ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿರಂಗನಬೆಟ್ಟ ದಕ್ಷಿಣ ಕರ್ನಾಟಕದ ಜನಪ್ರಿಯ ಪುಣ್ಯಕ್ಷೇತ್ರಗಳಲ್ಲೊಂದು. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನಲ್ಲಿರುವ ಈ ಪುಣ್ಯಕ್ಷೇತ್ರ ದಟ್ಟ ಅರಣ್ಯದ ನಡುವೆ ಇದ್ದು, ಅದನ್ನು ಹುಲಿ ಸಂರಕ್ಷಣಾ ವಲಯ ಎಂದೂ ಸಹ ಘೋಷಿಸಲಾಗಿದೆ.
ಬಿಳಿರಂಗನಬೆಟ್ಟದಲ್ಲಿ ಹುಲಿ ಮಾತ್ರವಲ್ಲದೇ ಆನೆ, ಜಿಂಕೆ ಮುಂತಾದ ವನ್ಯಜೀವಿಗಳ ಹಿಂಡೇ ಇದ್ದು, ದೇವಸ್ಥಾನಕ್ಕೆ ತೆರಳುವ ಹಾದಿಯಲ್ಲಿ ಈ ಪ್ರಾಣಿಗಳು ಕಣ್ಣಿಗೆ ಬೀಳಲಿದ್ದು, ಪುಣ್ಯಕ್ಷೇತ್ರದ ಜತೆ ಒಂದೊಳ್ಳೆ ಫಾರೆಸ್ಟ್ ಜೋನ್ ಸಹ ಇದಾಗಿದೆ. ಇನ್ನು ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆಯನ್ನು ತಪ್ಪಿಸಲು ಇದೀಗ ಅರಣ್ಯ ಅಧಿಕಾರಿಗಳು ಹೊಸ ಯೋಜನೆಯನ್ನು ಹೆಣೆದಿದ್ದಾರೆ.
ಹೌದು, ಬಿಳಿರಂಗನಬೆಟ್ಟ ಪ್ರವೇಶಿಸುವಾಗ ಆರಂಭದಲ್ಲಿ ಸಿಗುವ ಚೆಕ್‌ಪೋಸ್ಟ್‌ನಲ್ಲಿ ಇನ್ನುಮುಂದೆ ಪ್ರತಿ ವಾಹನಕ್ಕೂ ಪ್ರತ್ಯೇಕ ಪಾಸ್ ಅನ್ನು ನೀಡಲಾಗಲಿದ್ದು, ಅದೇ ಪಾಸನ್ನು ದೇವಸ್ಥಾನದ ಬಳಿ ಸಿಗುವ ಎರಡನೇ ಚೆಕ್ ಪೋಸ್ಟ್‌ನಲ್ಲಿ ಸಹ ಪ್ರಯಾಣಿಕರು ಎಂಟ್ರಿ ಮಾಡಿಸಬೇಕಿದೆ. ಇದರಿಂದ ಎಷ್ಟು ಜನ ಒಳಗೆ ಹೋಗಿದ್ದಾರೆ ಹಾಗೂ ಎಷ್ಟು ಜನ ಹೊರಬಂದಿದ್ದಾರೆ ಎಂಬ ಸ್ಪಷ್ಟತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಲಭಿಸಲಿದ್ದು, ಮೃಗಬೇಟೆಗಾರನ್ನು ತಡೆಯಲು ಈ ಪ್ಲಾನ್ ಮಾಡಲಾಗಿದೆ.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…