ಮೈಸೂರು: ನೆಲ-ಜಲ ಕುರಿತಂತೆ ಮಹಾಜನ್ ವರದಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಎಲ್ಲಿಯ ತನಕ ಈ ವಿವಾದ ಇರುತ್ತದೆಯೋ ಅಲ್ಲಿಯ ತನಕವೂ ನಮ್ಮ ಹೋರಾಟ ಇರುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ನಗರದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ರಾಜ್ಯವನ್ನು ರಚನೆ ಮಾಡಲಾಯಿತು. ಆದರೆ, ಮಹಾರಾಷ್ಟ್ರದವರು ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಸೇರಿಸಬೇಕೆಂದು ಹೇಳಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದ ಮಹಾಜನ್ ಆಯೋಗ ರಚಿಸಲಾಯಿತು. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾದರೂ ಮಹಾಜನ್ ವರದಿ ಅಂತಿಮವೆಂದು ಒಪ್ಪಿಕೊಂಡಿದ್ದೇವೆ. ಆದರೆ, ಮಹಾರಾಷ್ಟ್ರ ಮಹಾಜನ್ ವರದಿ ಒಪ್ಪಲು ತಯಾರಿಲ್ಲ. ಆಗಿಂದಾಗ್ಗೆ ಮಹಾರಾಷ್ಟ್ರ ಈ ವಿಚಾರವನ್ನು ಕೆದಕಿಕೊಂಡು ಬರುತ್ತಿದೆ ಎಂದರು.
ಕಾಸರಗೋಡಿನ ಚಂದ್ರಗಿರಿ ಬಿಟ್ಟರೆ ಉಳಿದ ಪ್ರದೇಶಗಳಲ್ಲಿ ಮತ್ತು ಪಾವಗಡದ ಮಡಕಶಿರಾದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಆದರೆ, ಈ ಪ್ರದೇಶಗಳು ನಮಗೆ ಸೇರಿಲ್ಲ. ಕೊಂಕಣಿ ಮಾತನಾಡುವವರನ್ನು ಮರಾಠಿಗರು ಎನ್ನುತ್ತಾರೆ. ಬೆಂಗಳೂರಿನಲ್ಲಿ ಶೇ.೨೨ರಷ್ಟು ತಮಿಳಿಗರು, ಮತ್ತೊಂದು ಕಡೆ ತೆಲುಗು ಭಾಷಿಕರು ಇದ್ದಾರೆ. ಈ ರೀತಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಮಾಡುತ್ತಾ ಹೋದರೆ ಕರ್ನಾಟಕ ಹಳೆ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಬೇಕಾಗುತ್ತದೆ ಎಂದರು.
ಗಡಿ ವಿಚಾರಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದರೂ ರಾಜಕೀಯ ಕಾರಣಕ್ಕಾಗಿ ಮುಂದಾಗುತ್ತಿಲ್ಲ. ಪ್ರತಿ ಚುನಾವಣೆ ಬಂದಾಗ ಗಡಿ ವಿಚಾರ, ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆ ಜಿಲ್ಲೆಗೂ ವಿವಾದ: ನದಿ ನೀರಿನ ವಿಚಾರದಲ್ಲಿ ರಾಜ್ಯಗಳ ನಡುವೆ ಮಾತ್ರವಲ್ಲ, ಜಿಲ್ಲೆ-ಜಿಲ್ಲೆ ನಡೆವೆಯೂ ವಿವಾದ ಉಂಟಾಗಿದೆ. ಮದ್ರಾಸ್ ಆಳ್ವಿಕೆ ಇದ್ದಾಗ ಬರವಣಿಗೆ ಮೂಲಕ ಮೆಟ್ಟೂರು ಡ್ಯಾಂ ನಿರ್ಮಾಣಕ್ಕೆ ಬರೆದುಕೊಟ್ಟಿದ್ದು ತಪ್ಪು. ತಮಿಳುನಾಡು ವರ್ಷಕ್ಕೆ 11ರಿಂದ 12 ಲಕ್ಷ ಹೆಕ್ಟೇರ್‌ನಲ್ಲಿ ಮೂರು ಬೆಳೆ ಬೆಳೆದರೆ, ಕಾವೇರಿ ಪ್ರಾಂತ್ಯದಲ್ಲಿ ೫ ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಬೆಳೆಯಲಾಗುತ್ತಿದೆ. ಉಪ ನದಿಗಳನ್ನು ಕಾವೇರಿ ವ್ಯಾಪ್ತಿಗೆ ಸೇರಿಸಿದ್ದು ತಪ್ಪಾಗಿದೆ. ನಮ್ಮ ನೀರನ್ನು ನಾವು ಬಳಸಿಕೊಳ್ಳುವುದಕ್ಕೂ ಅವಕಾಶ ಸಿಗದೆ ಸಮುದ್ರಕ್ಕೆ ಪೋಲಾಗುತ್ತಿದೆ. ಹೇಮಾವತಿ ನದಿಯಿಂದ ನಾಗಮಂಗಲ, ಕೆ.ಆರ್.ಪೇಟೆ, ತುಮಕೂರು ಭಾಗಕ್ಕೆ ನೀರು ಕೊಡಬಹುದಾಗಿತ್ತು. ಹೇಮಾವತಿ ನೀರು ಹೊರಗೆ ಹೋದರೆ ಕಾವೇರಿ ನದಿಯಿಂದ ಬಿಡುಗಡೆ ಮಾಡುತ್ತಾರೆಂದು ಲೆಕ್ಕ ಕೊಡಿ ಎನ್ನುತ್ತದೆ. ಹೊರರಾಜ್ಯಗಳ ವಿಚಾರ ಇರಲೀ ನಮ್ಮ ಭಾಗದ ನೀರನ್ನು ಬಳಸಿಕೊಳ್ಳಲು ದೊಡ್ಡತನ ಬಂದಿಲ್ಲ ಎಂದು ಹೇಳಿದರು.
ಎತ್ತಿನಹೊಳೆ, ಕುಮಾರಧಾರ ಇನ್ನಿತರ ನದಿಗಳ ನೀರನ್ನು ತಿರುಗಿಸುವುದು ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು 1,500 ಕೋಟಿ ರೂ. ಬಳಕೆ ಮಾಡಲಾಗುವುದು ಎಂದರು.
ಅಂತರ್‌ರಾಜ್ಯ ಗಡಿ, ನೀರಾವರಿ ವಿವಾದಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮವನ್ನೇ ಮಾಡುವ ಬಗ್ಗೆ ಚಿಂತನೆ ಮಾಡಬೇಕಾಗಿದೆ. ರಾಜಕೀಯವಾಗಿ ನಾವು ನಮ್ಮ ಹಕ್ಕನ್ನು ಪಡೆಯಲು ವಿಫಲವಾಗಿದ್ದೇವೆ. ಸದಾ ಕಾಲ ಅವರ ಮರ್ಜಿಯಲ್ಲಿ ಕುಳಿತುಕೊಳ್ಳುವ ಕೆಲಸಮಾಡದೆ ನಾವೇ ಕಮಾಂಡ್ ಮಾಡುವಂತಾಗಬೇಕಿದೆ.
-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ.
ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…
ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…
ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…
ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…
ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…
ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ ಮೈಸೂರು ದಸರಾ ಎಂದರೆ ಕೇವಲ ಹತ್ತು…