ಹುಣಸೂರು: ಮಹಿಳೆಯರು ಸಾಲ ಪಡೆದು ವೈಭೋಗದ ಜೀವನಕ್ಕೆ ಹಣ ಬಳಸಬೇಡಿ ಸ್ವಂತ ವೃತ್ತಿ ಮಾಡುವ ಮೂಲಕ ಸಾಲ ಪಡೆದ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಸಿಲ್ದಾರ್ ಮಂಜುನಾಥ್ ಹೇಳಿದರು.
ಅವರು ಗುರುವಾರ(ಜು.25) ನಗರದ ಪುಟ್ಟಸೋಮಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಕೆನರಾ ಬ್ಯಾಂಕ್ ನವರು ಸ್ವಸಹಾಯ ಸಂಘಗಳಿಗೆ ಸಾಲ ಸಂಯೋಜನೆ ಹಾಗೂ ಬೃಹತ್ ಸಾಲ ವಿತರಣೆ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳೆಯರು ಸಾಲ ಪಡೆದು ಹಬ್ಬ, ಬೀಗರ ಊಟಕ್ಕೆ ಹಣ ಬಳಸಬೇಡಿ ಸರ್ಕಾರ ಮತ್ತು ಬ್ಯಾಂಕ್ ನವರು ಒಳ್ಳೆಯ ಉದ್ದೇಶದಿಂದ ಸಾಲ ನೀಡುತ್ತಿದ್ದಾರೆ ಇದನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸಿ ಎಂದು ತಿಳಿಸಿದರು.
ನಗರ ಸಭೆ ಪೌರಾಯುಕ್ತೆ ಎಂ. ಮಾನಸ ಮಾತನಾಡಿ, ಹೆಣ್ಣು ಮಕ್ಕಳು ಸಾಲ ಪಡೆದ ಹಣವನ್ನು ಮಕ್ಕಳ ಶಿಕ್ಷಣ ಹಾಗೂ ವ್ಯಾಪಾರ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಬೇಕು ವೈಭೋಗದ ಜೀವನ ನಡೆಸಲು ಸಾಲ ಪಡೆಯಬೇಡಿ ಸಾಲ ತೀರಿಸಲು ಹೊರೆಯಾಗುತ್ತದೆ ಸಮಾಜದಲ್ಲಿ ಬಡವರಾಗಿ ಹುಟ್ಟೋದು ತಪ್ಪಲ್ಲ ಆದರೆ ನಾವು ಬಡವರಾಗಿ ಸಾಯೋದು ತಪ್ಪು ಏಕೆಂದರೆ ಸಾಲ ಪಡೆದ ಹಣವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಮಹಿಳೆಯರ ಮೇಲಿದೆ ಅದನ್ನು ಮರೆತು ಅವಶ್ಯಕತೆ ಇಲ್ಲದ ಕೆಲಸಗಳಿಗೆ ಹಣವನ್ನು ದುಂದು ವೆಚ್ಚ ಮಾಡಿ ಜೀವನವನ್ನು ಕಷ್ಟಕ್ಕೆ ತಳ್ಳಬೇಡಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಎಂ.ಪಿ, ನಾರಾಯಣ ಹೆಗ್ಗಡೆ ಸೇರಿದಂತೆ ಕೆ ಆರ್ ನಗರ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ವಿವಿಧ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರು ಹಾಗೂ ಕೆನರಾ ಬ್ಯಾಂಕ್ ಗಳ ಸಿಬ್ಬಂದಿ ವರ್ಗದವರು ಇದ್ದರು.
ಟಿ.ನರಸೀಪುರ: ಜಗದ್ಗುರು ಶ್ರೀ ಶಿವರಾತ್ರಿ ಡಾ.ರಾಜೇಂದ್ರ ಶ್ರೀಗಳ 110ನೇ ಜಯಂತೋತ್ಸವ ಹಾಗೂ ಶ್ರೀ ನಂಜುಂಡಸ್ವಾಮಗಳ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಹೊಸಮಠದ…
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರೆಪೊ ದರವನ್ನು ಶೇ. 5.5% ರಿಂದ 5.25ಕ್ಕೆ ಅಂದರೆ 25 ಬೇಸಿಸ್ ಪಾಯಿಂಟ್‍ಗಳಷ್ಟು…
ಮಂಡ್ಯ: ಲ್ಯಾಬ್ ಟು ಲ್ಯಾಂಡ್ ಆದರೆ ಮಾತ್ರ ರೈತರಿಗೆ ಸಂಪೂರ್ಣ ಅನುಕೂಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಕುರಿತು…
ಬೆಂಗಳೂರು: ಮಾದಕದ್ರವ್ಯ ಮಾರಾಟ ಮತ್ತು ಮಾದಕದ್ರವ್ಯ ಸೇವನೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಹೊಸ ದಾಖಲೆ ನಿರ್ಮಿಸಿದ್ದಾರೆ. ಪ್ರಸಕ್ತ ಸಾಲಿನ…
ಮಂಡ್ಯ: ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಹಾಗೂ ಸಾಮಾನ್ಯರ ಬಗ್ಗೆ ಅತೀ ಹೆಚ್ಚಿನ ಕಾಳಜಿ ಇಟ್ಟುಕೊಂಡಿದ್ದಾರೆ ಎಂದು ಕೃಷಿ ಹಾಗೂ…
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…