ಮೈಸೂರು : ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಮೋಸದ ಮುಖವಾಡವೊಂದು ಬಯಲಾಗಿದ್ದು, ಮದುವೆ ಆಗಿ ಡಿವೋರ್ಸ್ ಆಗಿದ್ರು, ಮತ್ತೊಂದು ಯುವತಿಯನ್ನು ಮದುವೆ ಆಗಿ ಮೋಸ ಮಾಡಿರುವ ಆರೋಪ ಕೇಳಿಬಂದಿದೆ.
ಮೈಸೂರಿನ ಜೆ.ಪಿ.ನಗರದಲ್ಲಿ ಈ ಘಟನೆ ನಡೆದಿದ್ದು, ಪತಿ ಶಿವಕುಮಾರ್ ಮೋಸ ಮಾಡಿದ್ದಾನೆ ಎಂದು ಪತ್ನಿ ಶೋಭಾ ಆರೋಪ ಮಾಡಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಶೋಭಾಳನ್ನ ಮದುವೆ ಆಗುವ ಮುನ್ನವೇ ಶಿವಕುಮಾರ್ ಮತ್ತೊಂದು ಮದುವೆ ಆಗಿದ್ದನು.
ಕಳೆದ 2020ರಲ್ಲಿ ಶಿವಕುಮಾರ್ ನಂಜನಗೂಡು ತಾಲ್ಲೂಕಿನ ಲಾವಣ್ಯ ಎಂಬ ಯುವತಿಯ ಜೊತೆ ಮದುವೆ ಆಗಿದ್ದ ಶಿವಕುಮಾರ್, ಲಾವಣ್ಯ ಜೊತೆ ಒಂದು ವರ್ಷ ಸಂಸಾರ ಮಾಡಿ 2021ರಲ್ಲಿ ಆಕೆಗೆ ಡಿವೋರ್ಸ್ ನೀಡಿದ್ದ. ಬಳಿಕ 2022ರಲ್ಲಿ ಹಾಸನ ಜಿಲ್ಲೆಯ ಚನ್ನರಾಯನಪಟ್ಟಣದ ಯುವತಿ ಶೋಭಾ ಜೊತೆ ಮದುವೆಯಾಗಿದ್ದ. ಮನೆಯವರ ಒಪ್ಪಿಗೆಯಂತೆ ಅರೇಂಜ್ ಮ್ಯಾರೇಜ್ ಆಗಿರುವ ನೊಂದ ಮಹಿಳೆ ಶೋಭಾಗೆ ಸ್ವಲ್ಪ ವರ್ಷ ಕಳೆಯುತ್ತಿದ್ದಂತೆ ಗಂಡನ ನಿಜ ಬಣ್ಣ ಗೊತ್ತಾಗಿದೆ… ಹೀಗೆ ಒಂದು ದಿನ ಶೋಭಾಳಿಗೆ ಕರೆ ಮಾಡಿರುವ ಪೊಲೀಸರು, ನಿನ್ನ ಪತಿ ಶಿವಕುಮಾರ್ ಲಾವಣ್ಯ ಎಂಬ ಯುವತಿಯನ್ನು ಗರ್ಭಿಣಿ ಮಾಡಿದ್ದಾನೆ ಎಂದು ಹೇಳಿದ್ದಾರೆ.
ಹೀಗಿರುವಾಗಲೇ ಶಿವಕುಮಾರ್ ಪೊಲೀಸರಿಗೆ ಹೆದರಿ ಡಿವೋರ್ಸ್ ಆಗಿದ್ದ ಲಾವಣ್ಯಳನ್ನೇ ಮತ್ತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. 2ನೇ ಹೆಂಡತಿ ಶೋಭಾಳಿಗೆ ಈ ವಿಚಾರ ತಿಳಿಯುತ್ತಿದ್ದಂತೆ ಮೈಸೂರಿನ ಜೆಪಿ ನಗರದಲ್ಲಿರುವ ಸ್ವಂತ ನಿವಾಸಕ್ಕೆ ಲಾವಣ್ಯಳನನ್ನು ಕರೆದುಕೊಂಡು ಬಂದಿದ್ದಾನೆ.
ಶೋಭಾ ಪ್ರಶ್ನೆ ಮಾಡಿದ್ದಕ್ಕೆ ಇಷ್ಟ ಇದ್ರೆ ಇರು, ಇಲ್ಲ ಅಂದರೆ ಮನೆ ಬಿಟ್ಟು ಹೋಗು ಎಂದು ಹಿಂಸೆ ಕೊಟ್ಟ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆ ಶೋಭಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಶೋಭಾಳಿಗೆ 2 ವರ್ಷದ ಗಂಡು ಮಗು ಹಾಗೂ ಲಾವಣ್ಯಳಿಗೆ ಒಂದು ಹೆಣ್ಣು ಮಗು ಇದೆ. ಶಿವಕುಮಾರ್ ಜೊತೆ ಡಿವೋರ್ಸ್ ಆಗಿದ್ದ ಸಂದರ್ಭದಲ್ಲಿ ಲಾವಣ್ಯ ಕೇರಳದ ಪ್ರಸೂನ್ ಎಂಬುವವನ ಮತ್ತೊಂದು ಮದುವೆ ಆಗಿದ್ದಳು ಎಂದು ಶೋಭಾ ಗಂಭೀರ ಆರೋಪ ಮಾಡಿದ್ದಾರೆ.
ಪತಿ ಶಿವಕುಮಾರ್ ಕಳೆದ ಮೂರು ತಿಂಗಳಿನಿಂದಲೂ ಇಬ್ಬರು ಹೆಂಡತಿಯರು ಜೊತೆಯಲ್ಲೇ ಇರಿ ಎಂದು ಪದೇ ಪದೇ ಹಿಂಸೆ ಕೊಡುತ್ತಿದ್ದು, ಇದಕ್ಕೆ ಒಪ್ಪದ ಶೋಭಾ ನ್ಯಾಯಕ್ಕಾಗಿ ಕಣ್ಣೀರು ಹಾಕುತ್ತಿದ್ದಾರೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…