ಜಿಲ್ಲೆಗಳು

ಸಾದಿಕ್ ಉಲ್ಲಾ ಖಾನ್ ಗಾಂಧಿಯಾದಾಗ

ಚಾಮರಾಜನಗರ: ನಗರದ ಮುಸ್ಲಿಂ ಸಮುದಾಯದ ಸಾದಿಕ್ ಉಲ್ಲಾ ಖಾನ್ ಎಂಬ ಯುವಕ ಕಳೆದ ೫ ವರ್ಷಗಳಿಂದ ರಾಷ್ಟ್ರೀಯ ಹಬ್ಬಗಳಲ್ಲಿ ಗಾಂಧೀಜಿಯ ವೇಷಧಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ನಗರದ ೫ನೇ ವಾರ್ಡ್ ನ ನಿವಾಸಿ ಜಬ್ಬಾರ್ ಖಾನ್ ಹಾಗೂ ಸಲ್ಮಾ ಬಾನು ಅವರ ಪುತ್ರನಾದ ಸಾದಿಕ್ ಉಲ್ಲಾ ಖಾನ್ ಬಂಜಾರಾ ಶಾಲೆಯಲ್ಲಿ ೬ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ೭೫ ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಅವರ ವೇಷಧಾರಿಯಾಗಿ ಎಲ್ಲರ ಗಮನ ಸೆಳೆದಿದ್ದಾನೆ. ಸ್ವಯಂ ಪ್ರೇರಿತರಾಗಿ ಗಾಂಧೀಜಿಯ ವೇಷಧಾರಿಯಾಗಿರುವ ಸಾದಿಕ್ ನನ್ನು ಈ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ವೇದಿಕೆಯಲ್ಲಿ ಸನ್ಮಾನಿಸಿದರು.

೫ ವರ್ಷಗಳಿಂದ ಬಣ್ಣ ಹಚ್ಚುವ ಯುವಕ:

ನಗರದಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವ ಮುಸ್ಲಿಂ ಸಮುದಾಯದ ಜಬ್ಬರ್ ಖಾನ್ ಕುಟುಂಬ ದೇಶಭಕ್ತಿಯ ಕುರುಹಾಗಿ ಕಳೆದ ೫ ವರ್ಷಗಳಿಂದಲೂ ಮಗನಿಗೆ ಬಣ್ಣ ಹಚ್ಚುತ್ತಾ ಬಂದಿದ್ದು ನಮ್ಮ ದೇಹದ ನರನಾಡಿಗಳಲ್ಲಿ ಈ ದೇಶದ ಅಭಿಮಾನ ತುಂಬಿಕೊಂಡಿದೆ. ಆ ಕಾರಣಕ್ಕಾಗಿಯೇ ನನ್ನ ಮಗನಿಗೆ ವಿವಿಧ ರಾಷ್ಟ್ರೀಯ ನಾಯಕರು ಹಾಗೂ ಹೋರಾಟಗಾರರ ವೇಷಧರಿಸಿ ಈಗೇ ಖುಷಿ ಪಡುತ್ತೇವೆ ಎಂದು ಜಬ್ಬಾರ್ ಖಾನ್ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ವಿವಿಧ ವೇಷಧಾರಿ:

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಗಾಂಧೀಜಿಯ ವೇಷಧಾರಿಯಾಗುವ ಸಾದಿಕ್ ಕೃಷ್ಣ ಜನ್ಮಾಷ್ಟಮಿಯ ದಿನ ಕೃಷ್ಣನ ವೇಷ ಧರಿಸಿ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಅದಲ್ಲದೇ ದೇಶಪ್ರೇಮಿ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ್, ಅಂಬೇಡ್ಕರ್ ಹಾಗೂ ಇತರೆ ರಾಷ್ಟ್ರ ನಾಯಕರ ವೇಷ ಧರಿಸಿ ಎಲ್ಲರ ಗಮನ ಸೆಳೆಯುವ ಸಾದಿಕ್ ಓದಿನಲ್ಲೂ ಮುಂದಿದ್ದು, ಹಲವಾರು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಬೇಷ್ ಎನಿಸಿಕೊಂಡಿದ್ದಾನೆ.

andolanait

Recent Posts

ಮಹಾರಾಷ್ಟ್ರದಲ್ಲಿ ಘೋರ ದುರಂತ: ಕಾರು ಬಾವಿಗೆ ಬಿದ್ದು ಒಂದೇ ಕುಟುಂಬದ 9 ಮಂದಿ ಸಾವು

ನಾಸಿಕ್:‌ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವಾರ್ಷಿಕ…

15 mins ago

ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಆರೋಪ ಪ್ರಕರಣ: ಆರೋಪಿ ವಿರುದ್ಧ ಕ್ರಮಕ್ಕೆ ಸೂಚನೆ ಎಂದ ಸಚಿವ ಪರಮೇಶ್ವರ್‌

ದಾವಣಗೆರೆ: ಹುಬ್ಬಳ್ಳಿಯಲ್ಲಿ ಜಿಮ್‌ ಟ್ರೈನರ್‌ ವಿರುದ್ಧ ಲವ್‌ ಜಿಹಾದ್‌ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು,…

35 mins ago

ಎಲ್‌ಪಿಜಿ ಗ್ಯಾಸ್‌ ಸಮಸ್ಯೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ

ಕೊಪ್ಪಳ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಆಟೋ ಎಲ್‌ಪಿಜಿ ಗ್ಯಾಸ್‌ ಸಮಸ್ಯೆ ಉಂಟಾಗಿದ್ದು, ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದೇ ನಮ್ಮ ಧರ್ಮ…

56 mins ago

ಧೋನಿ, ಕಪಿಲ್‌ ದೇವ್‌ಗೆ ಕ್ಷಮೆ ಕೇಳಿದ ಯುವರಾಜ್‌ ಸಿಂಗ್‌

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಭಾರತದ ವಿಶ್ವಕಪ್‌ ವಿಜೇತ ನಾಯಕರುಗಳಾದ ಮಹೇಂದ್ರ ಸಿಂಗ್‌ ಧೋನಿ ಹಾಗೂ ಕಪಿಲ್‌…

1 hour ago

ರಾಜ್ಯದಲ್ಲಿ ಇಂದು ಕೂಡ ಮುಂದುವರಿಯಲಿದೆ ಮಳೆ ಆರ್ಭಟ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ…

2 hours ago

ಕಬಿನಿ ಹಿನ್ನೀರಿನಲ್ಲಿ ಯಂಗ್ ಟೈಗರ್‌ ಕೂಲ್‌ ಕೂಲ್‌

ಎಚ್.ಡಿ.ಕೋಟೆ: ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ನೀರಿನಲ್ಲಿ ಮುಳುಗಿ ವಿಶ್ರಮಿಸುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ. ರಾಜ್ಯದಲ್ಲಿ ದಿನದಿಂದ…

2 hours ago