ಮೈಸೂರು

ಸಾರ್ವಜನಿಕರು ಪೊಲೀಸರ ನಡುವೆ ಅಂತರ ಕಡಿಮೆ ಮಾಡುವ ಕೆಲಸವಾಗಬೇಕಿದೆ : ಜಾವಗಲ್ ಶ್ರೀನಾಥ್

ಮೈಸೂರು : 2010ರಲ್ಲಿ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿಯಾದಾಗ ಪೊಲೀಸರೊಂದಿಗೆ ಸಂಪರ್ಕ ಬೆಳೆಯಿತು. ಆವಾಗ ಪೊಲೀಸ್ ಕೆಲಸ ಎಷ್ಟು ಕಷ್ಟ ಎಂದು ಗೊತ್ತಾಯಿತು. ಅದನ್ನು ಜನರಿಗೂ ತಿಳಿಸುವ ಕೆಲಸವಾಗಬೇಕು. ಅದಕ್ಕಾಗಿ ಸಾರ್ವಜನಿಕರು ಪೊಲೀಸರ ಅಂತರ ಕಡಿಮೆ ಮಾಡುವ ಕೆಲಸವಾಗಬೇಕಿದೆ ಎಂದು ಭಾರತೀಯ ಮಾಜಿ ಕ್ರಿಕೆಟಿಗರು ಮತ್ತು ಪ್ರಸ್ತುತ ಐಸಿಸಿ ಮ್ಯಾಚ್ ರೆಫೆರಿ ಜಾವಗಲ್ ಶ್ರೀನಾಥ್ ಹೇಳಿದರು.

ಮೈಸೂರು ನಗರ ಪೊಲೀಸ್ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ, ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನರನ್ನು ಕೆಲಸದಿಂದ ಸಮಾಧಾನ ಪಡಿಸುವುದು ಕಷ್ಟವಿದೆ. ಎಲ್ಲರಲ್ಲೂ ಸ್ನೇಹ ಭಾವ ಮೂಡಿಸಿದರೆ ಇದೊಂದು ಅದ್ಭುತ ಕೆಲಸವಾಗುತ್ತದೆ. ಆ ಮನೆಗಳಿಗೆ ಇಂತಹ ಪೊಲೀಸ್ ತನ್ನ ಜವಾಬ್ದಾರಿ ಎಂದು ಕೊಂಡರೆ ಸಕ್ಸಸ್, ಪೊಲೀಸ್ ಮನೆಗೆ ಬಂದು ಹೋದರೆ ಕಾನೂನು ಸುವ್ಯವಸ್ಥೆ ಅರ್ಥ ಮಾಡಿಕೊಳ್ಳುತ್ತಾರೆ. ಇಲಾಖೆ ಬಗ್ಗೆ ಧನಾತ್ಮಕ ಚಿಂತನೆ ಮೂಡುತ್ತದೆ. ನಾಗರಿಕರು ಪೊಲೀಸರನ್ನು ಮನೆ ಬಾಗಿಲಲ್ಲಿ ಸ್ವಾಗತಿಸಿ. ನಾಗರಿಕರು ಪೊಲೀಸರ ಸಂಬoಧ ಗಟ್ಟಿಯಾದರೆ ದುಷ್ಕೃತ್ಯ ಮಾಡುವವರಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮಾತನಾಡಿ ನಾವು ನಿಮ್ಮ ಹಕ್ಕುಗಳ ರಕ್ಷಕರು ಅದರ ಕೆಲಸಕ್ಕೆ ಸಮಾಜದ ಬೆಂಬಲ ಅಗತ್ಯ. ಅದಿಲ್ಲದಿದ್ದರೆ ನಮಗೆ ಕಷ್ಟ. ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಕಷ್ಟಸಾಧ್ಯ. ಬೀಟ್ ಕಾನ್ಸ್ಟೆಬಲ್ಗೆ ಕ್ಲಸ್ಟರ್ ಮಾಡಿ ಒಂದು ಕ್ಲಸ್ಟರ್ನಲ್ಲಿ 40 ರಿಂದ 50 ಮನೆ ಇರುತ್ತದೆ. 250 ಮನೆಯ ಜವಬ್ದಾರಿ ನೀಡಿದ್ದೇವೆ. ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಆಯಾಯ ಏರಿಯಾಗೆ ಸಂಬoಧಪಟ್ಟು ನಡೆಯುತ್ತಿರುವ ಪ್ರಕರಣದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.

ಅವರು ತಮ್ಮ ಕ್ಯೂ ಆರ್ ಕೋಡ್ ಮೂಲಕ ಮನೆಯ ಸಮಸ್ಯೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಬೀಟ್ ಪೊಲೀರು ತಿಳಿಸುತ್ತಾರೆ. 250 ಮನೆಗೊಬ್ಬ ಸಲಹೆಗಾರರನ್ನು ಆಯ್ಕೆ ಮಾಡಿ ಅವರೊಂದಿಗೆ ಪ್ರತೀ ಶನಿವಾರ ಮೀಟಿಂಗ್ ಮಾಡಿ ಅತ್ಯುತ್ತಮ ಪೊಲೀಸ್ ಸ್ನೇಹಿತ, ಸಲಹೆಗಾರ ಪ್ರಶಸ್ತಿ ನೀಡುತ್ತೇವೆ. ಊರಿನ ಅನುಮಾನಾಸ್ಪದ ವಿಷಯಗಳ ಕುರಿತೂ ಮಾಹಿತಿ ನೀಡಬಹುದು. ಪುರುಷರಿಲ್ಲದ ಮನೆಗೆ ಮಹಿಳಾ ಕಾನ್ಸ್ಟೇಬಲ್ ಕಳಿಸಲಾಗುವುದು.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಮತ್ತು ನಿರ್ಬಂಧ ವಾತಾವರಣವನ್ನು ಕಾಪಾಡಲು ನಮ್ಮ ಮುಖ್ಯ ಉದ್ದೇಶವಾಗಿದೆ. ಅದರಲ್ಲಿ ಸಾಮಾಜಿಕ ಭದ್ರತೆ ಎಂದರೆ ನಿಮ್ಮ ಹಕ್ಕುಗಳ ರಕ್ಷಕರಾಗಿ ಇರುತ್ತೀವಿ. ಇಂತಹ ಉತ್ಕೃಷ್ಟ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು ಅಂದರೆ ಸಮಾಜದ ಸಹಭಾಗಿತ್ವ ಮತ್ತು ಬೆಂಬಲ ಅನಿವಾರ್ಯವಾಗಿರುತ್ತದೆ. ಪೋಲಿಸ್ ಸೇವೆ ಪ್ರತಿಯೊಂದು ಹಂತದಲ್ಲಿಯೂ ಸಾರ್ವಜನಿಕರೊಂದಿಗೆ ನಿಕಟ ಸಂಪರ್ಕ ಅನಿವಾರ್ಯವಾಗಿದೆ. ಪ್ರತಿ ರಾಜ್ಯದಲ್ಲಿ ಮನೆ ಮನೆಗೆ ಪೊಲೀಸ್ ಜಾರಿಗೆ ತಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಆರ್.ಎನ್. ಬಿಂದು ಮಣಿ, ಅಪರಾಧ ಮತ್ತು ಸಂಚಾರ ಕೇಂದ್ರಸ್ಥಾನ ಉಪ ಪೊಲೀಸ್ ಆಯುಕ್ತರಾದ ಕೆ.ಎಸ್. ಸುಂದರ್ ರಾಜ್, ಮೋಹನ್ ಕುಮಾರ್, ಅಶ್ವತ್ಥ್ ನಾರಾಯಣ್, ರಾಜೇಂದ್ರ, ರವಿಪ್ರಸಾದ್, ಶಿವಶಂಕರ್ ಹಾಗೂ ಮತ್ತಿತರು ಉಪಸ್ಥಿತರಿದರು.

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

13 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

13 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

15 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

17 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

21 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

21 hours ago