ಮೈಸೂರು: ಇಡೀ ಹಿಂದುಸ್ಥಾನವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಪರಿವರ್ತಿಸುತ್ತೇನೆ ಎಂದು ಕತ್ತಿ ಝಳಪಿಸುವ ಟಿಪ್ಪು… ಅಲ್ಲಿನ ಜನರನ್ನು ಕೊಂದಾದರೂ ಕೊಡಗನ್ನು ವಶಕ್ಕೆ ಪಡೆಯಬೇಕು ಎಂದು ಘರ್ಜಿಸುವ ಟಿಪ್ಪು… ಸಾಮಾನ್ಯ ಸೈನಿಕ ವೇಷ ಧರಿಸಿ ಟಿಪ್ಪು ಹತನಾದ ಎಂದು ಬಿಂಬಿಸಿರುವ ಲೇಖಕರು… ಇವು ‘ಟಿಪ್ಪು ನಿಜ ಕನಸುಗಳು’ ನಾಟಕದಲ್ಲಿ ಕಂಡುಬರುವ ದೃಶ್ಯಗಳು.
ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ಎಂಬ ಮೂರು ಗಂಟೆ ಅವಧಿಯ ನಾಟಕ ಭಾನುವಾರ ಸಂಜೆ ರಂಗಾಯಣದ ಭೂಮಿಗೀತದಲ್ಲಿ ಪ್ರದರ್ಶನ ಕಂಡಿತು.
ರಣರಂಗದಲ್ಲಿ ಟಿಪ್ಪು ಹತನಾದ ದೃಶ್ಯದೊಂದಿಗೆ ನಾಟಕ ಆರಂಭವಾಗುತ್ತದೆ. ಯುದ್ಧ ಭೂಮಿಗೆ ಆಗಮಿಸುವ ಬ್ರಿಟಿಷರು, ಟಿಪ್ಪುವಿನ ಕಳೇಬರಕ್ಕಾಗಿ ಹುಡುಕಾಡುತ್ತಾರೆ. ಟಿಪ್ಪು ಸಾಮಾನ್ಯ ಸೈನಿಕ ವೇಷಧಾರಿಯಾಗಿ ಯುದ್ಧಕ್ಕೆ ಬಂದ ಎಂಬ ಮಾತುಗಳು, ಅವನು ಹುಲಿಯಲ್ಲ, ಇಲಿ ಎಂಬ ಮಾತುಗಳು ಪಾತ್ರಧಾರಿಗಳು ಬರುತ್ತದೆ. ಒಂದು ಧರ್ಮದ ಸೈನಿಕರು ಟಿಪ್ಪುವಿನ ಸಾವನ್ನು ಸಂಭ್ರಮಿಸುತ್ತಾರೆ. ಆತನ ಕಳೇಬರವನ್ನು ನಮಗೆ ನೀಡಿ. ಶ್ರೀರಂಗಪಟ್ಟಣದಲ್ಲಿ ಆತನ ಶವವನ್ನು ಮೆರವಣಿಗೆ ಮಾಡುತ್ತೇವೆ ಎಂದು ಕುಣಿದಾಡುತ್ತಾರೆ.
ನಂತರ ನಾಟಕವು ಕೊಡಗಿನತ್ತ ಸಾಗುತ್ತದೆ. ಅಲ್ಲಿನ ರಾಜ ದೊಡ್ಡವೀರಪ್ರಭು ಅವರ ಸಹೋದರ ಲಿಂಗರಾಜ ಅವರನ್ನು ಸೆರೆಮನೆಯಿಂದ ಬಿಡಿಸುವ ಟಿಪ್ಪು, ಆತನ ಸಹಾಯದಿಂದ ಕೊಡಗಿನ ಪ್ರಮುಖರನ್ನು ಭೋಜನ ಕೂಟಕ್ಕೆ ಕರೆಸಿ ಅವರಗಳನ್ನು ಮೋಸದಿಂದ ಬಂಧಿಸಿದ ಬಗ್ಗೆ ಪ್ರಸ್ತಾಪ ಮಾಡಲಾಗುತ್ತದೆ ಕೊಡಗಿನಲ್ಲಿ ಟಿಪ್ಪು ಸೈನಿಕರು ಕೊಡವರ ವಾರಣ ಹೋಮ ನಡೆಸಿದ ಎಂದು ತೋರಿಸಲಾಗುತ್ತದೆ.
ನಂತರ ಬಂಧಿತರನ್ನು ಶ್ರೀರಂಗಪಟ್ಟಣದವರೆಗೆ ನಡೆಸಿಕೊಂಡು ಹೋಗಬೇಕು. ಬರುವುದಿಲ್ಲ ಎಂದವರನ್ನು ಆನೆಯಿಂದ ಎಳೆಸಬೇಕು. ಇಲ್ಲವಾದಲ್ಲಿ ಅವರನ್ನು ಕೊಲ್ಲಬೇಕು. ಕೊಡಗಿನಲ್ಲಿ ಇಸ್ಲಾಂ ಧರ್ಮವನ್ನು ಬೆಳೆಸಬೇಕು. ಕುರಾನ್ ಪಠಣ ಎಲ್ಲೆಡೆ ಜರುಗಬೇಕು ಎಂದು ಟಿಪ್ಪು ಪಾತ್ರಧಾರಿ ವೀರಾವೇಶದಿಂದ ನುಡಿಯುತ್ತಾನೆ.
ನಾಟಕದ ಉದ್ದಕ್ಕೂ ಟಿಪ್ಪು ಸುಲ್ತಾನ್ ಓರ್ವ ಮತಾಂಧ, ಆತನಿಂದ ಕೇರಳ, ಕೊಡಗು ಇನ್ನಿತರ ಕಡೆಗಳಲ್ಲಿ ಜನರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಯಿತು, ಚಿತ್ರದುರ್ಗದ ಮದಕರಿ ನಾಯಕ ಸೇರಿದಂತೆ ಸಾಮಂತರನ್ನು ಹತ್ಯೆಗಯ್ಯಲಾಗಿತ್ತು ಎಂಬುದನ್ನು ಕಟ್ಟಿಕೊಡಲಾಗಿದೆ.
ಖಾಕಿ ಕಾವಲು: ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಎಸಿಪಿ ಗಂಗಾಧರಸ್ವಾಮಿ, ಐವರು ಇನ್ಸಪೆಕ್ಟರ್ ಸೇರಿದಂತೆ ಸುವಾರು ೧೫೦ಕ್ಕೂ ಹೆಚ್ಚು ಮಂದಿ ಪೊಲೀಸರನ್ನು ರಂಗಾಯಣದಲ್ಲಿ ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.
ಟಿಕೆಟ್ ಖರೀದಿಸಿ ನಾಟಕ ನೋಡಲು ಬರುವವರನ್ನು ಸಂಪೂರ್ಣ ತಪಾಸಣೆಗೊಳಪಡಿಸಿ ಪೊಲೀಸರು ಭೂಮಿಗೀತ ಆವರಣಕ್ಕೆ ಬಿಡುತ್ತಿದ್ದುದು ಕಂಡುಬಂತು. ಅನುಮಾನಸ್ಪದ ವ್ಯಕ್ತಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡುತ್ತಿದ್ದುದು ಕಂಡುಬಂತು.
ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ, ಆರ್‌ಎಸ್‌ಎಸ್‌ನ ವಾ.ವೆಂಕಟರಾಮ್ ಮುಂತಾದ ಗಣ್ಯರು ನಾಟಕ ವೀಕ್ಷಿಸಿದರು.
ಟಿಪ್ಪು ನಿಜ ಕನಸು ನಾಟಕದಲ್ಲಿ ಸತ್ಯವನ್ನು ಮಾತ್ರ ಹೇಳಿದ್ದೇನೆ. ಇದರಲ್ಲಿ ನನ್ನ ಅಭಿಪ್ರಾಯಗಳೇನೂ ಇಲ್ಲ. ಇತಿಹಾಸಕಾರರು ಬರೆದಿರುವ ದಾಖಲೆಗಳ ಆಧಾರದಲ್ಲಿಯೇ ಟಿಪ್ಪು ಹೊಂದಿದ್ದ ನಿಜ ಕನಸುಗಳನ್ನು ಜನರಿಗೆ ತಿಳಿಸುವ ಪ್ರಾವಾಣಿಕ ಪ್ರಯತ್ನ ಮಾಡಿದ್ದೇನೆ. ನಾಟಕ ಯಶಸ್ವಿಾಂಗಿ ನಡೆದಿದೆ. ಪ್ರೇಕ್ಷಕರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾಟಕವನ್ನು ಎಲ್ಲೆಡೆ ಪ್ರದರ್ಶಿಸಲಾಗುತ್ತದೆ. -ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕರು.
ಟಿಪ್ಪು ನಿಜ ಕನಸು ನಾಟಕದ ಬಗ್ಗೆ ಉತ್ಸುಕನಾಗಿದ್ದೆ. ಅಡ್ಡಂಡ ಕಾರ್ಯಪ್ಪ ಅವರು ನಾಟಕವನ್ನು ಉತ್ತಮವಾಗಿ ರೂಪಿಸಿದ್ದಾರೆ. ಕೊಡಗಿನಲ್ಲಿ ನಡೆದ ಸತ್ಯ ಘಟನೆಗಳನ್ನು ನಾಟಕದ ಮೂಲಕ ಯಶಸ್ವಿಯಾಗಿ ತಿಳಿಸಿಕೊಟ್ಟಿದ್ದಾರೆ. ನಾಟಕವನ್ನು ಎಲ್ಲರೂ ವೀಕ್ಷಿಸಬೇಕು. -ಕೆ.ಜಿ.ಬೋಪಯ್ಯ, ಮಾಜಿ ವಿಧಾನಸಭಾ ಅಧ್ಯಕ್ಷರು.
‘ಟಿಪ್ಪು ನಿಜ ಕನಸುಗಳು’ ನಾಟಕವನ್ನು ಗಿರೀಶ್ ಕಾರ್ನಾಡರ ಟಿಪ್ಪು ಕನಸುಗಳು ನಾಟಕಕ್ಕೆ ವಿರುದ್ಧವಾಗಿಯೇ ರೂಪಿಸಬೇಕೆಂಬ ಹಠಕ್ಕೆ ಬಿದ್ದು ರಚಿಸಲಾಗಿದೆ. ಸುಳ್ಳು ಹೇಳುವುದು ಚರಿತ್ರೆಯಲ್ಲ, ಇಡೀ ನಾಟಕ ಕಪೋಕಲ್ಪಿತ, ಟಿಪ್ಪುವಿನ ಬಗ್ಗೆ ಇಲ್ಲದ್ದನ್ನು ಹೇಳಲು ಹೊರಟು ದಿವಾನ್ ಪೂರ್ಣಯ್ಯ ಮತ್ತು ಮೀರ್ ಸಾದಿಕ್ ಅಂತಹವರ ಕುಟಿಲತೆಯನ್ನು ಮರೆಮಾಚಿದ್ದಾರೆ. ಟಿಪ್ಪು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಬಂದವರಲ್ಲ. ಈ ನಾಟಕ ಪೂರ್ತಿ ಒಂದು ಕೆಟ್ಟ ತರ್ಕವಾಗಿದೆ. ಅಡ್ಡಂಡ ಕಾರ್ಯಪ್ಪ ನಾಟಕ ಬಿಟ್ಟು ರಾಜಕೀಯಕ್ಕೆ ಇಳಿದಿದ್ದಾರೆ. -ಸಿ.ಬಸವಲಿಂಗಯ್ಯ, ರಂಗಾಯಣ ಮಾಜಿ ನಿರ್ದೇಶಕರು.
ನಾಟಕ ಅದ್ಭುತವಾಗಿ ಮೂಡಿ ಬಂದಿದೆ. ಹಿಂದೆ ಇತಿಹಾಸವನ್ನು ತಿರುಚಿ ಜನರಿಗೆ ಹೇಳಲಾಗಿತ್ತು. ಈ ನಾಟಕದಲ್ಲಿ ಸತ್ಯದ ಘಟನೆಯನ್ನು ಅನಾವರಣಗೊಳಿಸಲಾಗಿದೆ. ಪ್ರತಿಯೊಬ್ಬರೂ, ಎಲ್ಲ ಧರ್ಮೀಯರು ಈ ನಾಟಕವನ್ನು ನೋಡಬೇಕು. ನಿಜವಾದ ಇತಿಹಾಸ ಏನು ಎಂಬುದು ತಿಳಿಯುತ್ತದೆ. – ರುದ್ರಮೂರ್ತಿ, ವಕೀಲರು, ಮೈಸೂರು.
ಸಿ.ಬಸವಲಿಂಗಯ್ಯ ಪ್ರತಿಭಟನೆ
ರಂಗಾಯಣ ಮಾಜಿ ನಿರ್ದೇಶಕ ಸಿ.ಬಸವಲಿಂಗಯ್ಯ ಅವರು ನಾಟಕ ವೀಕ್ಷಿಸಲು ಬಂದ ವೇಳೆ ಅವರನ್ನು ತಡೆದ ಘಟನೆ ನಡೆಯಿತು.
ಸಂಜೆ ವೇಳೆಗೆ ಪತ್ರಕರ್ತ ಟಿ.ಗುರುರಾಜ್ ಅವರೊಂದಿಗೆ ರಂಗಾಯಣದ ಆವರಣಕ್ಕೆ ಬಂದ ಬಸವಲಿಂಗಯ್ಯ ಅವರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಬಸವಲಿಂಗಯ್ಯ ಅವರು ರಂಗಾಯಣದ ಗೇಟ್ ಬಳಿ ಕುಳಿತು ಧರಣಿ ನಡೆಸುವ ಎಚ್ಚರಿಕೆ ನೀಡಿದರು. ಈ ವೇಳೆ ಅವರೊಂದಿಗೆ ಮಾತನಾಡಿದ ಪೊಲೀಸರು ನಾಟಕ ವೀಕ್ಷಣೆಗೆ ಅನುವು ವಾಡಿಕೊಟ್ಟರು. ಅಡ್ಡಂಡ ಕಾರ್ಯಪ್ಪ ಕೂಡ ಅವರನ್ನು ಸ್ವಾಗತಿಸಿದರು.
ಡಿಸಿ ಶಿಲ್ಪಾನಾಗ್ ಸೂಚನೆ ಮೇರೆಗೆ ಅರಣ್ಯ ಇಲಾಖೆಯ ಸಫಾರಿ ವಾಹನದಲ್ಲಿ ಮಕ್ಕಳನ್ನು ಕರೆತರಲು ಕ್ರಮ ಹನೂರು : ಅಂತೂ ಇಂತೂ…
ಬೆಳಗಾವಿ : ನಾನು ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಲ್ಲ, ನಿಜವಾದ ವಿರೋಧ ಪಕ್ಷದ ನಾಯಕ ನಾನೇ ಎಂದು ವಿಧಾನಸಭೆ ಕಲಾಪದ…
ಬೆಳಗಾವಿ : ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಬಿಳಿಗಿರಿ ರಂಗನಬೆಟ್ಟ ಪ್ರದೇಶವನ್ನು 5.75…
ಬೆಳಗಾವಿ : ಬಿಜೆಪಿ ನಾಯಕರಿಗೆ ರೈತರ ಮೇಲೆ ದಿಢೀರ್ ಪ್ರೀತಿ ಬಂದಿದೆ. ಅವರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ, ಯಾರು…
ಬೆಳಗಾವಿ: ರಾಜಧಾನಿ ಬೆಂಗಳೂರನ್ನು ಹೊರತುಪಡಿಸಿದರೆ ಅತಿವೇಗವಾಗಿ ಬೆಳೆಯುತ್ತಿರುವ ಮೈಸೂರಿನಲ್ಲಿ ಸುಮಾರು 300 ಎಕರೆ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿ ಸಾರ್ವಜನಿಕರಿಗೆ…
ಬೆಂಗಳೂರು: ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ರಾಜ್ಯ ಸರ್ಕಾರ ನೀಡಿದ್ದ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ಈ…