ಮೈಸೂರು: ಸಂಸತ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಎಸಗಿರುವುದನ್ನು ಖಂಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಮಾನಸಗಂಗೋತ್ರಿಯ ಕ್ಲಾಕ್ ಟವರ್ ಬಳಿ ಜಮಾಯಿಸಿದ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕ್ಲಾಕ್ ಟವರ್ ಸುತ್ತ ಮಾನವ ಸರಪಳಿ ರಚಿಸಿ, ಅಮಿತ್ ಶಾ ವಿರುದ್ಧ ಧಿಕ್ಕಾರಗಳ ಘೋಷಣೆ ಕೂಗಿ, ಅವರ ಭಾವಚಿತ್ರ ಅರಿಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು, ಜೊತೆಗೆ ಕೇಂದ್ರ ಸರ್ಕಾರ ಅಮಿತ್ ಶಾ ಅವರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗೃಹ ಸಚಿವರನ್ನಾಗಿ ಮಾಡಿರುವುದೇ ಖಂಡನೀಯ. ಈ ಹಿಂದೆ ಗುಜರಾತ್‌ನಿಂದ ಗಡಿಪಾರು ಆಗಿದ್ದ ರೀತಿ ಇದೀಗ ದೇಶದಿಂದಲೇ ಅಮಿತ್ ಶಾ ಅವರನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನ ವಿದ್ಯಾರ್ಥಿಗಳು ಆಗ್ರಹಿಸಿದರು.
ಅಂಬೇಡ್ಕರ್ ಎಂಬುದು ಬರೀ ಹೆಸರಲ್ಲ ನಮ್ಮೆಲ್ಲರ ಉಸಿರು. ಪದೇ ಪದೇ ಸಂವಿಧಾನ ಹಾಗೂ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿರುವವರ ವಿರುದ್ಧ ದೇಶಾದದ್ಯಾಂತ ನಾಗರೀಕರು ಎಚ್ಚೆತ್ತುಕೊಳ್ಳಬೇಕಿದೆ. ಬಿಜೆಪಿ ಮನುವಾದಿ ಪಕ್ಷ, ಆ ಪಕ್ಷದ ನಿಜವಾದ ಬಣ್ಣ ಇದೀಗ ಮತ್ತೊಮ್ಮೆ ಬಯಲಾಗಿದೆ. ಮುಂಬರುವ ಚುನಾವಣೆ ವೇಳೆ ಅಂಬೇಡ್ಕರ್ ಪರ ನಿಲುವ ಇರುವ ಎಲ್ಲರೂ ಬಿಜೆಪಿಯಿಂದ ಹೊರಬರಬೇಕು. ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕೆ ಪಾಠ ಕಲಿಸಬೇಕು ಎಂದು ಪ್ರತಿಭಟನೆ ವೇಳೆ ಹಲವು ವಿದ್ಯಾರ್ಥಿಗಳು ಒತ್ತಾಯಿಸಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಕಾರ್ಯಧ್ಯಕ್ಷ ಕಲ್ಲಹಳ್ಳಿ ಕುವಾರ್, ಕಾರ್ಯದರ್ಶಿ ವಿಶ್ವ ಪ್ರಸಾದ್, ಜಂಟಿ ಉಪಾಧ್ಯಕ್ಷರಾದ ಕೆ.ಮಲ್ಲೇಶ್, ಕೊ.ಲಿಂಗರಾಜು, ಪ್ರಧಾನ ಕಾರ್ಯದರ್ಶಿ ಕುಶಾಲ್, ವರಹಳ್ಳಿ ಆನಂದ, ಗಣೇಶ್, ಪಿ.ಮರಹಳ್ಳಿ ಮಹೇಶ್, ಲಿಂಪನ್ ರಾಜು, ದಲಿತ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಪುನೀತ್ ಆಲನಹಳ್ಳಿ, ಕಿರಣ್, ನಂದೀಶ್, ಸಚಿನ್, ಹಾಜರಿದ್ದರು.
ಲಂಡನ್ : ಇರಾನ್ ಸಂಘರ್ಷದಿಂದಾಗಿ ಪ್ರಪಂಚದ ತೈಲ ಸರಬರಾಜಿನಲ್ಲಿ ಉಂಟಾಗಿರುವ ತೀವ್ರ ಆರ್ಥಿಕ ಪರಿಣಾಮಗಳ ನಡುವೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದಕ್ಕಾಗಿ…
ನವದೆಹಲಿ : ಹೋರಾಟಗಾರರು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್‌ಜೆಂಡರ್) ಹಕ್ಕುಗಳ ರಕ್ಷಣೆ ಕುರಿತ-2019ರ…
ಬೆಂಗಳೂರು : ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಕಚೇರಿಯೂ ಸಾರ್ವಜನಿಕ ಸ್ನೇಹಿ ಆಡಳಿತವನ್ನು ಅಳವಡಿಸಿಕೊಂಡ ಹಿನ್ನಲೆ ಈ ವರ್ಷವೂ ಕಡತ…
ನವದೆಹಲಿ : 2027ರ ಜನಗಣತಿಯಲ್ಲಿ ಲಿವ್-ಇನ್ ಸಂಬಂಧದಲ್ಲಿರುವ ಸಂಗಾತಿಗಳು ತಮ್ಮದು ಶಾಶ್ವತ ಸಂಬಂಧ ಎಂದು ಪರಿಗಣಿಸಿದರೆ, ಅವರನ್ನು ಜನಗಣತಿ ವೇಳೆ…
ತುಮಕೂರು: ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವದ ಅಂಗವಾಗಿ ಇಂದು ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಿದರು.…
ದಾವಣಗೆರೆ: ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ದಾವಣಗೆರೆಯಲ್ಲಿ ಇಂದು ಚುನಾವಣಾ ಪ್ರಚಾರದ…