ಮೈಸೂರು: ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಐವರು ಸದಸ್ಯರ ತಂಡ ಮಂಗಳೂರು ಬಾಂಬ್ ಸ್ಛೋಟ ಪ್ರಕರಣದ ತನಿಖೆುಂನ್ನು ತೀವ್ರಗೊಳಿಸಿದೆ.
ಪ್ರಮುಖ ಶಂಕಿತ ಆರೋಪಿ ಎಚ್ ಮೊಹಮ್ಮದ್ ಶಾರಿಖ್ (೨೪) ನಗರದಲ್ಲಿ ಬಾಡಿಗೆ ಮನೆುಂಲ್ಲಿ ವಾಸವಿದ್ದುದು ಬೆಳಕಿಗೆ ಬಂದ ನಂತರ ಎಲ್ಲರ ಗಮನ ಮೈಸೂರಿನತ್ತ ತಿರುಗಿದೆ. ಬಿಕಾಂ ಪದವೀಧರನಾದ ಶಾರಿಖ್ ಮೈಸೂರಿನಲ್ಲಿ ಮೊಬೈಲ್ ಫೋನ್ ರಿಪೇರಿ ತರಬೇತಿ ಪಡೆದಿರುವ ಶಂಕೆ ವ್ಯಕ್ತವಾಗಿದೆ.
ಎನ್‌ಐಎ ತಂಡ ಶಾರಿಖ್ ಮೈಸೂರಿಗೆ ಭೇಟಿ ನೀಡಿದ ಸಂಗತಿಗಳು, ಸಂಪರ್ಕಗಳು ಮತ್ತು ಸ್ಥಳಗಳ ತನಿಖೆುಂನ್ನು ಎನ್‌ಐಎ ತಂಡ ನಡೆಸುತ್ತಿದೆ.
ಭಾನುವಾರವೇ ನಗರಕ್ಕೆ ಆಗಮಿಸಿರುವ ಎನ್‌ಐಎ ತಂಡ ನಕಲಿ ದಾಖಲೆಗಳನ್ನು ಬಳಸಿ ಬಾಡಿಗೆಗೆ ಪಡೆದಿದ್ದ ಲೋಕನಾಯಕನಗರದಲ್ಲಿ ಶಾರಿಖ್ ವಾಸವಿದ್ದ ಮನೆಗೆ ಭೇಟಿ ನೀಡಿತ್ತು. ಆತನ ಕೊಠಡಿಯಲ್ಲಿ ಪತ್ತೆಾಂದ ಸ್ಛೋಟಕ ವಸ್ತುಗಳ ಬಗ್ಗೆಯೂ ಎನ್‌ಐಎ ಮಾಹಿತಿ ಪಡೆದುಕೊಂಡಿದೆ.
ಈಮಧ್ಯೆ, ಮೈಸೂರು ಪೊಲೀಸರು ಮೊಬೈಲ್ ಫೋನ್‌ಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಹೇಳಲಾದ ಶಾರಿಖ್‌ನ ಸ್ನೇಹಿತನ ವಿಚಾರಣೆಯನ್ನು ಮುಂದುವರಿಸಿದ್ದಾರೆ. ಅಲ್ಲದೆ, ಮೈಸೂರಿನಲ್ಲಿ ಸಿಸಿಬಿ ಅಧಿಕಾರಿಗಳು, ವಿಶೇಷ ದಳ ಸೇರಿದಂತೆ ಗುಪ್ತಚರ ದಳ ಹೊಸ ಬಾಡಿಗೆದಾರರ ಮಾಹಿತಿ ಕಲೆಹಾಕುತ್ತಿದೆ ಮತ್ತು ಕಟ್ಟುನಿಟ್ಟಿನ ನಿಗಾ ಇರಿಸಿದೆ.
ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆ, ಕಾನೂನು ಸುವ್ಯವಸ್ಥೆಯಲ್ಲಿ ಲೋಪ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಇನ್ನೂ ದೀರ್ಘ ಚರ್ಚೆ…
ಬೆಳಗಾವಿ : ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂಬ ವಿಚಾರದ ಹಿನ್ನೆಲೆಯಲ್ಲಿ ಪರೀಕ್ಷೆ ಮಾಡಿ ವರದಿ ನೀಡಲು ಇಲಾಖೆಗೆ ಸೂಚಿಸಲಾಗಿದೆ ಎಂದು…
ಹೊಸದಿಲ್ಲಿ : ದಿಲ್ಲಿಯಲ್ಲಿ ಉಂಟಾದ ದಟ್ಟವಾದ ಹೊಗೆ ಹಾಗೂ ತೀವ್ರ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 21 ಶಾಸಕರು ಮತ್ತು 7…
ಹೊಸದಿಲ್ಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೋಟೀಸ್ʼಗೆ ಉತ್ತರ ನೀಡಲು ಕಾಲಾವಕಾಶ ಕೋರುವೆ ಎಂದು ಡಿಸಿಎಂ…
ಬಳ್ಳಾರಿ : ನಗರದಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಾರಿಯಲ್ಲಿ ಸಾಗಿಸುತ್ತಿದ್ದ ಯಮಹಾ ಕಂಪನಿಯ 40 ಬೈಕ್‌ಗಳು ಸಂಪೂರ್ಣವಾಗಿ ಸುಟ್ಟು…
ಬೆಂಗಳೂರು : ಆಸ್ಪ್ರೇಲಿಯಾದ ಬೀಚ್‌ನಲ್ಲಿ ಭಾನುವಾರ ಮಧ್ಯಾಹ್ನ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ…