ಗೋಣಿಕೊಪ್ಪ: ಹಾತೂರು ಗ್ರಾಮದಲ್ಲಿ ಕಡವೆ ಬೇಟೆ ಮಾಡಿರುವ ಪ್ರಕರಣದಲ್ಲಿ ಸೋಮವಾರ ೬೦ ಕೆ.ಜಿ. ಕಡವೆ ಮಾಂಸ ವಶ ಪಡಿಸಿಕೊಂಡಿದ್ದು, ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಕಡವೆಯನ್ನು ಕೊಂದು ಮಾಂಸ ಮಾರಾಟಕ್ಕೆ ಮುಂದಾಗಿದ್ದ ಸಂದರ್ಭ ಸ್ಥಳಕ್ಕೆ ವಿರಾಜಪೇಟೆ ಅರಣ್ಯ ವಲಯದ ಕಾರ್ಯಾಚರಣೆ ತಂಡ ದಾಳಿ ಮಾಡಿದೆ. ಈ ಸಂದರ್ಭ ೬೦ ಕೆಜಿ ಮಾಂಸ ವಶಪಡಿಸಿಕೊಂಡಿದ್ದು, ಪ್ರಕರಣದಲ್ಲಿ ಮನೆ ಮಾಲೀಕ ಕೊಕ್ಕಂಡ ಸತ್ಯುಂಜಯ ಹಾಗೂ ಗೋಣಿಕೊಪ್ಪ ನಿವಾಸಿ ಶರಣು ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆಗೆ ಪೊನ್ನಂಪೇಟೆ ಆರ್‌ಎಫ್‌ಒ ಶಂಕರ ಅವರಿಗೆ ಹಸ್ತಾಂತರಿಸಲಾಗಿದೆ.
ವಿರಾಜಪೇಟೆ ಡಿಸಿಎಫ್ ವೈ. ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ಕೊಚ್ಚೆರ ಎ. ನೆಹರು, ಆರ್‌ಎಫ್‌ಒ ಕಳ್ಳಿರ ದೇವಯ್ಯ, ಡಿಆರ್‌ಎಫ್‌ಒ ಶ್ರೀಶೈಲ ಮಾಲಿಗೌಡ್ರ, ದೇಯಂಡ ಸಂಜಿತ್ ಸೋಮಯ್ಯ, ಸಿಬ್ಬಂದಿ ಸಿ. ಅರುಣಾ, ಮಾಲತೇಶ್ ಬಡಿಗೇರ್, ಚಂದ್ರಶೇಖರ ಅಮರಗೋಳ, ಅಶೋಕ, ಆರ್‌ಆರ್‌ಟಿ ಸಿಬ್ಬಂದಿ ಅನಿಲ್, ವಿಕಾಸ್, ಸುರೇಶ, ಮಹೇಶ್, ನಾಚಪ್ಪ, ಮುರುಗನ್, ಮಂಜು, ಸಚಿನ್, ವಿನೋದ್, ವಿನು, ಅಚ್ಚಯ್ಯ ಇದ್ದರು.
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…
ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ರೂ. ಮೊತ್ತದ 10 ಪ್ರಸ್ತಾವನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ…
ಮೈಸೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದು…