ಮೈಸೂರು

ಸ್ವಾವಲಂಬಿ ಬದುಕಿಗೆ ಸಂಜೀವಿನಿ ಸಹಕಾರ: ಸಿಇಓ ಕೆ.ಎಂ. ಗಾಯಿತ್ರಿ

ಮೈಸೂರು: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷಿನ್ ಅಡಿಯಲ್ಲಿ(ಎನ್.ಆರ್.ಎಲ್.ಎಂ) ಗ್ರಾಮೀಣ ಭಾಗದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಸದೃಢಗೊಳುತ್ತಿದ್ದು, ಇನ್ನಷ್ಟು ವಿನೂತನ ರೀತಿಯಲ್ಲಿ ಉಪಯುಕ್ತವಾಗುವಂತಹ ವಿವಿಧ ಉತ್ಪನ್ನಗಳನ್ನು ತಯಾರಿಸಿ ತಮ್ಮದೇ ಬ್ರ್ಯಾಂಡ್ ಅನ್ನು ಸೃಷ್ಠಿಸಿಕೊಂಡು ಮುಖ್ಯವಾಹಿನಿಗೆ ಬರುವಂತೆ  ಸಂಜೀವಿನಿ ಸಂಘದ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಮುಖ್ಯ ಪುಸ್ತಕ ಬರಹಗಾರರುಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ  ಅವರು ತಿಳಿಸಿದರು.
ಅವರು  ಇಂದು(ಮೇ.೧೫) ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿವಿಧ ಇಲಾಖೆಗಳೊಂದಿಗೆ ಹಲವು ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.
ಸಂಜೀವಿನಿ ಸಂಘಗಳಿಂದ ನೀಡಲಾಗುವ ಪ್ರೋತ್ಸಾಹಧನನ್ನು ಮಹಿಳೆಯರು ವಿನೂತನ ರೀತಿಯಲ್ಲಿ ಇಂಬ್ರಾಯಿಡ್ರಿ ಮಾಡುವುದು,  ವಿವಿಧ ತಿನಿಸುಗಳ ತಯಾರಿಕೆ, ಗೊಬ್ಬರ ತಯಾರಿಕೆ, ಅಣಬೆ ಬೆಳೆಯುವುದು ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಬಾಳೆಯಿಂದ ಬಾಳೆಕಾಯಿ ಚಿಪ್ಸ್, ಬಾಳೆ ದಿಂಡಿನಿಂದ ಜ್ಯೂಸ್, ಅದರ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆ ಹೀಗೆ ವಿನೂತನ ರೀತಿಯಲ್ಲಿ ಉತ್ಪಾದನೆ ಮಾಡಿ ಅವುಗಳಿಗೆ ಕ್ರಿಯಾತ್ಮಕವಾಗಿ ಬೇಡಿಕೆ  ಹೆಚ್ಚಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳುವಂತೆ ಜೀವನ ಪಾಠ ಮಾಡಿದರು.
ಜಲ ಜೀವನ್ ಯೋಜನೆ ಪ್ರಗತಿ ಪರಿಶೀಲಿಸಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ  ಕೆಲಸವನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದರು. ಈ ವೇಳೆ ಅನುಮೋದಿತ ವರದಿಗಿಂತ  ನೀರಿನ ಸಂಪರ್ಕವು ಹೆಚ್ಚಾಗಿರುವ ಬಗ್ಗೆ  ಸಹಾಯಕ ಕಾರ್ಯಪಾಲಕ ಅಭಿಯಂತರರು  ತಿಳಿಸಿದ್ದು, ಉಳಿತಾಯ ಹಣದಿಂದ ಭರಿಸುವಂತೆ ತಿಳಿಸಿದರು.
ಮಹಾತ್ಮ ಗಾಂಧಿ ನರೇಗಾ  ಯೋಜನೆ ಕುರಿತು ಪರಿಶೀಲಿಸಿ, ನಿಷ್ಕ್ರಿಯವಾಗಿರುವ ಜಾಬ್ ಕಾರ್ಡ್ ಗಳನ್ನು ಕ್ರಿಯಾಶೀಲವಾಗಿಸಲು ಕ್ರಮತೆಗೆದುಕೊಳ್ಳಬೇಕು. ಮಹಿಳಾ ಸಂಘಧ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಅಭಿಯಾನಗಳ ಮೂಲಕ ಬೇಡಿಕೆ ಸಂಗ್ರಹಿಸಿ ಕೆಲಸ ನೀಡುವಂತೆ ಸೂಚಿಸಿದರು. ಈ ವೇಳೆ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುಂತೆ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಆಸ್ತಿ ಸಮೀಕ್ಷೆ ಕುಂಠಿತಗೊಂಡಿದ್ದು, ಇದರಿಂದ ತೆರಿಗೆ ಸಂಗ್ರಹಿಸುದು ಕಷ್ಟವಾಗುತ್ತದೆ. ಆದ್ದರಿಂದ ಶೀಘ್ರವೇ ಆಸ್ತಿ ಸಮೀಕ್ಷೆ ಪೂರ್ಣಗೊಳಿಸಿ, ಸಕಾಲದಲ್ಲಿ ಯಾವುದೇ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕ್ರಮವಹಿಸಬೇಕು, ಎಲ್ಲಾ ಚರಂಡಿ, ನೀರಿನ ಟ್ಯಾಂಕ್ ಗಳು, ದನಗಳು ಕುಡಿಯುವ ನೀರಿನ ತೊಟ್ಟಿಯಲ್ಲಿ ಕಾಲ ಕಾಲಕ್ಕೆ ಸ್ವಚ್ಛಗೊಳಿಸುತ್ತಿರುವ  ಬಗ್ಗೆ ಖಾತರಿ ಪಡಿಸಿಕೊಂಡರು.
ಕೂಸಿನ ಮನೆಗೆ ಮೆಚ್ಚುಗೆ: ಸಭೆ ಬಳಿಕ ಪಂಚಾಯಿತಿ ಎದುಗಿರಿನ ಕೂಸಿನ ಮನೆಗೆ ಭೇಟಿ ನೀಡಿದ ಅವರು,  ಕೂಸಿನ ಮನೆಯ ಅತ್ಯಾಕರ್ಷಕ ಪೇಯಿಟಿಂಗ್, ಚಾರ್ಟ್ಗಳ ಪ್ರದರ್ಶನ ಹಾಗೂ ಕಟ್ಟಡವು  ವಿಶಾಲ ಹಾಗೂ ಸುಸಜ್ಜಿತವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು ಬಳಿಕ ದಾಖಲಾತಿ ಪುಸ್ತಕಗಳನ್ನು ಪರಿಶೀಲಿಸಿ, ಜಿಲ್ಲಾ ಪಂಚಾಯಿತಿ ಸಮಿತಿಯಿಂದ ಸಿದ್ದಪಡಿಸಿರುವ  ಆಹಾರದ ಮೆನುವಿನಲ್ಲಿ ಬದಲಾವಣೆ ಬೇಕಿದಲ್ಲಿ ತಿಳಿಸುವಂತೆ ಕೇರ್ ಟೇಕರ್ಸ್ ಗಳಿಗೆ ತಿಳಿಸಿದರು.
ಬಳಿಕ ನರೇಗಾ ಯೋಜನೆಯಡಿ  ಬಾಳೆ ಬೆಳೆದಿದ್ದ ಫಲಾನುಭವಿ ಮಹೇಶ್ ಎಂಬುವವರು ಬಾಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು,  ಉದ್ಯೋಗ ಖಾತರಿ ಯೋಜನೆ ಅಡಿ ವೈಯಕ್ತಿಕ  ಕಾಮಗಾರಿಗಳಿಗೆ ಇದ್ದ 2.5 ಲಕ್ಷ ಮಿತಿಯನ್ನು 5 ಲಕ್ಷ ರೂ.ಗೆ  ಹೆಚ್ಚಿಸಲಾಗಿದೆ, ಹಾಗಾಗಿ ಇನ್ನಷ್ಟು ವೈಯಕ್ತಿಕ ಕಾಮಗಾರಿಗಳನ್ನು  ಕೈಗೊಂಡು ಆರ್ಥಿಕವಾಗಿ ಸದೃಢಗೊಳ್ಳುವಂತೆ ಫಲಾನುಭವಿಗೆ ತಿಳಿಸಿದರು.
ಈ ವೇಳೆ ನರೇಗಾ ಸಹಾಯಕ ನಿರ್ದೇಶಕರಾದ ಶಿವಕುಮಾರ್,  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಲಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು,  ಪಂಚಾಯತ್ ರಾಜ್  ಸಹಾಯಕ ನಿರ್ದೇಶಕರಾದ ವಿವೇಕ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರದೀಪ್ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.
ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮೈಸೂರು ಮೃಗಾಲಯದ ಹುಲಿ ʼಪೃಥ್ವಿʼ ಇನ್ನಿಲ್ಲ

ಮೈಸೂರು : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ತನ್ನ ಕಟ್ಟುಮಸ್ತಿನ ಆಕಾರದಿಂದ ಸಂದರ್ಶಕರನ್ನು ಆಕರ್ಷಿಸುತ್ತಿದ್ದ ಗಂಡು ಹುಲಿ ‘ಪೃಥ್ವಿ’ ಅನಾರೋಗ್ಯ ಕಾರಣಗಳಿಂದ…

57 mins ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಏಪ್ರಿಲ್‌ 9  

1 hour ago

ಕೇರಳ,ಪುದುಚೇರಿ,ಅಸ್ಸಾಂ ವಿಧಾನಸಭಾ ಚುನಾವಣೆ : ಮತದಾನ ಆರಂಭ

ನವದೆಹಲಿ : ಅಸ್ಸಾಂ, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳಿಗೆ ಇಂದು ಬೆಳಿಗ್ಗೆ ಮತದಾನ ಆರಂಭವಾಗಿದೆ. ಜೊತೆಗೆ ನಾಗಾಲ್ಯಾಂಡ್‌ನ ಕೊರಿಡಾಂಗ್…

2 hours ago

ಬಾಗಲಕೋಟೆ, ದಾವಣೆಗರೆ ದಕ್ಷಿಣ ಉಪಚುನಾವಣೆಗೆ ಮತದಾನ ಆರಂಭ

ಬಾಗಲಕೋಟೆ : ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬೆಳಿಗ್ಗೆ ಮತದಾನ ಆರಂಭವಾಗಿದೆ. ಗುರುವಾರ, ಏಪ್ರಿಲ್ 9ರಂದು…

2 hours ago

ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಬಂಧನ ನೋಟಿಸ್‌ ಹಿಂಪಡೆದ ಕೋರ್ಟ್‌

ಮೈಸೂರು: ಮೈಸೂರು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ (ಜಯರಾಮು ಆರ್‌ ವಿರುದ್ಧ ಕರ್ನಾಟಕ ರಾಜ್ಯ) ಪ್ರಕರಣದಲ್ಲಿ…

12 hours ago

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ…

14 hours ago