿದ ದೀಪವಾಗಿರಬಹುದು. ಅದರಿಂದ ಬರುವ ಜ್ಯೋತಿ ಒಂದೇ. ದೀಪದಿಂದ ಬೆಳಗುವುದು ಜ್ಯೋತಿ ಒಂದೇ. ನಮ್ಮ ಅಂತರಂಗದಲ್ಲಿರುವ ಅರಿವಿಗೆ ತುಂಬಾ ಬೆಲೆ ಇದೆ. ಇದು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನದ ಸಾರಾಂಶ.
ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರವಚನ ಅತ್ಯಂತ ಮನಮುಟ್ಟುವಂತೆ ಹಾಗೂ ಸರಳವಾಗಿ ಎಂತಹವರಿಗೂ ಅರ್ಥವಾಗುವಂತೆ ಇರುತ್ತಿತ್ತು. ಅದರಲ್ಲಿ ವೈಚಾರಿಕತೆ, ವಾಸ್ತವಿಕತೆ, ಜೀವನ ದರ್ಶನ, ಅಧ್ಯಾತ್ಮ ಎಲ್ಲವೂ ಒಳಗೊಂಡಿರುತ್ತಿತ್ತು.
ವಿರಾಜಪೇಟೆ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ರಸ್ತೆಯಲ್ಲಿ…
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಟಾಕ್ಸಿಕ್ ಚಿತ್ರದ ವಿರುದ್ಧ ಮಕ್ಕಳ ಹಕ್ಕುಗಳ…
ಬೆಂಗಳೂರು: ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ದೇಶ ವಿರೋಧ ಘೋಷಣೆ ಕೂಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರು…
ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಮತ್ತು ಅದರ ನಿರೂಪಕ ನಟ ಕಿಚ್ಚ ಸುದೀಪ್ ವಿರುದ್ಧ…
ಹಾಸನ: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ…
ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…