ಚಾಮರಾಜನಗರ

ಕಸದ ಹಳ್ಳಿಯಾದ ಕೌದಳ್ಳಿ ಗ್ರಾಮ

ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮ ಕೌದಳ್ಳಿ ಗ್ರಾಮ ಪಂಚಾಯತಿ ಸೇರಿದ್ದು, ಕರ್ನಾಟಕ ರಾಜ್ಯದ ಎರಡನೇ ಅತಿ ಹೆಚ್ಚು ಲಾಭ ಗಳಿಸುವ ಮೇಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇವಸ್ಥಾನಕ್ಕೆ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ಇದೆ. ಮತ್ತು ತಮಿಳುನಾಡು ಕರ್ನಾಟಕ ಸಂಪರ್ಕಿಸುವ ಹೆದ್ದಾರಿ. ಸ್ವಾತಂತ್ರ ಪೂರ್ವದಲ್ಲಿದ್ದ ಗ್ರಾಮದ ರೀತಿಯಲ್ಲಿಯೇ ಇರುವ ಈ ಗ್ರಾಮ ಹೆಚ್ಚು ಮುಸ್ಲಿಂ ಮತ್ತು ನಾಯಕ ಜನಾಂಗ ಇರುವ ದೊಡ್ಡ ಗ್ರಾಮ. ಮೊದಲಿಂದಲೂ ಕೌದಳ್ಳಿ ಗ್ರಾಮ ಅನೈರ್ಮಲ್ಯ ಎದ್ದು ಕಾಣುತ್ತಿದೆ.ಯಾವ ಆಡಳಿತವು ಮಂಡಳಿ ಗ್ರಾಮ ಪಂಚಾಯತಿಯಲ್ಲಿ ಅಸ್ತಿತ್ವಕ್ಕೆ ಬಂದರು ಶಾಶ್ವತ ಪರಿಹಾರ ಕಾಣಲೇ ಇಲ್ಲ. ಕಿರಿದಾದ ರಸ್ತೆ, ಹೂಳು ತುಂಬಿರುವ ಚರಂಡಿ, ಕಸದ ರಾಶಿ ರಾಶಿ ಗುಡ್ಡೆಗಳು ಸಾಮಾನ್ಯವಾಗಿದೆ.

ಮೂಲಭೂತ ಸೌಕರ್ಯ ವಂಚಿತ  ಗ್ರಾಮಸ್ಥರಆಕ್ರೋಶ: ಕೌದಳ್ಳಿಯ ನಾಯಕ ಸಮುದಾಯದ ಕೆಲವು ಬೀದಿ ಬೀದಿಗಳಲ್ಲಿ ಸರಿಯಾದ ಸಿ ಸಿ ರಸ್ತೆ ಗಳು ಇಲ್ಲ ಮತ್ತೆ ಚರಂಡಿ ಗಳು ಇಲ್ಲ ಇದರಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಕೆಲವು ಕಡೆ ಮಡುಗಟ್ಟಿ ನಿಂತಿದೆ.ಇದರಿಂದ ಅನೈರ್ಮಲ್ಯ ಉಂಟಾಗುತ್ತದೆ ಜತೆಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಪರಿಣಾಮ ಎಲ್ಲೆಲೂ ಕಸದ ರಾಶಿ ಉಂಟಾಗಿದೆ ಇದರಿಂದ ಕೌದಳ್ಳಿ ಗ್ರಾಮವು ಕಸದ ಹಳ್ಳಿಯಾಗಿ ಮಾರ್ಪಟ್ಟಿದೆ

ಇಲ್ಲಿನ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು ಮತ್ತೆ ಸೊಳ್ಳೆಗಳ ಕಾಟ ವಿಪರೀತ ಮಳೆ ಬಂತೆಂದರೆ ಕಸದ ರಾಶಿ ಕೊಳೆತ ತ್ಯಾಜ್ಯವಾಗಿ ಮಾರ್ಪಟ್ಟು ದುರ್ವಾಸನೆ ಬಿರುತ್ತಿದೆ ಇದರಿಂದ ಜನರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗುತ್ತದೆ.

 

andolana

Recent Posts

ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣದ ಬಗ್ಗೆ ಕಳವಳಗಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…

13 hours ago

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

17 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

17 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

17 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

17 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

18 hours ago