ಜಿಲ್ಲೆಗಳು

ಮೈಸೂರು ಮೃಗಾಲಯ : ರಿಂಗ್‌ ಟೈಲ್ಡ್‌ ಲೆಮುರ್‌ ಪ್ರಾಣಿಗಳಿಗಾಗಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ರಿಂಗ್‌ ಟೈಲ್ಡ್‌ ಲೆಮುರ್‌

ಮೈಸೂರು : ಅಳಿವಿನಂಚಿನಲ್ಲಿರುವ ಮನುಷ್ಯ ಜಾತಿಯ ಪ್ರಾಣಿ ರಿಂಗ್‌ ಟೈಲ್ಡ್‌ ಲೆಮುರ್‌ ಪ್ರಾಣಿಗಳಿಗಾಗಿ ಅವುಗಳ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣಕ್ಕಾಗಿ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿಂದು BRBNMPL ( ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟ್‌ ಮುದ್ರಣ ಪ್ರೈ ಲಿ ಮೈಸೂರು ಇವರ CSR ನಿಧಿಯಿಂದ ಕೊಡುಗೆಯಾಗಿ 75.00 ಲಕ್ಷಗಳನ್ನು ನೀಡಲಾಗಿದ್ದು. ಪ್ರಾಣಿಗಳ ಮನೆ ನಿರ್ಮಾಣಕ್ಕಾಗಿ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಶಿವಕುಮಾರ್‌, ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಪಿ ರವಿ, BRBNMPL  ಉಪ ಪ್ರಧಾನ ವ್ಯವಸ್ಥಾಪಕ ಹರ್ಷಕುಮಾರ್‌ ಮನ್ರಾಲ್‌, ಸಹಾಯಕ ಪ್ರಧಾನ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ದಾಸ್‌, ಸದಸ್ಯರಾದ ಜ್ಯೋತಿ ರೇಚಣ್ಣ, ಅಖಿಲೇಶ್ವರ್‌ ರೆಡ್ಡಿ, ಎಂ ಪಿ ರವಿ ಉಪಸ್ಥಿತಿರದ್ದು.
ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳ ಉಳಿವಿಗಾಗಿ ಕಾಳಜಿ ತೋರಿದ BRBNMPL ನ ಎಲ್ಲರಿಗೂ ಮೃಗಾಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜೀತ ಕುಲಕರ್ಣಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ರಿಂಗ್-ಟೇಲ್ಡ್ ಲೆಮರ್‌ಗಳು ನೈಋತ್ಯ ಮಡಗಾಸ್ಕರ್‌ನಲ್ಲಿ ವಾಸಿಸುತ್ತವೆ, ಉಂಗುರ ಬಾಲದ ಲೆಮೂರ್ (ಲೆಮುರ್ ಕ್ಯಾಟ್ಟಾ) IUCN ರೆಡ್ ಲಿಸ್ಟ್‌ನಲ್ಲಿ ಅಳಿವಿನಂಚಿನಲ್ಲಿರುವಂತೆ ಪಟ್ಟಿಮಾಡಲಾಗಿದೆ ಈ ಲೆಮರ್ ಒಣ ಕಾಡುಗಳು, ಸ್ಪೈನಿ ಪೊದೆಗಳು, ಮಲೆನಾಡಿನ ಕಾಡುಗಳು, ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.

 

andolanait

Recent Posts

ಓದುಗರ ಪತ್ರ: ಅರ್ಹರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಿ

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸುತ್ತದೆ. ಈ…

4 mins ago

ಚಾ. ಬೆಟ್ಟಕ್ಕೆ ಗಂಡಾಂತರ ತರುವ ಕಟ್ಟಡಗಳ ನಿರ್ಮಾಣ ನಿಲ್ಲಿಸಿ

ಮೈಸೂರು: ಚಾಮುಂಡಿಬೆಟ್ಟದ ಸುತ್ತಮುತ್ತ ಇದೀಗ ಬೆಟ್ಟದ ಅಸ್ತಿತ್ವಕ್ಕೆ ಗಂಡಾಂತರ ತರುವ ರೀತಿಯಲ್ಲಿ ಸುಮಾರು ೮ ಅಂತಸ್ತಿನ ಕಾಂಕ್ರೀಟ್ ಕಟ್ಟಡಗಳು ತಲೆ…

15 mins ago

ಚಲನಚಿತ್ರ ವಿಮರ್ಶೆಗಳ ಹೆಸರಿನ ಅನಿಸಿಕೆಗಳೂ ಚಿತ್ರೋದ್ಯಮವೂ

ಇದು ಕಳೆದ ಒಂದು ವರ್ಷದಿಂದೀಚಿನ ಬೆಳವಣಿಗೆ. ಬೇರೆ ರಾಜ್ಯಗಳಲ್ಲಿ ಇದು ನಡೆದಿತ್ತೋ ಏನೋ ಮಾಹಿತಿ ಇಲ್ಲ. ಆದರೆ ಕೇರಳದಲ್ಲಿ ಈ…

38 mins ago

ಜಂಬೂಸವಾರಿ ಮುಗಿದಿದೆ; ʼಅಂಬಾರಿʼಗೆ ಬೇಡಿಕೆ ಏರಿದೆ!

ಮೈಸೂರು: ದಸರಾ ಹಬ್ಬ ಮುಗಿದಿದೆ... ಚಿನ್ನದ ಅಂಬಾರಿ ಹೊತ್ತ ಜಂಬೂಸವಾರಿಯೂ ಸಂಪನ್ನವಾಗಿದೆ. ಆದರೆ, ನಗರದಲ್ಲಿ ಈಗಲೂ ‘ಅಂಬಾರಿ’ಯೊಂದರಲ್ಲಿ ಸಂಚರಿಸಲು ಪ್ರವಾಸಿಗರು…

57 mins ago

ಮಂಡ್ಯ ಟು ಇಂಡಿಯಾ: ಬೃಹತ್‌ ಉದ್ಯೋಗ ಮೇಳ

ಮಂಡ್ಯ: ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು ಹಾಗೂ ಕ್ಷೇತ್ರದ ಸಂಸದರೂ ಆಗಿರುವ ಎಚ್. ಡಿ. ಕುಮಾರಸ್ವಾಮಿ…

2 hours ago

ಮೈಮುಲ್‌: ನಿರೀಕ್ಷೆಗೂ ಮೀರಿ ಕ್ಷೀರಧಾರೆ

ಮೈಸೂರು: ದುಡಿಯಲು ಉದ್ಯೋಗ ಇಲ್ಲದೆ ನಗರ ಪ್ರದೇಶಗಳತ್ತ ಯುವ ಸಮುದಾಯ ವಲಸೆ ಹೋಗುತ್ತಿರುವುದು ಹೆಚ್ಚುತ್ತಿರುವ ನಡುವೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ…

3 hours ago