ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಿದಾಗ ಉಂಟಾದ ಕಾನೂನು ತೊಡಕು ದೂರ: ಜಿಟಿಡಿ
ಮೈಸೂರು: ವರ್ಷದ ಹಿಂದೆ ನಗರಕ್ಕೆ ಹೊಂದಿಕೊಂಡಂತಿರುವ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸಿದ ಪರಿಣಾಮ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದಿರುವ ಗ್ರಾಪಂಗಳಲ್ಲಿ ಉದ್ಬವವಾಗಿದ್ದ ಅಧಿಕೃತ, ಅನಧಿಕೃತ ಆಸ್ತಿಗಳಿಗೆ ಖಾತೆ ಮಾಡುವ ಸಂಬಂಧ ಉಂಟಾಗಿದ್ದ ಆಡಳಿತಾತ್ಮಕ, ಕಾನೂನು ಸಮಸ್ಯೆ ಇದೀಗ ದೂರವಾಗಿದ್ದು, ಮಾಲೀಕರಿಗೆ ಖಾತೆ ಭಾಗ್ಯ ದೊರೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಜ.2ರಂದು ನಗರಾಭಿವೃದ್ಧಿ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ತಂತ್ರಾಂಶ ಸಿದ್ಧವಾದ ಮೇಲೆ ಖಾತೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ನಗರ ಹಾಗೂ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸಲ್ಪಟ್ಟ ಅಧಿಕೃತ, ಅನಧಿಕೃತ ಎಂದು ವಿಂಗಡಿಸಿರುವ ಆಸ್ತಿಗಳಿಗೆ ನಮೂನೆ-೩ ನೀಡಲು(ಖಾತೆ) ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂದಾಜು ೧೦೩ ಬಡಾವಣೆ, ಪ್ರದೇಶಗಳ ಸುಮಾರು ೫೪,೦೦೦ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ. ಮಾತ್ರವಲ್ಲದೇ ಇದರಿಂದ ಕ್ರಯ, ವಿಕ್ರಯ ಮಾಡಲು, ಬ್ಯಾಂಕ್ ಸಾಲ ಸೌಲಭ್ಯ ಪಡೆಯಲು, ಖಾತಾ ಬದಲಾವಣೆ, ಕಟ್ಟಡ ನಿರ್ವಾಣಕ್ಕೆ ನಕ್ಷೆ ಅನುಮೋದನೆ ಮತ್ತು ಪರವಾನಗಿ ಪಡೆಉಲು ಸಹಕಾರಿಯಾಗಲಿದೆ. ಇದೀಗ ಈ ಎಲ್ಲಾ ಆಸ್ತಿಗಳ ದಾಖಲೆಗಳನ್ನು ಸಾಫ್ಟ್‌ವೇರ್‌ಗೆ ಅಳವಡಿಸುವ ಕಾರ್ಯ ನಡೆಯುತ್ತಿದೆ. ಫೆಬ್ರವರಿ ಮೊದಲ ವಾರದಿಂದಲೇ ಖಾತೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು ಮಹಾ ನಗರಪಾಲಿಕೆಗೆ ಹೊಂದಿಕೊಂಡಂತಿರುವ ೧೦ ಗ್ರಾಮ ಪಂಚಾಯಿತಿಯ ವ್ಯಾಪ್ತಿಯನ್ನು (ಪೂರ್ಣ ಪ್ರಮಾಣ ಮತ್ತು ಭಾಗಶಃ) ಮೇಲ್ದರ್ಜೆಗೇರಿಸಿ ೧ ನಗರಸಭೆ (ಹೂಟಗಳ್ಳಿ ನಗರಸಭೆ), ೪ ಪಟ್ಟಣ ಪಂಚಾಯಿತಿಗಳನ್ನು (ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ) ರಚಿಸಲಾಯಿತು. ೨೦೨೧ರ ಆ.೧ರಿಂದ ಅಧಿಕೃತವಾಗಿ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಕಾರ್ಯ ಆರಂಭಿಸಿವೆ ಎಂದರು.
ಇದಕ್ಕೂ ಮುನ್ನ ಗ್ರಾಪಂಗಳಲ್ಲಿ ಕ್ರಮಬದ್ಧ ಆಸ್ತಿ (೯, ೧೧ಎ) ಕ್ರಮಬದ್ಧವಲ್ಲದ (೯, ೧೧ಬಿ) ಎಂದು ವರ್ಗೀಕರಿಸಿ ಖಾತಾ ವಿತರಿಸಲಾಗುತ್ತಿತ್ತು. ಆದರೆ, ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬಂದ ನಂತರ ಈ ಮಾದರಿ ಖಾತೆ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಈ ವ್ಯಾಪ್ತಿಯ ಜನರು ಪರದಾಡುವಂತಾಗಿತ್ತು ಎಂದರು.
ಈಗ ಪಪಂ ಹಾಗೂ ನಗರ ಸಭೆ ವ್ಯಾಪ್ತಿಉ ಭೂ ಪರಿವರ್ತನೆಯಾಗಿ ಬಡಾವಣೆ ಅನುಮೋದನೆಯಾಗದೆ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸದ ರವಿನ್ಯೂ ಬಡಾವಣೆಯ ಆಸ್ತಿಗಳಿಗೆ (ನಮೂನೆ ೩) ಖಾತೆ ಮಾಡಿಕೊಡಲಾಗುತ್ತದೆ ಎಂದು ತಿಳಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸೃಷ್ಟಿಯಾಗಿರುವ ಈ ಸಮಸ್ಯೆಗಳ ಬಗ್ಗೆ ನಾನು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಬಳಿಕ ವಿಧಾನಸಭಾ ಅಧಿವೇಶನದಲ್ಲಿ ಈ ವಿಚಾರ ಚರ್ಚಿಸಲಾಯಿತು. ನಂತರ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಇದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೇಲ್ದರ್ಜೆಗೇರಿಸಿದ ಪಟ್ಟಣ ಪಂಚಾಯಿತಿ, ನಗರಸಭೆ ವ್ಯಾಪ್ತಿಯ ಗ್ರಾಪಂಗಳಿಗೆ ನಾನಾ ಯೋಜನೆಗಳಲ್ಲಿ 203 ಕೋಟಿ ರೂ. ಅನುದಾನ ಮಂಜೂರಾಗಿದೆ. 550 ಮನೆಗಳು ಮಂಜೂರಾಗಿದೆ. ಸ್ವಚ್ಛತೆ ಕೆಲಸವೂ ನಡೆದಿದೆ. ಈಗ ಖಾತೆಗೆೆ ಸಂಬಂಧಿಸಿದ ಸಮಸ್ಯೆಯನ್ನೂ ಬಗೆಹರಿಸಲಾಗಿದೆ.
-ಜಿ.ಟಿ.ದೇವೇಗೌಡ, ಶಾಸಕ
ಅಧಿಕೃತ ಆಸ್ತಿಗಳು :
-ಭೂ ಪರಿವರ್ತನೆಯಾಗಿ ಅನುಮೋದನೆಯಾಗಿರುವ ಬಡಾವಣೆಗಳು
-ಗ್ರಾಮ ಠಾಣಾ ಆಸ್ತಿಗಳು
-ಸರ್ಕಾರದಿಂದ ಮಂಜೂರಾದ ಆಸ್ತಿಗಳು
-ಕೆಐಎಡಿಬಿ ವತಿಯಿಂದ ಅನುಮೋದನೆಗೊಂಡ ಬಡಾವಣೆಗಳು
ಅನಧಿಕೃತ ಆಸ್ತಿಗಳು :
-ಭೂ ಪರಿವರ್ತನೆಾಂದ ಆದರೆ ಸಕ್ಷಮ ಪ್ರಾಧಿಕಾರ (ಮುಡಾ ಅಥವಾ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ) ದಿಂದ ಅನುಮೋದನೆಯಾಗದ ಬಡಾವಣೆಯ ಆಸ್ತಿಗಳು
-ಗ್ರಾಪಂಗಳು ಪೂರ್ಣ, ಭಾಗಶಃ ಮೇಲ್ದರ್ಜೆಗೇರಿಸಿ, ಪಂಚಾಯಿತಿಯಿಂದ ನಿರ್ವಹಿಸಿ, ಹಸ್ತಾಂತರಿಸಿದ ಆಸ್ತಿಗಳು
-ಕಟ್ಟಡ ಕಟ್ಟಲು ಪರವಾನಗಿ, ರಹದಾರಿ ಪಡೆಯದೆ ನಿರ್ಮಿಸಿದ ಕಟ್ಟಡಗಳು
-ಅಧಿಕೃತ ಆಸ್ತಿಯ ಮಾಲೀಕತ್ವ ಇಲ್ಲದ ನಿವೇಶನ, ಕಟ್ಟಡ
ಮೈಸೂರು: “ನಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹಾಗಾಗಿಯೇ ಅವರು ಧೈರ್ಯವಾಗಿ ಮಾತನಾಡುತ್ತಿದ್ದಾರೆ!” ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಮೈಸೂರಿನಲ್ಲಿ ಯತೀಂದ್ರ…
ಮೈಸೂರು: ಭೇಟಿ ಮಾಡೋಕೆ ಬರ್ತಾರೆ ಕಣಯ್ಯ… ಅದರಲ್ಲೇನು?” ರಮೇಶ್ ಜಾರಕಿಹೊಳಿ ಹಾಗೂ ನರೇಂದ್ರ ಸ್ವಾಮಿ ಭೇಟಿ ವಿಚಾರವಾಗಿ ಮಾಧ್ಯಮಗಳು ಕೇಳಿದ…
ಮೈಸೂರು: “ಸ್ಟೇ ತಗೋಬಾರದಿತ್ತು, ಧೈರ್ಯವಾಗಿ ಫೈಟ್ ಮಾಡಬೇಕಿತ್ತು!” ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರದಲ್ಲಿ ಸಿದ್ದರಾಮಯ್ಯ ಅವರ ನಡೆ ಕುರಿತು ಮಾಜಿ…
ಮೈಸೂರು: ಅಭಿಮನ್ಯು ಆನೆ ನಿವೃತ್ತಿಯಾದ ಬಳಿಕ ದಸರಾ ಗಜಪಡೆಯ ಮುಂದಿನ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಾರೀ ಕುತೂಹಲ…
ರೇಣುಕಾಸ್ವಾಮಿ ಕತ್ತಿನ ಮೇಲೆ ಕಾಲಿಟ್ಟು ಅದುಮುತ್ತಿದ್ದ ದರ್ಶನ್ ತನ್ನ ಕೈಯಲ್ಲಿದ್ದ ಸಿಗರೇಟ್ನಿಂದ ರೇಣುಕಾಸ್ವಾಮಿಯ ಎದೆಯ ಭಾಗಕ್ಕೆ ಸುಟ್ಟರು " ನಾನು…
ಕಾಫಿ ಜೊತೆ ಸಿಗರೇಟ್ ಸೇದುತ್ತಾ ದಿಢೀರನೆ ಬಂದು ಒದ್ದ ದರ್ಶನ್, ನಂತರ ಮರ್ಮಾಂಗಕ್ಕೆ ಎರಡು ಬಾರಿ ಒದೆತ ರೇಣುಕಾಸ್ವಾಮಿಗೆ ಬೀಳುತ್ತಿದ್ದ…