ಜಿಲ್ಲೆಗಳು

ಮಹಾಜನ್ ವರದಿ ವಿಚಾರದಲ್ಲಿ ರಾಜೀ ಇಲ್ಲ: ಮಾಧುಸ್ವಾಮಿ

ಮೈಸೂರು: ನೆಲ-ಜಲ ಕುರಿತಂತೆ ಮಹಾಜನ್ ವರದಿ ವಿಚಾರದಲ್ಲಿ ಯಾವುದೇ ರಾಜೀ ಇಲ್ಲ. ಎಲ್ಲಿಯ ತನಕ ಈ ವಿವಾದ ಇರುತ್ತದೆಯೋ ಅಲ್ಲಿಯ ತನಕವೂ ನಮ್ಮ ಹೋರಾಟ ಇರುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಮಾತನಾಡಿದ ಅವರು, ಕಾವೇರಿಯಿಂದ ಗೋದಾವರಿವರೆಗೆ ಕರ್ನಾಟಕ ರಾಜ್ಯವನ್ನು ರಚನೆ ಮಾಡಲಾಯಿತು. ಆದರೆ, ಮಹಾರಾಷ್ಟ್ರದವರು ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಸೇರಿಸಬೇಕೆಂದು ಹೇಳಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದ ಮಹಾಜನ್ ಆಯೋಗ ರಚಿಸಲಾಯಿತು. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾದರೂ ಮಹಾಜನ್ ವರದಿ ಅಂತಿಮವೆಂದು ಒಪ್ಪಿಕೊಂಡಿದ್ದೇವೆ. ಆದರೆ, ಮಹಾರಾಷ್ಟ್ರ ಮಹಾಜನ್ ವರದಿ ಒಪ್ಪಲು ತಯಾರಿಲ್ಲ. ಆಗಿಂದಾಗ್ಗೆ ಮಹಾರಾಷ್ಟ್ರ ಈ ವಿಚಾರವನ್ನು ಕೆದಕಿಕೊಂಡು ಬರುತ್ತಿದೆ ಎಂದರು.

ಕಾಸರಗೋಡಿನ ಚಂದ್ರಗಿರಿ ಬಿಟ್ಟರೆ ಉಳಿದ ಪ್ರದೇಶಗಳಲ್ಲಿ ಮತ್ತು ಪಾವಗಡದ ಮಡಕಶಿರಾದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಆದರೆ, ಈ ಪ್ರದೇಶಗಳು ನಮಗೆ ಸೇರಿಲ್ಲ. ಕೊಂಕಣಿ ಮಾತನಾಡುವವರನ್ನು ಮರಾಠಿಗರು ಎನ್ನುತ್ತಾರೆ. ಬೆಂಗಳೂರಿನಲ್ಲಿ ಶೇ.೨೨ರಷ್ಟು ತಮಿಳಿಗರು, ಮತ್ತೊಂದು ಕಡೆ ತೆಲುಗು ಭಾಷಿಕರು ಇದ್ದಾರೆ. ಈ ರೀತಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಮಾಡುತ್ತಾ ಹೋದರೆ ಕರ್ನಾಟಕ ಹಳೆ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಬೇಕಾಗುತ್ತದೆ ಎಂದರು.

ಗಡಿ ವಿಚಾರಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದರೂ ರಾಜಕೀಯ ಕಾರಣಕ್ಕಾಗಿ ಮುಂದಾಗುತ್ತಿಲ್ಲ. ಪ್ರತಿ ಚುನಾವಣೆ ಬಂದಾಗ ಗಡಿ ವಿಚಾರ, ಭಾವನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲೆ ಜಿಲ್ಲೆಗೂ ವಿವಾದ: ನದಿ ನೀರಿನ ವಿಚಾರದಲ್ಲಿ ರಾಜ್ಯಗಳ ನಡುವೆ ಮಾತ್ರವಲ್ಲ, ಜಿಲ್ಲೆ-ಜಿಲ್ಲೆ ನಡೆವೆಯೂ ವಿವಾದ ಉಂಟಾಗಿದೆ. ಮದ್ರಾಸ್ ಆಳ್ವಿಕೆ ಇದ್ದಾಗ ಬರವಣಿಗೆ ಮೂಲಕ ಮೆಟ್ಟೂರು ಡ್ಯಾಂ ನಿರ್ಮಾಣಕ್ಕೆ ಬರೆದುಕೊಟ್ಟಿದ್ದು ತಪ್ಪು. ತಮಿಳುನಾಡು ವರ್ಷಕ್ಕೆ 11ರಿಂದ 12 ಲಕ್ಷ ಹೆಕ್ಟೇರ್‌ನಲ್ಲಿ ಮೂರು ಬೆಳೆ ಬೆಳೆದರೆ, ಕಾವೇರಿ ಪ್ರಾಂತ್ಯದಲ್ಲಿ ೫ ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಬೆಳೆಯಲಾಗುತ್ತಿದೆ. ಉಪ ನದಿಗಳನ್ನು ಕಾವೇರಿ ವ್ಯಾಪ್ತಿಗೆ ಸೇರಿಸಿದ್ದು ತಪ್ಪಾಗಿದೆ. ನಮ್ಮ ನೀರನ್ನು ನಾವು ಬಳಸಿಕೊಳ್ಳುವುದಕ್ಕೂ ಅವಕಾಶ ಸಿಗದೆ ಸಮುದ್ರಕ್ಕೆ ಪೋಲಾಗುತ್ತಿದೆ. ಹೇಮಾವತಿ ನದಿಯಿಂದ ನಾಗಮಂಗಲ, ಕೆ.ಆರ್.ಪೇಟೆ, ತುಮಕೂರು ಭಾಗಕ್ಕೆ ನೀರು ಕೊಡಬಹುದಾಗಿತ್ತು. ಹೇಮಾವತಿ ನೀರು ಹೊರಗೆ ಹೋದರೆ ಕಾವೇರಿ ನದಿಯಿಂದ ಬಿಡುಗಡೆ ಮಾಡುತ್ತಾರೆಂದು ಲೆಕ್ಕ ಕೊಡಿ ಎನ್ನುತ್ತದೆ. ಹೊರರಾಜ್ಯಗಳ ವಿಚಾರ ಇರಲೀ ನಮ್ಮ ಭಾಗದ ನೀರನ್ನು ಬಳಸಿಕೊಳ್ಳಲು ದೊಡ್ಡತನ ಬಂದಿಲ್ಲ ಎಂದು ಹೇಳಿದರು.

ಎತ್ತಿನಹೊಳೆ, ಕುಮಾರಧಾರ ಇನ್ನಿತರ ನದಿಗಳ ನೀರನ್ನು ತಿರುಗಿಸುವುದು ಸೇರಿದಂತೆ ಅನೇಕ ಯೋಜನೆಗಳನ್ನು ಕೈಗೆತ್ತಿಕೊಳ್ಳಲು 1,500 ಕೋಟಿ ರೂ. ಬಳಕೆ ಮಾಡಲಾಗುವುದು ಎಂದರು.


ಅಂತರ್‌ರಾಜ್ಯ ಗಡಿ, ನೀರಾವರಿ ವಿವಾದಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮವನ್ನೇ ಮಾಡುವ ಬಗ್ಗೆ ಚಿಂತನೆ ಮಾಡಬೇಕಾಗಿದೆ. ರಾಜಕೀಯವಾಗಿ ನಾವು ನಮ್ಮ ಹಕ್ಕನ್ನು ಪಡೆಯಲು ವಿಫಲವಾಗಿದ್ದೇವೆ. ಸದಾ ಕಾಲ ಅವರ ಮರ್ಜಿಯಲ್ಲಿ ಕುಳಿತುಕೊಳ್ಳುವ ಕೆಲಸಮಾಡದೆ ನಾವೇ ಕಮಾಂಡ್ ಮಾಡುವಂತಾಗಬೇಕಿದೆ.

-ಜೆ.ಸಿ.ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ.

andolanait

Recent Posts

ಇರಾನ್ ಮಹಿಳಾ ಫುಟ್ಬಾಲ್ ತಂಡಕ್ಕೆ ಹೆಚ್ಚುತ್ತಿರುವ ಭಯ ; ಆಸ್ಟ್ರೇಲಿಯಾದಲ್ಲಿ ಆಶ್ರಯಕ್ಕೆ ಹೆಚ್ಚುತ್ತಿರುವ ಕರೆ!

ಗೋಲ್ಡ್ ಕೋಸ್ಟ್ (ಆಸ್ಟ್ರೇಲಿಯಾ) :  ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಏಷ್ಯಾ ಮಹಿಳಾ ಫುಟ್ಬಾಲ್ ಕಪ್ 2026ನಲ್ಲಿ ಭಾಗವಹಿಸಿದ್ದ ಇರಾನ್ ರಾಷ್ಟ್ರೀಯ ಮಹಿಳಾ…

7 hours ago

ಜಾಗತಿಕ ತೈಲ ಬೆಲೆಗಳಲ್ಲಿ ಭಾರೀ ಏರಿಕೆ ; ಬ್ಯಾರೆಲ್‌ಗೆ 120 ಡಾಲರ್ ಗಡಿ ದಾಟಿದ ತೈಲ ಬೆಲೆ

ಹೊಸದಿಲ್ಲಿ : ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್ ದಾಳಿಗಳು ಮತ್ತು ಇರಾನ್‌ಗೆ ಹೊಸ ಸುಪ್ರೀಂ ಲೀಡರ್ ನೇಮಕದ ನಂತರ ಮಧ್ಯಪ್ರಾಚ್ಯದಲ್ಲಿ ತೀವ್ರ…

8 hours ago

ಮಧ್ಯಪ್ರಾಚ್ಯ ಸಂಘರ್ಷ | ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ತೆರಳುತಿದ್ದ ಇಂಡಿಗೊ ವಿಮಾನ ಯು-ಟರ್ನ್‌

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ವಾಯುಪ್ರದೇಶದಲ್ಲಿ ತುರ್ತು ನಿರ್ಬಂಧಗಳು ಜಾರಿಯಾಗಿರುವುದರಿಂದ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೋಗುತಿದ್ದ ಇಂಡಿಗೊ…

9 hours ago

ಎಂಡಿಎ ಬಜೆಟ್‌ | ಮೈಸೂರು ಅಭಿವೃದ್ಧಿಗೆ ಒತ್ತು ; 799.90 ಕೋಟಿ ರೂ. ಸಂಪನ್ಮೂಲ ನಿರೀಕ್ಷೆ

ಮೈಸೂರು : ಮೈಸೂರು ಅಭಿವೃದ್ಧಿ ಪ್ರಾಧಿಕಾರ (MDA) ಈ ಬಾರಿಯ ಆರ್ಥಿಕ ವರ್ಷದ ಬಜೆಟ್‌ನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ತೀವ್ರ…

10 hours ago

ಮೈಸೂರು | 24 ಅಪರಾಧ ಪ್ರಕರಣ ಭೇಧಿಸಿದ ಪೊಲೀಸರು ; 20ಕ್ಕೂ ಹೆಚ್ಚು ಆರೋಪಿಗಳು ವಶಕ್ಕೆ

ಮೈಸೂರು : ಮನೆಗಳ್ಳತನ, ವಾಹನ ಕಳ್ಳತನ, ದರೋಡೆ ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದಿದ್ದ 24 ಅಪರಾಧ ಪ್ರಕರಣಗಳನ್ನು…

11 hours ago

ʻಪಂಚ ಗ್ಯಾರಂಟಿʼಯಿಂದ ಮಹಿಳಾ ಸಬಲೀಕರಣ ಸಾಧ್ಯ : ಅರುಣ್ ಕುಮಾರ್

ಮೈಸೂರು : ರಾಜ್ಯ ಸರ್ಕಾರದ ʻಪಂಚ ಗ್ಯಾರಂಟಿʼ ಯೋಜನೆಗಳಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ…

11 hours ago