ಮೇಲುಕೋಟೆ: ನಟಿ ರಚಿತಾ ರಾಮ್ ಶುಕ್ರವಾರ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು. ಬೆಳಿಗ್ಗೆ 9 ಗಂಟೆಯ ವೇಳೆಗೆ ಮೇಲುಕೋಟೆಗೆ ಬಂದ ರಚಿತಾ ಯದುಗಿರಿನಾಯಕಿ ಮಹಾಲಕ್ಷ್ಮಿ , ರಾವಾನುಜಾಚಾರ್ಯರ ದರ್ಶನ ಪಡೆದರು.
ದೇವಾಲಯದ ಅಮ್ಮನವರ ಸನ್ನಿಧಿಯ ಪ್ರಾಂಗಣದ ಶಿಲ್ಪಕಲಾ ಸೌಂದರ್ಯವನ್ನು ವೀಕ್ಷಿಸಿದ ರಚಿತಾರಾಮ್ ಮುಂಬರುವ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯುವ ಹತ್ತು ದಿನಗಳ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಭಾಗವಹಿಸಿ ದೇವರ ದರ್ಶನ ಪಡೆದು ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು.
ಈ ವೇಳೆ ದೇವಾಲಯದ ಪರಂಪರೆ, ಸಂಸ್ಕೃತಿ ಹಾಗೂ ವೈರಮುಡಿ ಉತ್ಸವದ ವಿಶೇಷಗಳ ಬಗ್ಗೆ ರಚಿತಾ ಅವರಿಗೆ ಮಾಹಿತಿ ನೀಡಿದ ಸ್ಥಾನೀಕಂ ಸಂತಾನರಾಮನ್, ವೈರಮುಡಿ ಬ್ರಹ್ಮೋತ್ಸವ ಮತ್ತಷ್ಟು ವೈಭವವಾಗಿ ನಡೆಯಲು ಸಹಕಾರ ನೀಡಿ. ಇದು ನಿಮ್ಮ ಯಶಸ್ಸಿಗೆ ಸಾರ್ಥಕ ಸೇವೆಯಾಗಿ ಉಳಿಯುತ್ತದೆ ಎಂದರು.
ಅರ್ಚಕರಾದ ನಾರಾಯಣಪ್ರಸಾದ್ ಭಟ್ಟರ್, ಸ್ಥಾನೀಕರಾದ ಕೋವಿಲ್ ನಂಬಿ ಪ್ರಸನ್ನ ಇತರರಿದ್ದರು.
ಮದ್ದೂರು : ತಾಲ್ಲೂಕಿನ ನಿಡಘಟ್ಟದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟುಹೋಗಿದ್ದು, ಅದೃಷ್ಟವಶಾತ್…
ಮೈಸೂರು : ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಡುಗೆ ಎಣ್ಣೆಗಳು, ಅವುಗಳ ಆರೋಗ್ಯ ಲಾಭಗಳ ಕಾರಣದಿಂದ ಮತ್ತೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿವೆ.…
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಜ.8) ನಡೆದ 2026ನೇ ಸಾಲಿನ 2ನೇ ಸಚಿವ ಸಂಪುಟದ ಸಭೆಯಲ್ಲಿ…
ಮಂಡ್ಯ : ನಗರಕ್ಕೆ ಹೈಟೆಕ್ ಸ್ಪರ್ಶ ನೀಡಲು ಮುಂದಾಗಿರುವ ಶಾಸಕ ಪಿ. ರವಿಕುಮಾರಗೌಡ ಅವರು, ಒಕ್ಕಲಿಗ ಜನಾಂಗದ ಹಲವು ವರ್ಷಗಳ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಿಸಲು ಆದ್ಯತೆ ನೀಡಲಾಗುವುದು…
ಬೆಂಗಳೂರು : ಹಣಕಾಸು ಇಲಾಖೆ ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು…