ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಆಚರಣೆ ಶನಿವಾರ (ಜು.27) ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಅದ್ಧೂರಿಯಾಗಿ ನೆರವೇರಿತು.
ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ರಾಜ್ಯದ ಹಲವು ಭಾಗಗಳಿಂದ ಭಕ್ತಾಧಿಗಳು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾದರು. ವರ್ಧಂತಿ ಪ್ರಯುಕ್ತ ದೇವಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.
ಇಂದು ಬೆಳಿಗ್ಗೆಯಿಂದಲೇ ತಾಯಿ ಚಾಮುಂಡಿ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ಹಲವು ವಿಶೇಷ ಪೂಜಾ ಕೈಕಂರ್ಯಗಳು ನಡೆದವು.
ದೇವಾಲಯವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದ್ದು, ಚಾಮುಂಡಿ ದರ್ಶನ ಪಡೆದು ಭಕ್ತರು ಪುನೀತರಾದರು.
ಇನ್ನು ಚಾಮುಂಡಿ ತಾಯಿಯ ಪಲ್ಲಕ್ಕಿ ಉತ್ಸವಕ್ಕೆ ರಾಜಾಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತಾ ಪ್ರಮೋದಾದೇವಿ ಒಡೆಯರ್ ಅವರು ಚಾಲನೆ ನೀಡಿದರು. ಇದೇ ದಿನ ರಾತ್ರಿ 8 ಗಂಟೆಗೆ ಅರಮನೆ ಮಾದರಿಯ ದರ್ಬಾರ್ ಉತ್ಸವ ಚಾಮುಂಡಿ ತಾಯಿಗೂ ನಡೆಯಲಿದೆ.
ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…
ಮಂಡ್ಯ ಜಿಯ ಮದ್ದೂರಿನಲ್ಲಿ ಭಾನುವಾರ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಗೌರಿ -ಗಣೇಶ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್…
ನಾಡಿಗೆ ಮಾದರಿ! ವಿವಿಧ ಧರ್ಮ ಸಮುದಾಯಗಳ ಮನಸುಗಳ ಅಕ್ಕರೆಯಲಿ ಬೆಸೆವ ಸ್ನೇಹ ಸೌಹಾರ್ದ ಸಾಮರಸ್ಯದ ಪ್ರತೀಕ, ಹಬ್ಬ ಉತ್ಸವಗಳು! ನಾಡಿಗೆ…
ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ,…
ಶ್ರೇಯಸ್ ದೇವನೂರು ಅಭಿವೃದ್ಧಿಯ ಹೆಸರಿನಲ್ಲಿ ಅರ್ಧ ಕಾಮಗಾರಿ, ಸಂಚಾರದ ಹೆಸರಿನಲ್ಲಿ ಹೆಚ್ಚುತ್ತಿರುವ ಸಂಕಷ್ಟ ಮೈಸೂರು ದಸರಾ ಎಂದರೆ ಕೇವಲ ಹತ್ತು…
ಸಂದರ್ಶನ: ಬಾನಾಸು ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…