ಜಿಲ್ಲೆಗಳು

ಮಳೆ, ಮೋಡದ ಹೊಡೆತಕ್ಕೆ ಸೊರಗಿದ ಬಹುರೂಪಿ

ಇನ್ನು ಮೂರು ದಿನಗಳು ಬಾಕಿಯಿರುವಾಗಲೇ ಕರಕುಶಲ ಮೇಳದ ಮಳಿಗೆಗಳು ಖಾಲಿ

ಮೈಸೂರು: ರಂಗಾಯಣದ ಮಹತ್ವಾಕಾಂಕ್ಷಿ ಉತ್ಸವ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಈ ಬಾರಿ ಮಳೆ ಆರಂಭಿಕ ಹೊಡತೆ ಕೊಟ್ಟಿದೆ. ಚೆನ್ನೈನಲ್ಲಿ ಎದ್ದಿರುವ ಸೈಕ್ಲೋನ್ ಕಾರಣ ನಗರದಲ್ಲಿ ಮೂರು ದಿನಗಳಿಂದಲೂ ಜಿಟಿಜಿಟಿ ಮಳೆ, ಮೋಡ ಕವಿದ ವಾತಾವರಣ ಇದೆ. ಇದರಿಂದ ಹೆಚ್ಚಿನ ಕಲಾಸಕ್ತರು ರಂಗಾಯಣದ ಕಡೆಗೆ ಮುಖ ಮಾಡುತ್ತಿಲ್ಲ. ಇದರ ಜೊತೆಗೆ ಆಯೋಜಕರ ಅಸಹಕಾರದಿಂದ ಕರಕುಶಲ ಮೇಳದಲ್ಲಿ ಮಳಿಗೆಗಳನ್ನು ಹಾಕಿದ್ದವರು ಮಳಿಗೆಯನ್ನು ಖಾಲಿ ಮಾಡಿ ಹೊರಟಿರುವುದರಿಂದ ರಂಗಾಯಣದ ಅಂಗಳ ಭಣಗುಡುತ್ತಿದೆ.

ಡಿ.೯ರಂದು ಸಂಜೆ ಬಹುರೂಪಿ ಕರಕುಶಲ ಮೇಳಕ್ಕೆ ಚಾಲನೆ ದೊರೆಯಿತು. ಹೀಗೆ ಆಂಭಗೊಂಡ ಕೆಲವೇ ಸಮಯದಲ್ಲಿ ಬಂದ ಮಳೆಯಿಂದಾಗಿ, ಅಂದೇ ಕೆಲವು ವ್ಯಾಪಾರಿಗಳು ಆಯೋಜಕರ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಮಳಿಗೆಗಳಿಗಾಗಿ ತಾವು ಕಟ್ಟಿದ್ದ ಡಿಡಿ ಹಣವನ್ನು ಹಿಂಪಡೆದು ತಮ್ಮ ವಸ್ತುಗಳನ್ನು ತೆಗೆದುಕೊಂಡು ವಾಪಸ್ಸಾದರು.

ಈ ವೇಳೆ ಆಯೋಜಕರು ನಾಳೆಗೆ ಈ ರೀತಿ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ನಾಲ್ಕು ದಿನಗಳು ಕಳೆದರೂ ಇನ್ನೂ ಸಮರ್ಪಕ ವ್ಯವಸ್ಥೆ ಕಲ್ಪಿಸದ ಕಾರಣ ಭಾನುವಾರವೂ ಹಲವು ಮಳಿಗೆಗಳವರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ರಂಗಾಯಣದ ಆವರಣದಲ್ಲಿ ಕಂಡು ಬಂದವು.

ವ್ಯಾಪಾರಿಗಳ ಅಳಲು

‘ಡಿಡಿ ಹಣವನ್ನು ಕಟ್ಟಿಸಿಕೊಳ್ಳುವಾಗ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಹೇಳಿದಂತೆ ಏನೂ ಮಾಡಿಲ್ಲ. ನಾಲ್ಕು ದಿನಗಳಾಯ್ತು ಏನೂ ವ್ಯವಸ್ಥೆ ಮಾಡಲಿಲ್ಲ. ಬಟ್ಟೆ, ಪುಸ್ತಕಗಳು ಎಲ್ಲವೂ ಒದ್ದೆಯಾಗುತ್ತಿವೆ. ಮಳೆಯಿಂದ ಜನರೂ ಬಾರದೇ ವ್ಯಾಪಾರವಿಲ್ಲ. ಹಾಗಾಗಿ, ವಾಪಸ್ಸು ಹೋಗುತ್ತಿದ್ದೇವೆ. ಡಿಡಿ ಹಣವನ್ನು ಕೇಳಿದರೆ, ಎರಡು ದಿನಗಳ ಬಾಡಿಗೆ ಮುರಿದುಕೊಂಡು ಕೊಡುತ್ತೇವೆ ಎಂದು ಹೇಳುತ್ತಾರೆ. ನಮ್ಮ ವಸ್ತುಗಳನ್ನು ತರಲು ನೀಡಿರುವ ಟ್ರಾನ್ಸ್‌ಪೋರ್ಟ್ ಹಣವೂ ಇಲ್ಲಿ ಸಂಪಾದನೆಯಾಗಿಲ್ಲ ಎಂದು ಕರಕುಶಲ ಮೇಳದಲ್ಲಿನ ವ್ಯಾಪಾರಿಗಳು ಅಳಲು ತೋಡಿಕೊಂಡರು.


ಭಣಗುಡುತ್ತಿದೆ ರಂಗಾಯಣ

ತನ್ನದೇ ಆದ ಇತಿಹಾಸ ಮತ್ತು ಮಹತ್ವವನ್ನು ಹೊಂದಿರುವ ಬಹುರೂಪಿ ನಾಟಕೋತ್ಸವಕ್ಕೆ ಪ್ರತಿವರ್ಷವೂ ಅಸಂಖ್ಯಾತ ಕಲಾಸಕ್ತರು ಮತ್ತು ಪ್ರೇಕ್ಷಕ ವರ್ಗ, ಕಲಾವಿದರು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಬರುತ್ತಿದ್ದರು. ಆದರೆ, ಈ ಬಾರಿ ಸಾಕಷ್ಟು ಜನರು ಕಾಣದೆ ರಂಗಾಯಣದ ಅಂಗಳ ಭಣಗುಡುತ್ತಿದೆ. ಇದಕ್ಕೆ, ಮಳೆ ಮುಖ್ಯ ಕಾರಣ. ಇದರ ಜೊತೆಗೆ ಅಸಮರ್ಪಕ ಆಯೋಜನೆಯೂ ಕಾರಣ ಎನ್ನಬಹುದು. ಅಲ್ಲದೇ, ಬಹುರೂಪಿ ಆರಂಭವಾಗಿ ನಾಲ್ಕು ದಿನಗಳಾದರೂ, ಇನ್ನು ಸಿದ್ಧತೆ ಪೂರ್ಣಗೊಳ್ಳದೆ ಸಣ್ಣಪುಟ್ಟ ಕೆಲಸಗಳು ನಡೆಯುತ್ತಲೇ ಇವೆ.

ಕೆಲವೊಂದು ನಾಟಕಗಳಿಗಷ್ಟೆ ಜನರು: ಕನ್ನಡ ಮತ್ತು ಕೆಲವು ಭಾಷೆಯ ನಾಟಕಗಳಲ್ಲಷ್ಟೇ ಜನರು ಕಂಡು ಬರುತ್ತಿದ್ದು, ಚಲನಚಿತ್ರೋತ್ಸವ ಮತ್ತು ಜನಪದೋತ್ಸವದಲ್ಲಿ ಹೆಚ್ಚಿನ ಪ್ರೇಕ್ಷಕರು ಕಂಡು ಬರುತ್ತಿಲ್ಲ.


‘ಎರಡು ದಿನಗಳ ಬಾಡಿಗೆ ಮುರಿದುಕೊಂಡು ಡಿಡಿ ಹಣವನ್ನು ನೀಡುವ ಕುರಿತು ರಂಗಾಯಣದ ನಿರ್ದೇಶಕರೊಂದಿಗೆ ಮಾತನಾಡುತ್ತೇನೆ’

-ನಿರ್ಮಲ ಮಠಪತಿ, ಉಪ ನಿರ್ದೇಶಕರು, ರಂಗಾಯಣ

andolanait

Recent Posts

ಮೈಸೂರು | ಹೊಸ ವರ್ಷದ ಸಂಭ್ರಮಾಚರಣೆಗ ಸಿದ್ದವಾಗ್ತಿದೆ 2 ಲಕ್ಷ ಲಡ್ಡು.!

ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಡ್ಡುಗಳ ವಿತರಣೆ ಮೈಸೂರು : ನೂತನ ವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು…

34 mins ago

ರೈಲು ಪ್ರಯಾಣ ದರ ಹೆಚ್ಚಳ | ರಾಜ್ಯ ಬಿಜೆಪಿ ನಾಯಕರ ಮೌನವೇಕೆ : ಸಿ.ಎಂ ಪ್ರಶ್ನೆ

ದಾವಣಗೆರೆ : ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ…

58 mins ago

ಹುಬ್ಬಳ್ಳಿಯಲ್ಲಿ ಮರ್ಯಾದೆ ಹತ್ಯೆ | ಕ್ರೂರಿ ತಂದೆಯನ್ನು ಶೂಟ್‌ ಮಾಡಿ ; ಪ್ರಮೋದ್‌ ಮುತಾಲಿಕ್‌ ಆಗ್ರಹ

ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮೇಲ್ಜಾತಿ ಗರ್ಭಿಣಿ ಪುತ್ರಿ ಮಾನ್ಯಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ಈ ಮರ್ಯಾದೆ…

1 hour ago

ಸ್ಥಳೀಯವಾಗಿ ಬಿಜೆಪಿಯೊಂದಿಗೆ ಮೈತ್ರಿ ಹೊಂದಾಣಿಕೆ ಕಷ್ಟ : ಎಚ್‌ಡಿಡಿ

ಬೆಂಗಳೂರು : ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ…

1 hour ago

ಸಿಲಿಂಡರ್ ಸ್ಪೋಟ ಪ್ರಕರಣ | ಮೃತ ಸಲೀಂ ಜೊತೆ ಬಂದವರು ನಾಪತ್ತೆ‌ ; ಲಾಡ್ಜ್‌ ಶೋಧ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‍ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ…

2 hours ago

ದೇಶದದ್ಯಾಂತ ಇಂದಿನಿಂದ ರೈಲು ಪ್ರಯಾಣ ದರ ಏರಿಕೆ

ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…

2 hours ago