ಮೂರು ದಿನದ ಉತ್ಸವದಲ್ಲಿ ಗೋವಾ, ಕಲೆ, ಸಂಸ್ಕೃತಿ , ಆಹಾರ, ಇತಿಹಾಸದ ಅನಾವರಣ
ಮೈಸೂರು: ನೆರೆಯ ರಾಜ್ಯ ಗೋವಾ ಪೋರ್ಚುಗೀಸರಿಂದ ಮುಕ್ತಿ ಪಡೆದು 60 ವರ್ಷವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ‘ಗೋವಾ @ 60ʼ ಸಂಭ್ರಮವನ್ನು ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಮೈಸೂರಿನಲ್ಲಿ ಆರಂಭಿಸಿರುವ ಮೂರು ದಿನಗಳ ಕಾಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಮೈಸೂರಿನ ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರು ಡೊಳ್ಳು ಬಾರಿಸುವ ಮೂಲಕ ಮೂರು ದಿನದ ಉತ್ಸವಕ್ಕೆ ಮೈಸೂರಿನ ನಜರ್ಬಾದ್ನ ಹೈದರಾಲಿ ರಸ್ತೆಯಲ್ಲಿರುವ ನೆಕ್ಸಸ್ ಮಾಲ್ನಲ್ಲಿ ಚಾಲನೆ ನೀಡಿದರು.
ಈ ವೇಳೆ ಗೋವಾದ ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಂಡವು. ವಿವಿಧ ಕಲಾವಿದರು ಪ್ರದರ್ಶನ ನೀಡುತ್ತಾ ಗಮನ ಸೆಳೆದರು.
ದಿನವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋವಾ ಅಡುಗೆಯ ಪರಿಚಯ, ಕ್ವಿಜ್ ಸಹಿತ ನಾನಾ ಸ್ಪರ್ಧೆಗಳು ನಡೆದವು. ಶನಿವಾರ ಹಾಗೂ ಭಾನುವಾರ ಕೂಡ ಇಂಥದೇ ಕಾರ್ಯಕ್ರಮಗಳು ಮೈಸೂರಿಗರನ್ನು ಆಕರ್ಷಿಸಲಿವೆ.
ಗೋವಾ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಅಹಮದಾಬಾದ್, ಉದಯಪುರ, ವಾರಣಾಸಿ, ಮಧುರೈ, ತಿರುವನಂತಪುರಂನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಅದರ ಭಾಗವಾಗಿ ಗೋವಾದ ಕಲೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಸಂಗೀತ, ನೃತ್ಯ ಕಾರ್ಯಕ್ರಮದಲ್ಲಿರಲಿದೆ. ಜತೆಗೆ ಗೋವಾದ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ಕ್ಲಿಕ್ಸ್ ಬ್ಯಾಂಡ್, ಶಿಗ್ಮೋ ಪರೇಡ್, ಘೋಡೆ ಮೋಡ್ನಿ, ಲ್ಯಾಂಪ್ಡ್ಯಾನ್ಸ್, ಕಿಂಗ್ ಮೊಮೊ ನೃತ್ಯ ಪ್ರದರ್ಶನವಿದೆ. ಮೈಸೂರಿನಲ್ಲೇ ಗೋವಾ ಸಂಸ್ಕೃತಿ ಆನಂದಿಸಬಹುದಾದ ಅವಕಾಶ ಇದಾಗಿದ್ದು, ಮೈಸೂರಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅನಿಲ್ ದಲಾಲ್ ವಿವರಣೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗೋವಾ ಪ್ರವಾಸೋದ್ಯಮ ಅಧಿಕಾರಿಗಳಾದ ವಿಷ್ಣು ಗಾಂವ್ಕರ್, ರಸಿಕಾ ನಾಯಕ್ ಹಾಜರಿದ್ದರು.
ಮೈಸೂರು: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್…
ಮಹಾದೇಶ್ ಎಂ ಗೌಡ ಹನೂರು: ಅಂತರ ರಾಜ್ಯ ನೆರೆಯ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಮಾಪುರ ರಸ್ತೆಯಲ್ಲಿ ನಿತ್ಯ ಗಜರಾಜ ಎಂಟ್ರಿ…
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹೆಣ ಬಿದ್ದಿದೆ ಎಂದು ಹೇಳಿಕೆ…
ಬೆಂಗಳೂರು: ನಾಯಕತ್ವ ಬದಲಾವಣೆ ಚರ್ಚೆಗೆ ಹೈಕಮಾಂಡ್ ಸ್ಪಷ್ಟನೆ ಕೊಡಬೇಕು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ. ಜನವರಿ.16ಕ್ಕೆ ಸಿಹಿಸುದ್ದಿ ಬರಲಿದೆ…
ಹಾಸನ: ಪತಿ ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನ ಯಡೂರು ಗ್ರಾಮದಲ್ಲಿ…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ…