೫೪.೧೫ ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಕಾಮಗಾರಿ
ಚಾಮರಾಜನಗರ: ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ ೩೫ ಶಾಲೆಗಳ ಪೈಕಿ ೪ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ದುರಸ್ತಿ ಹಾಗೂ ಅವಶ್ಯಕ ಕಟ್ಟಡ ನಿರ್ವಾಣಕ್ಕೆ ಶಿಕ್ಷಣ ಇಲಾಖೆ ೫೫.೧೫ಲಕ್ಷ ರೂ. ಬಿಡುಗಡೆ ವಾಡಿದ್ದು ಕಾಮಗಾರಿ ಪ್ರಗತಿುಂಲ್ಲಿದೆ. ಮಧುವನಹಳ್ಳಿ ಶಾಲೆ ಕಾಮಗಾರಿ ಅದಾಗಲೇ ಪೂರ್ಣಗೊಂಡಿದೆ.
ಈ ಶಾಲೆಗಳಿಗೆ ಏನೇನು ಅವಶ್ಯಕತೆ ಇದೆ ಎಂಬುದರ ಅಂದಾಜು ಪಟ್ಟಿ ತರಿಸಿಕೊಂಡು ಇದರ ಆಧಾರದ ಮೇಲೆ ಅನುದಾನ ಹಂಚಿಕೆ ವಾಡಿ ಕಾಮಗಾರಿ ನಿರ್ವಹಣೆಯನ್ನು ಜಿಪಂ ಇಂಜಿನಿಯರಿಂಗ್ ವಿಭಾಗಕ್ಕೆ(ಪಿಆರ್‌ಇಡಿ) ವಹಿಸಲಾಗಿದೆ.
ಕೊಳ್ಳೇಗಾಲ ತಾಲ್ಲೂಕು ಮಧುವನಹಳ್ಳಿ ಶಾಲೆಗೆ ೧೫ಲಕ್ಷ ರೂ., ಗುಂಡ್ಲುಪೇಟೆ ಟೌನ್ ಶಾಲೆಗೆ ೧೫ಲಕ್ಷ ರೂ., ಚಾಮರಾಜನಗರ ತಾ. ಉಮ್ಮತ್ತೂರು ಶಾಲೆಗೆ ೧೬.೫೦ಲಕ್ಷ ರೂ. ಹಾಗೂ ಹನೂರು ತಾಲ್ಲೂಕು ರಾವಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೭.೬೫ಲಕ್ಷ ರೂ. ಅನುದಾನ ನೀಡಲಾಗಿದೆ. ೧೦೦ವರ್ಷ ಪೂರೈಸಿರುವ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಲು ಕರ್ನಾಟಕ ಸರ್ಕಾರ ೨೦೨೧-೨೨ನೇ ಸಾಲಿನಲ್ಲಿ ಮುಂದಾಗಿದ್ದು ಇದರಡಿ ಬಿಡುಗಡೆಯಾಗಿರುವ ಅನುದಾನದಿಂದ ಆದ್ಯತೆ ಮೇರೆಗೆ ಈ ೪ಶಾಲೆಗಳನ್ನು ಆಯ್ಕೆಮಾಡಲಾಗಿದೆ.
ಮೂಲಸ್ವರೂಪಕ್ಕೆ ಧಕ್ಕೆ ಆಗದಂತೆ ಈ ಶಾಲಾ ಹಳೆಯ ಕಟ್ಟಡಗಳನ್ನು ಸಾಧ್ಯವಾದಷ್ಟು ಹಾಗೆೆಯೇ ಉಳಿಸಿಕೊಂಡು ಕಾಮಗಾರಿ ನಡೆಸುವ ಉದ್ದೇಶ ಹೊಂದಲಾಗಿದೆ.
ಹಳೆ ಕಟ್ಟಡಗಳಾದ್ದರಿಂದ ಶಿಥಲಾವಸ್ಥೆ ತಲುಪಿದ್ದವು. ನೆಲ-ಗೋಡೆಗಳ ಗಾರೆ ಕಿತ್ತು ಬಂದಿತ್ತು. ಮೇಲ್ಛಾವಣಿ ಹಾಳಾಗಿ ಮಳೆ ನೀರು ಸೋರಿಕೆಾಂಗುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕೂ ಶಾಲೆಗಳ ನವೀಕರಣಕ್ಕೆ ಮುಂದಾಗಲಾಗಿದೆ.
ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಜಿಲ್ಲಾ ಖನಿಜ ಪ್ರತಿಷ್ಠಾನ(ಡಿಎಂಎಫ್) ಶಾಸನಬದ್ಧ ಸಂಸ್ಥೆಯ ಮೂಲಕವೂ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯ ನಡೆಯುತ್ತಿದೆ.
ಗುಂಡ್ಲುಪೇಟೆ ತಾಲ್ಲೂಕು ಹಸಗೂಲಿ ಶಾಲೆಗೆ ೨೬.೫೦ಲಕ್ಷ ರೂ. ಡಿಎಂಎಫ್ ನಿಧಿಯಿಂದ ಮೂಲಭೂತ ಸೌಲಭ್ಯ, ಕಟ್ಟಡ ನವೀಕರಣ ಕೆಲಸವನ್ನು ಈ ಹಿಂದೆೆಯೇ ನಿರ್ಮಿತಿ ಕೇಂದ್ರದ ಮೂಲಕ ವಾಡಲಾಗಿದೆ. ಇದೇ ರೀತಿ ನಂಜೇದೇವನಪುರ, ವೀರನುಪುರ, ಕಟ್ನವಾಡಿ, ಹೆಗ್ಗೊಠಾರ, ಕೊತ್ತಲವಾಡಿ ಸರ್ಕಾರಿ ಶಾಲೆಗಳಿಗೂ ಮೂಲಸೌಕರ್ಯ ಒದಗಿಸುವ, ಅಗತ್ಯ ಇದ್ದರೆ ಹೆಚ್ಚುವರಿ ಕಟ್ಟಡ ನಿರ್ಮಿಸು ಕಾಮಗಾರಿಯನ್ನು ಡಿಎಂಎಫ್‌ನಿಂದ ಕೈಗೆತ್ತಿಕೊಳ್ಳಲು ಕ್ರೀಯಾಯೋಜನೆಯನ್ನು ಸಿದ್ದಪಡಿಸಿದ್ದು ಕಾಮಗಾರಿ ಆರಂಭವಾಗುವ ಹಂತದಲ್ಲಿ ಇರುವುದಾಗಿ ಇಲಾಖೆ ಮೂಲಗಳು ತಿಳಿಸಿವೆ.
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿ ಬಾಧಿತ ಆಗಿರುವ ಪ್ರದೇಶದ ಗ್ರಾಮಗಳಲ್ಲಿ ಡಿಎಂಎಫ್ ನಿಧಿಯನ್ನು ವಿನಿಯೋಗಿಸಲಾಗುತ್ತದೆ. ಈ ಹಿಂದೆಯೂ ೫೦.೫೦ಲಕ್ಷ ರೂ. ಡಿಎಂಎಫ್ ನಿಧಿಬಳಸಿ ೨೮ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್, ವಿಜ್ಞಾನ ಪ್ರೋಯೋಗಾಲಯ ಇತ್ಯಾದಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೋಬ್ಬರು ವಾಹಿತಿ ನೀಡಿದರು.
೪ ಶತವಾನೋತ್ಸವ ಶಾಲೆಗಳ ಪೈಕಿ ಮಧುವನಹಳ್ಳಿ ಶಾಲೆ ಕಾಮಗಾರಿ ಮುಗಿದಿದ್ದು ಉಳಿದ ಮೂರು ಶಾಲೆಗಳ ಕಾಮಗಾರಿುಂನ್ನು ಇನ್ನು ೩ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು.
–ಇಬ್ರಾಹಿಂ, ಕಾರ್ಯನಿರ್ವಾಹಕ ಇಂಜಿನಿಯರ್. ಪಿಆರ್‌ಇಡಿ.
೧೦೦ವರ್ಷ ಪೂರೈಸಿರುವ ನಾಲ್ಕು ಶಾಲೆಗಳಲ್ಲಿ ಅವಶ್ಯಕ ಕಾಮಗಾರಿ ಕೈಗೊಳ್ಳಲು ೫೪.೧೫ಲಕ್ಷ ರೂ. ಬಿಡುಗಡೆಯಾಗಿದೆ.
-ಮಂಜುನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…