ಬಳ್ಳೂರಹುಂಡಿ ಗ್ರಾಮಸ್ಥರಿಗೆ ಪರಿಹಾರ ಮರೀಚಿಕೆ
ಶ್ರೀನಿವಾಸ ಟಿ.ಎಲ್.
ಮೈಸೂರು: ಹುಲಿ ದಾಳಿಯಿಂದ ತೀವ್ರ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಂಜನಗೂಡು ತಾಲ್ಲೂಕಿನ ಬಳ್ಳೂರು ಹುಂಡಿಯ ದನಗಾಹಿ ಸ್ವಾಮಿ ದಾಸಯ್ಯ (೫೪) ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸ್ವಾಮಿ ಮೇಲಿನ ದಾಳಿ ಬಳಿಕ ಅವರ ಹಸುವಿನ ಮೇಲೆ ದಾಳಿ ಮಾಡಿರುವ ಹುಲಿ ಅದನ್ನು ಕೊಂದು ಮಾಂಸವನ್ನು ಭಕ್ಷಿಸಿದೆ.
ಹಾಡಹಗಲೇ ನಡೆದ ಹುಲಿ ದಾಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬಳ್ಳೂರು ಹುಂಡಿಗೆ ಮಂಗಳವಾರ ಭೇಟಿ ನೀಡಿದ ” ಆಂದೋಲನʼ ತಂಡದೊಂದಿಗೆ ಮಾತನಾಡಿದ ಗ್ರಾಮಸ್ಥರು “” ಅರಣ್ಯ ಇಲಾಖೆ ನಮಗೆ ಬೇರೆ ಕಡೆ ಜಾಗ ನೀಡಲಿ. ನಾವು ಅಲ್ಲಿಗೆ ಹೋಗಿ ಬದುಕುತ್ತೇವೆ. ಇಲ್ಲಿ ನಮ್ಮ ಜೀವಕ್ಕೆ ರಕ್ಷಣೆಯಿಲ್ಲʼʼ ಎಂದು ಅಳಲು ತೋಡಿಕೊಂಡರು. ಹುಲಿಯು ಹಸು “ಪೂಜಾʼಳ ಕಾಲು ಮತ್ತು ತಲೆ ಭಾಗ ಬಿಟ್ಟು ಪೂರ್ಣವಾಗಿ ಕಬಳಿಸಿದ್ದು ಕಂಡುಬಂತು. ಅದರ ಎರಡು ತಿಂಗಳ ಗಂಡು ಕರು ಅನಾಥವಾಗಿದೆ.
ಹುಲಿ ದಾಳಿಗೆ ತುತ್ತಾಗಿರುವ ಸ್ವಾಮಿ ದಾಸಯ್ಯ ಖಾಸಗಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಇನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ” ಆಂದೋಲನ ಡಿಜಿಟಲ್ ʼ ಗೆ ದೃಢಪಡಿಸಿವೆ.
“” ತಿಂಗಳಿಗೆ ಮೂರ್ನಾಲ್ಕು ರಾಸುಗಳನ್ನು ಹುಲಿ ಕಬಳಿಸುತ್ತಾ ಬಂದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ನೀಡಿಲ್ಲ. ರೈತರು ಆನೆ, ಕಡವೆ,ಜಿಂಕೆ, ಚಿರತೆ,ಕಾಡುಹಂದಿ,ಮುಳ್ಳುಹಂದಿ,ನವಿಲುಗಳೂ ಹೊಲಕ್ಕೆ ಬಂದು ನಾವು ಬೆಳೆದ ಕೃಷಿಯನ್ನು ನಾಶಪಡಿಸುತ್ತಿವೆ. ಲಕ್ಷಗಟ್ಟಲೆ ಬೆಳೆನಾಶವಾದರೂ ಅರಣ್ಯ ಇಲಾಖೆ ಕೇವಲ ಎರಡು, ಮೂರು ಸಾವಿರ ರೂಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ನಮಗೆ ಪರಿಹಾರಕ್ಕಿಂತಲೂ ವನ್ಯಪ್ರಾಣಿ ಜನವಸತಿಯತ್ತ ಬರದಂತೆ ತಡೆಗಟ್ಟಲಿʼʼ ಎಂದು ಕೃಷಿಕರು ಅಳಲು ತೋಡಿಕೊಂಡರು.
“” ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುತ್ತಿರುವುದು ಹುಲಿದಾಳಿಗೆ ಕಾರಣವಾಗುತ್ತಿದೆ. ಕೆಲವು ರೈತರು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದು ದಾಖಲೆ ಇಲ್ಲದ ಜಾಗದಲ್ಲಿ ಫಸಲು ನಷ್ಟವಾದರೆ ಪರಿಹಾರ ಅಸಾಧ್ಯ. ಈವರೆಗೆ ಸಾಧ್ಯವಾದಷ್ಟೂ ಶೀಘ್ರ ಪರಿಹಾರ ನೀಡಲಾಗಿದೆ. ಕೆಲವರಿಗೆ ಪರಿಹಾರ ವಿತರಣೆ ಪ್ರಗತಿಯಲ್ಲಿದೆ. ಸ್ವಾಮಿ ದಾಸಯ್ಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಿಸಲಾಗುವುದು. ಅವರ ಆಸ್ಪತ್ರೆ ಖರ್ಚನ್ನು ಅರಣ್ಯ ಇಲಾಖೆ ಭರಿಸಲಿದೆ.ʼʼ ಎಂದು ಆರ್ ಎಫ್ ಒ ಕೆ.ಆರ್.ನಾರಾಯಣ ಆಂದೋಲನ ಡಿಜಿಟಲ್ ಗೆ ಮಾಹಿತಿ ನೀಡಿದ್ದಾರೆ.
10 ಮಂದಿ ಅರಣ್ಯ ಸಿಬ್ಬಂದಿಯ ತಂಡ ಮಂಗಳವಾರದಿಂದಲೇ ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ. ಬುಧವಾರದಿಂದ ಹುಲಿಯ ಚಲನ ವಲನ ವೀಕ್ಷಣೆಗೆ ಡ್ರೋಣ್ ಬಳಸಿಕೊಳ್ಳಲಾಗುವುದು. ಹುಲಿಯನ್ನು ಸೆರೆ ಹಿಡಿಯಲು ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅನುಮತಿ ಪಡೆಯಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು: ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದ್ದಾರೆ. ಈ ಕುರಿತು…
ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಗ್ಯಾರಂಟಿ…
ಮೈಸೂರು: ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ…
ಯಾದಗಿರಿ: ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ…
ಟಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಮಿತಿಮೀರಿದ್ದು, ಜನತೆ ಭಯಭೀತರಾಗಿದ್ದಾರೆ. ತಾಲ್ಲೂಕಿನ ಎಸ್.ಕೆಬ್ಬೆಹುಂಡಿ, ಕನ್ನಾಯಕನಹಳ್ಳಿ ಗ್ರಾಮದ ಮಧ್ಯೆ ಚಿರತೆ ಪ್ರತ್ಯಕ್ಷವಾಗಿದ್ದು, ಈ…
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ…