ಮೈಸೂರು

ಶಬರಿಯಂತೆ ಸಿಹಿಯನ್ನು ಮಾತ್ರ ರಾಮನಿಗೆ ನೈವೇದ್ಯ ಮಾಡಿದರಾಗದೇ!

ಕಾದಿರುವಳು ಶಬರಿ..

ದಟ್ಟ ಕಾನನದ ಕಡು ಘೋರ ಕತ್ತಲಲೂ
ಪುಟ್ಟ ದೀಪವೊಂದನುರಿಸಿ ಕಾದಿರುವಳು ಶಬರಿ,
ಹಣ್ಣಾಗಿಹ ಮೈಮನಗಳ ಸಿಹಿ ಹಣ್ಣು ಹೆಕ್ಕಲೆಂದೇ ದಣಿಸಿ,
ಮೈಮನಗಳ ಕಣ್ಣಾಗಿಸಿ ಕಾದಿರುವಳು ಶಬರಿ.

ಶಬರಿ ಮಾತೆಯ ತಪ ಬರಿಯ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ರಾಮಾಯಣದ ಕಾಲಮಾನಕ್ಕೂ ವರ್ತಮಾನಕ್ಕೂ ಯುಗಯುಗಾಂತರದ ಅಂತರ. ಅದು ತ್ರೇತಾಯುಗ, ಇದು ಕಲಿಯುಗ. ಆದರೂ ಶಬರಿ ಮಾತೆಯ ತಪೋಬಲ,‌ ಉಪಾಸನೆ ಬೆಟ್ಟದಷ್ಷು, ಅದಕ್ಕೇ ಇರಬೇಕು ಸ್ವಾಮಿ ಅಯ್ಯಪ್ಪ ನೆಲೆಸಿರುವ ಕ್ಷೇತ್ರದ ಹೆಸರೇ ಶಬರಿ ಬೆಟ್ಟ ಅಥವಾ ಶಬರಿಮಲೆ!

ಭವ್ಯ ಭಾರತ ತನ್ನ ಮರ್ಯಾದಾಪುರುಷೋತ್ತಮನ್ನು ಅಯೋಧ್ಯೆಯಲ್ಲಿ ಪ್ರತಿಷ್ಟಾಪಿಸಲು ಸಿದ್ಧವಾಗುತ್ತಿರುವಂತೆಯೇ ರಾಮಾಯಣ ಮತ್ತು ಮಹಾಭಾರತಗಳು ಎಂದಿಗಿಂತ ಇಂದು ಪ್ರಸ್ತುತವೆನಿಸುತ್ತದೆ. ಶಬರಿ ಕಾಯುವಿಕೆಯಲ್ಲಿ ಕಲಿಯುವಿಕೆ ಬಹಳಷ್ಟಿದೆ. ನಿತ್ಯ ಶ್ರೀರಾಮನ ಆಗಮನದ ಆಕಾಂಕ್ಷೆಯಲಿ,‌ ಅವನ ಸತ್ಕರಿಸಿ ಉಪಚರಿಸಲಿಕ್ಕಾಗಿ ಪ್ರತಿ ದಿನ ಹಣ್ಣುಗಳನ್ನು ಆರಿಸಿ ಆಯ್ದು ಕಾದಿರುತ್ತಿದ್ದಳು. ಇದು ಶಬರಿ ಮಾತೆಯ ನಿತ್ಯ ಕಾಯಕ.

ಆಯ್ದ ಹಣ್ಣುಗಳಲ್ಲಿ ಕಹಿಯಾಗಿದ್ದವು ಎಷ್ಟೋ? ಒಗಚು ಒಗರು ಎಷ್ಟೋ? ಹುಳಿಯಾಗಿದ್ದವದೆಷ್ಟೋ? ಇದೆಲ್ಲದರ ನಡುವೆ ಆರಿಸಿ ಆರಿಸಿ ಶ್ರೀರಾಮನಿಗಾಗಿ ಅತ್ಯುತ್ತಮವಾದ ಹಣ್ಣುಗಳನ್ನು ಬೇರ್ಪಡಿಸುವ ಸಂಭ್ರಮ. ಒಂದು ಸಿಹಿ ಹಣ್ಣು ಕಚ್ಚುವ ಮೊದಲ ಎರಡು ಹುಳಿಯಿದ್ದಿರಬಹುದು, ಹತ್ತು ಕಾರ್ಕೋಟಕ ಕಹಿ, ಒಂದೆರಡು ಒಗಚು. ಇವಿಷ್ಟರಲ್ಲೇ ಶಬರಿಯ ನಾಲಿಗೆ ಜಡ್ಡು ಹಿಡಿದಿರಬಹುದು. ಆದರೂ ಅನುದಿನದ ಪ್ರಯತ್ನ. ಕಹಿ, ಹುಳಿ, ಒಗಚೆಲ್ಲಾ ಹೊರಗೆ, ಸಿಹಿ ಸಿಹಿಯಾದ ಹಣ್ಣುಗಳು ಮಾತ್ರ ಶ್ರೀರಾಮನಿಗೆ.

ನಮ್ಮ ನಿಮ್ಮ ಬದುಕಿನ ಅನುಭವವೂ ಇದೇ ತಾನೇ, ಎಂದಾದರೊಂದು ದಿನ ಶ್ರೀರಾಮ ದರ್ಶನ ಭಾಗ್ಯ ದೊರೆಕೀತೆಂಬ ಶಬರಿ ಆಕಾಂಕ್ಷೆಯವರೇ ತಾನೇ! ನಮ್ಮ ಜೀವನದ ಅನುಭವಗಳನ್ನು ನೋಡಿದಾಗ, ಅವೂ ಕೂಡ ಈ ಶಬರಿ ಆರಿಸಿಟ್ಟ ಹಣ್ಣುಗಳಂತೆಯೇ. ಕೆಲವು ಕಹಿ, ಹಲವು ಹುಳಿ, ಅಲ್ಲೊಂದು ಇಲ್ಲೊಂದು ಸಿಹಿ. ಆದರೆ ನಾವು, ಸಿಹಿಯನ್ನು ಮರೆತು ಬರೀ ಕಹಿ ಹುಳಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಬದುಕಿಗೇ ಹುಳಿ ಹಿಂಡಿಕೊಳ್ಳುತ್ತೀವಿ. ಶಬರಿ ಹಾಗೇ ನಾವೂ ಕಹಿ ಹುಳಿ ಹೊರಗೆಸೆದು ಸಿಹಿಯಾದದ್ದನ್ನೆಲ್ಲಾ ಶ್ರೀರಾಮನಿಗೆ ನೈವೇದ್ಯ ಮಾಡಿದರಾಗದೇ?

ಹೃದಯ ಹೂದೋಟವಾಗಿರಲಿ,
ದುರ್ವಾಸನೆಯ ಗೊಬ್ಬರದಲರಳಿ
ಸುವಾಸನೆಯ ಸುತ್ತ ಪಸರಿಸುವಂತೆ
ಹೃದಯ ಹೂದೋಟವಾಗಿರಲಿ.

 

 – ಅನಿರುದ್ಧಪದ್ಮನಾಭ, ಮೈಸೂರು

andolanait

Recent Posts

ಸಭೆ ನಡೆಸುತ್ತಿರುವಾಗಲೇ ತೀವ್ರ ಅಸ್ವಸ್ಥ ; ಡಿಸಿಎಂ ಪವನ್‌ ಕಲ್ಯಾಣ್‌ಗೆ ದಿಢೀರ್‌ ಶಸ್ತ್ರ ಚಿಕಿತ್ಸೆ,

ಹೈದರಾಬಾದ್ : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಅವರಿಗೆ ಹೈದರಾಬಾದ್‌ನಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ…

13 mins ago

ಸರ್ವಾಧಿಕಾರಿ ಬಿಜೆಪಿಯೇ ಮಹಿಳಾ ವಿರೋಧಿ : ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ

ಬೆಂಗಳೂರು : ಮಹಿಳಾ ಮೀಸಲಾತಿ ಪರಿಕಲ್ಪನೆ ಕಾಂಗ್ರೆಸ್‌ನ ಕೂಸು. ಮಸೂದೆಗೆ ಸೋಲಾಗಲಿದೆ ಎಂದು ಗೊತ್ತಿದ್ದರೂ ಸರ್ವಾಧಿಕಾರಿಯಂತೆ ಯಾವುದೇ ಚರ್ಚೆ ಮಾಡದೆ,…

43 mins ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ಕೊಲೆ ಪ್ರಕರಣ : ಎಸ್‌.ಪಿ.ಮಲ್ಲಿಕಾರ್ಜುನ ಹೇಳಿದ್ದೇನು?

ಮೈಸೂರು : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ…

58 mins ago

ಇಟಲಿಯಲ್ಲಿ ಇಬ್ಬರು ಭಾರತೀಯರಿಗೆ ಗುಂಡಿಕ್ಕಿ ಹತ್ಯೆ

ರೋಮ್‌ : ಇಟಲಿಯ ಬರ್ಗಾಮೊ ಪ್ರಾಂತ್ಯದ ಕೊವೊದಲ್ಲಿ ಇಬ್ಬರು ಭಾರತೀಯರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊವೊ ನಿವಾಸಿ ರಾಗಿಂದರ್ ಸಿಂಗ್…

1 hour ago

ಮೈಸೂರು | ಪಬ್‌ನಲ್ಲಿ ಗಲಾಟೆ ; ಓರ್ವ ಯುವಕನ ಕೊಲೆ

ಮೈಸೂರು : ಪಬ್‌ನಲ್ಲಿ ನಡೆದ ಗಲಾಟೆ ಪರಿಣಾಮ ಓರ್ವ ಯುವಕ ಕೊಲೆಯಾಗಿರುವ ಘಟನೆ ಮೈಸೂರಿನ ವಿಜಯನಗರದ ಎರಡನೇ ಹಂತದ ರೆಸ್ಟೋರೆಂಟ್‌ನಲ್ಲಿ…

1 hour ago

ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಹಾವೇರಿ: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡನೆಯನ್ನು ಸೇರಿಸಿ ಮಂಡಿಸಿದ್ದಾರೆ. ನಾವು…

2 hours ago