ಜಿಲ್ಲೆಗಳು

ಸಾವರ್ಕರ್ ಅವರ ದೇಶಪ್ರೇಮ, ತತ್ವ ಆದರ್ಶಗಳು ಅನುಕರಣೀಯ : ಜನ ಧ್ವನಿ ಬಿ.ವೆಂಕಟೇಶ್

ಹನೂರು: ಬಾಲ್ಯದಿಂದಲೇ ಅಪಾರವಾದ ದೇಶಭಕ್ತಿಯನ್ನು ಹೊಂದಿದ್ದ ಸಾವರ್ಕರ್ ಅಂಥ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ದಿಸೆಯಲ್ಲಿ ಬಿಜೆಪಿ ಸಾವರ್ಕರ್ ರಥಯಾತ್ರೆಯನ್ನು ಕೈಗೊಂಡಿರುವುದು ಶ್ಲಾಘನೀಯ ವಿಚಾರ ಎಂದು ಬಿಜೆಪಿ ಜಿಲ್ಲಾ ಒಬಿ ಸಿ ಸಂಯೋಜಕ ಜನ ಧ್ವನಿ ಬಿ.ವೆಂಕಟೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಕೌದಳ್ಳಿ ಜಿಪಂ ಕ್ಷೇತ್ರಕ್ಕೆ ಆಗಮಿಸಿದ ಸಾವರ್ಕರ್ ರಥಯಾತ್ರೆಯನ್ನು ಜ್ಯೋತಿಪುರದಲ್ಲಿ ಸ್ವಾಗತಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಕೆಲವು ಮಹನೀಯರ ಪರಿಚಯ ಇಂದಿನ ಪೀಳಿಗೆಗೆ ಅತ್ಯವಶ್ಯಕವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಸಾವರ್ಕರ್ ಅವರ ದೇಶಪ್ರೇಮ, ತತ್ವ ಆದರ್ಶಗಳು ಅನುಕರಣೀಯ ಎಂದರು.

ಅದ್ದೂರಿ ಸ್ವಾಗತ : ಕೌದಳ್ಳಿ ಸಮೀಪದ ಜ್ಯೋತಿಪುರ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿ.ವೆಂಕಟೇಶ್ ನೇತೃತ್ವದಲ್ಲಿ ಸಾವರ್ಕರ್ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು.ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಬಿಜೆಪಿ ಹಾಗೂ ಕೇಸರಿ ಬಾವುಟ ಹಾಗೂ ಸಾರ್ವರ್ಕರ್ ಭಾವಚಿತ್ರವನ್ನು ಪ್ರದರ್ಶಿಸುತ್ತಾ, ಸಾರ್ವರ್ಕರ್ ಅವರ ಭಾವಚಿತ್ರಕ್ಕೆ ಹೂಮಳೆಗೈದು ಅಪಾರ ಸಂಖ್ಯೆಯ ಕಾರ್ಯಕರ್ತರು ರಥಯಾತ್ರೆಯನ್ನು ಬರಮಾಡಿಕೊಂಡರು.
ಮಳೆಯನ್ನೂ ಲೆಕ್ಕಿಸದ ಬಿಜೆಪಿಗರು: ಬಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀ ಪ್ರತಾಪ್ ಸೇರಿದಂತೆ ಅನೇಕರು ಮಳೆಯನ್ನು ಲೆಕ್ಕಿಸದೆ ಸಾರ್ವರ್ಕರ್ ಅವರ ಯಶೋಗಾಥೆಯನ್ನು ಸಾರುವ ಕುರಿತಾದ ವಿಡಿಯೋ ಸಂದೇಶವನ್ನು ಬೃಹತ್ ಪರದೆ ಮೂಲಕ ವೀಕ್ಷಿಸಿದರು. ಸ್ವತಹ ಬಿ.ವೆಂಕಟೇಶ್ ಅವರೇ ನೆರೆದಿದ್ದ ಕಾರ್ಯಕರ್ತರಿಗೆ ಉಪಹಾರವನ್ನು ಬಡಿಸುವ ಮೂಲಕ ಕಾರ್ಯಕರ್ತರ ಖುಷಿಯನ್ನು ದುಪ್ಪಟಗೊಳಿಸಿದರು.

ಈ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷರಾದ ಜಯಸುಂದರ್, ಹನೂರು ಮಂಡಲ ಒಬಿಸಿ ಮೋರ್ಚಾ ಅಧ್ಯಕ್ಷರಾದ ಕೃಷ್ಣಪ್ಪ, ಮಹದೇಶ್ವರ ಮಂಡಲ ಮಹಿಳಾ ಅಧ್ಯಕ್ಷರಾದ ಮೀನಾ, ಹನೂರು ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷರಾದ ರಾಜೇಶ್, ಮಹದೇಶ್ವರ ಬೆಟ್ಟ ಯುವ ಮೋರ್ಚಾ ಅಧ್ಯಕ್ಷರಾದ ಚಂದ್ರು, ಕುರಟ್ಟಿ ಹೊಸೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಟರಾಜು, ಗ್ರಾಮ ಪಂಚಾಯತಿ ಸದಸ್ಯರುಗಳಾದ ವರಪ್ರಸಾದ್, ರಾಜಪ್ಪ, ಜಬಿವುಲ್ಲಾ, ಮಂಜು, ಸತ್ಯಗಾಲ ಉಮೇಶ್, ತಮ್ಮಯ್ಯ ಶೆಟ್ಟಿ, ಸಿಂಗನಲ್ಲೂರು ಮರಿಸ್ವಾಮಿ, ಮುಖಂಡರಾದ ಶಿವಪ್ಪ, ಕಾಮಗೆರೆ ಸುರೇಶ್, ಶಿವಣ್ಣ. ನಾಗರಾಜು, ಜಿನಕನಹಳ್ಳಿ ಮಹೇಶ್, ಪುಟ್ಟಸ್ವಾಮಿ, ಕೌದಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಸದಸ್ಯರಾದ ಸದಸ್ಯರು ಹಾಗೂ ಕೌದಳ್ಳಿ ಗ್ರಾಮಸ್ಥರು ಹಾಜರಿದ್ದರು.

andolanait

Recent Posts

ಡಿ.26ರಿಂದ ಕೊಡವ ಹಾಕಿ ಚಾಂಪಿಯನ್ ಟ್ರೋಫಿ

ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…

23 mins ago

ಡಿ.21ರಿಂದ ಅರಮನೆ ಅಂಗಳದಲ್ಲಿ ಫಲಪುಷ್ಪ ಪ್ರದರ್ಶನ

ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು…

32 mins ago

ಪುಕ್ಕಟೆ ಪಾರ್ಕಿಂಗ್ ಮಾಡಬೇಕೆ? ಇಲ್ಲಿಗೆ ಬನ್ನಿ!

ಎಸ್.ಎಸ್.ಭಟ್ ಹಾಗಂತ ಇಲ್ಲಿ ಫಲಕ ಹಾಕಿಲ್ಲ, ವಾಹನ ನಿಲ್ಲುವುದು ತಪ್ಪುತ್ತಿಲ್ಲ; ಇದು ನಂಜನಗೂಡಿನ ತಾಯಿ-ಮಕ್ಕಳ ಆಸ್ಪತ್ರೆ ಆವರಣದ ಸ್ಥಿತಿ ನಂಜನಗೂಡು:…

39 mins ago

ಮನ್ರೆಗಾ ಓಕೆ… ವಿಬಿ ಜೀ ರಾಮ್ ಜೀ ಯಾಕೆ?

ಮೈಸೂರು: ಕೇಂದ್ರದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ…

45 mins ago

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

12 hours ago