ಜಿಲ್ಲೆಗಳು

ಚಾಮರಾಜನಗರ ಜಿಲ್ಲೆಯಲ್ಲಿ ಮಂಜಿನಮಳೆ!

ಚಾಮರಾಜನಗರ: ಜಿಲ್ಲೆಯಾದ್ಯಂತ ಬುಧವಾರ ದಟ್ಟ ಮಂಜಿನ ಮಳೆಯ ಸುರಿದಿದ್ದು ಬೆಳಿಗ್ಗೆ ೮.೩೦ರವರೆಗೂ ಮಂಜು ಕವಿದಿತ್ತು. ಇದರೊಂದಿಗೆ ಚಳಿಯೂ ಶುರುವಾಗಿದೆ.

ಕೆಲದಿನಗಳಿಂದಲೇ ಇಬ್ಬನಿ ಬೀಳುತ್ತಿದೆಯಾದರೂ ಬುಧವಾರದ ಮಟ್ಟಿಗೆ ಮಂಜು ಸುರಿದಿರಲಿಲ್ಲ. ಪ್ರಖರ ಬಿಸಿಲು ಠಳಾಯಿಸುವವರೆಗೂ ಮಂಜಿನ ಕಾರಣದಿಂದಾಗಿ ವಾಹನಗಳು ಲೈಟ್ ಹಾಕಿಕೊಂಡೇ ಸಂಚರಿಸಬೇಕಾಯಿತು.

ವಾಯುವಿಹಾರ ಮಾಡುವವರು ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆಜ್ಜೆ ಹಾಕಬೇಕಾಯಿತು. ಇಬ್ಬನಿ ಹಿನ್ನೆಲೆಯಲ್ಲಿ ರಸ್ತೆಬದಿಯಲ್ಲಿ ವಾಕಿಂಗ್ ಮಾಡುವವರು ಎಚ್ಚರಿಕೆ ವಹಿಸಬೇಕಿದೆ. ಮಂಜು ಕವಿದಾಗ ತೀರಾ ಸನಿಹಕ್ಕೆ ಬರುವವರೆಗೂ ಮುಂದೆ ಏನಿದೆ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ಹಿಮದ ಈ ಸಂದರ್ಭ ರಸ್ತೆಬದಿಯಲ್ಲಿ ವಾಯುವಿಹಾರ ಮಾಡದಿರುವುದೇ ಸೂಕ್ತ.

ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗಿ ಕೆರೆಕಟ್ಟೆ ಹಾಗೂ ಜಲಾಶಯಗಳು ಭರ್ತಿ ಕಂಡಿರುವುದರಿಂದ ಇತರೆಡೆಗಿಂತ ಈ ನೀರಿನ ಪ್ರದೇಶಗಳಲ್ಲಿ ಇಬ್ಬನಿ ತುಸು ಹೆಚ್ಚಾಗಿಯೇ ಬೀಳತೊಡಗಿದೆ. ಆದ ಕಾರಣ ನೀರು ಹರಿದಾಡುವ ಭಾಗಗಳಲ್ಲಿನ ಜನರು ಅದಾಗಲೇ ಬೆಚ್ಚನೆಯ ಉಡುಪುಗಳ ಮೊರೆ ಹೋಗುವಂತಾಗಿದೆ.
ಆರೋಗ್ಯದ ಮೇಲೂ ಇಬ್ಬನಿ ಗಂಭೀರ ಪರಿಣಾಮ ಬೀರುತ್ತದೆ. ತಲೆನೋವು, ನೆಗಡಿ ಹಾಗೂ ಜ್ವರಕ್ಕೂ ಕಾರಣವಾಗಲಿದೆ. ಈ ಹಿನ್ನೆಲೆಯಲ್ಲಿ ಇಬ್ಬನಿ ತಲೆಮೇಲೆ ಬೀಳದಂತೆ ಜನತೆ ಟೊಪ್ಪಿ ಅಥವಾ ಟವೆಲ್ ಸುತ್ತಿಕೊಂಡು ದೈನಂದಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಮಂಜು ಕೆಲ ಬೆಳೆಗಳಿಗೆ ವರದಾನವಾದರೆ ಅನೇಕ ಬೆಳೆಗಳ ರೋಗರುಜಿನಕ್ಕೂ ಕಾರಣವಾಗಲಿದೆ ಎನ್ನುತ್ತಾರೆ ಕೃಷಿ ತಜ್ಞರು. ಹಸಿಕಡಲೆ, ಕೊತ್ತಂಬರಿ ಬೆಳೆಗಳು ಇಬ್ಬನಿ-ಚಳಿ ವಾತಾವರಣದಲ್ಲೇ ಬೆಳೆಯುತ್ತವೆ. ತರಕಾರಿ ಇನ್ನಿತರ ಬೆಳೆಗಳು ವಿಶೇಷವಾಗಿ ಕುಂಬಳ ಜಾತಿಯ ಬಳ್ಳಿ ಸಸ್ಯಗಳಲ್ಲಿ ಇಬ್ಬನಿಯಿಂದ ಬೂದು ರೋಗ ತಲೆ ಎತ್ತುವ ಅಪಾಯವಿದೆ ಎಂಬುದು ತಜ್ಞರ ಅನಿಸಿಕೆ.

ಇಬ್ಬನಿ ಪ್ರಾರಂಭವಾಯಿತೆಂದರೆ ಮಳೆಗೆ ಬ್ರೇಕ್ ಬಿದ್ದಂತೆ ಎಂಬುದು ರೈತರ ಕೃಷಿ ಲೆಕ್ಕಾಚಾರ. ಕ್ಯಾಲೆಂಡರ್ ಪ್ರಕಾರ, ಇನ್ನೂ ಚಳಿಗಾಲ ಶುರುವಾಗಿಲ್ಲ. ಆದರೂ ಥಂಡಿ ವಾತಾವರಣ ಈಗಲೇ ಚಿಗುರೊಡೆದಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕನಿಷ್ಠ ೧೭.೦೨ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರ ಹಿಂದಿನ ೨೪ಗಂಟೆ ಅವಧಿಯಲ್ಲಿ ಕನಿಷ್ಠ ೧೬.೦೭ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ. -ಹೆಚ್.ಕೆ.ರಜತ್, ಕೃಷಿ ಹವಾಮಾನ ತಜ್ಞ.

andolana

Recent Posts

ತ್ರಿಪುರ ಸುಂದರಿ ಅಮ್ಮನವರ ಜಾತ್ರೆಗೆ ಸಕಲ ಸಿದ್ಧತೆ

ಎಂ.ನಾರಾಯಣ್ ತಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಜ.೩ರಂದು ಆಕರ್ಷಕ ಬಂಡಿ ಉತ್ಸವ; ೫ರಂದು ರಥೋತ್ಸವ ತಿ.ನರಸೀಪುರ: ಪುರಾಣ ಪ್ರಸಿದ್ಧ ತಾಲ್ಲೂಕಿನ ಮೂಗೂರಿನ…

1 min ago

ಮತ್ತೆ ಆರಂಭವಾದ ಕೋಟೆ ಪೊಲೀಸ್ ಕ್ಯಾಂಟೀನ್

ಶಾಸಕರ ಸೂಚನೆಯ ಮೇರೆಗೆ ಕ್ಯಾಂಟೀನ್ ಆರಂಭ; ಬಡವರು, ಕಾರ್ಮಿಕರು, ವಿದ್ಯಾರ್ಥಿಗಳಿಗೆ ಸಂತಸ ಎಚ್.ಡಿ.ಕೋಟೆ: ಕಡಿಮೆ ದರದಲ್ಲಿ ರುಚಿಕರವಾದ ತಿಂಡಿ, ಊಟ…

6 mins ago

ಗುಬ್ಬಚ್ಚಿ ಶಾಲೆಯಲ್ಲಿ ಬರೀ 12 ವಿದ್ಯಾರ್ಥಿಗಳು!

ವರಹಳ್ಳಿ ಆನಂದ ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ೧ರಿಂದ ೭ನೇ ತರಗತಿವರೆಗೆ ಪ್ರವೇಶಾವಕಾಶ ಇರುವ ಸ.ಹಿ.ಪ್ರಾ. ಶಾಲೆ ಮೈಸೂರು: ನೂರಾರು…

11 mins ago

ಕೊಡಗು‌ ಸಿದ್ದಾಪುರ ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

9 hours ago

ಚಿರತೆ ಮರಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…

10 hours ago