ಮೈಸೂರು

RSS ನಿಷೇಧ ಹಾಸ್ಯಾಸ್ಪದ : ಮಾಜಿ ಶಾಸಕ ಬಿ.ಹರ್ಷವರ್ಧನ್

ನಂಜನಗೂಡು : ಆರ್ ಎಸ್ ಎಸ್ ಗೆ ನೂರು ವರ್ಷ ತುಂಬಿದೆ. ದೇಶ ಸೇವೆ ಮಾಡುವ ಸಂಘಟನೆಯನ್ನು ನಿಷೇಧ ಮಾಡಬೇಕು ಎನ್ನುವ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಂಜನಗೂಡು ನಗರದ ಬಿಜೆಪಿ ಕಛೇರಿಯಲ್ಲಿ ಸೋಮವಾರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸ ತಿಳಿದಿಲ್ಲ ಅನಿಸುತ್ತದೆ. ರಾಷ್ಟ್ರ ಮತ್ತು ರಾಷ್ಟ್ರೀಯತೆ ಬಗ್ಗೆ ಆರ್ ಎಸ್ಎಸ್ ಮಾತನಾಡುತ್ತಾರೆ. ಹೊರತು ಮಸೀದಿಯಲ್ಲಿ ನಡೆಯುವ ಭಯೋತ್ಪಾದನೆ ರೀತಿ ಅವರು ಮಾಡ್ತಾ ಇಲ್ಲ. ಸಚಿವ ಸಂಪುಟದಲ್ಲಿ ನನ್ನನ್ನು ಕೈ ಬಿಡುತ್ತಾರೆ ಅಂತ ಪ್ರಿಯಾಂಕ ಖರ್ಗೆ ಅವರು ಈ ವಿಚಾರವನ್ನು ತೆಗೆದುಕೊಂಡಿದ್ದಾರೆ. ಸರ್ಕಾರಕ್ಕೆ ಎರಡುವರೆ ವರ್ಷ ಆಗಿದೆ. ಗ್ಯಾರಂಟಿ ಯೋಜನೆಗಳನ್ನು ಎಷ್ಟರಮಟ್ಟಿಗೆ ಜನರಿಗೆ ತಲುಪಿದೆ ಎಂಬುದನ್ನು ಒಮ್ಮೆ ನೋಡಬೇಕು. ಮೂರ್ನಾಲ್ಕು ತಿಂಗಳುಗಳಿಂದ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಣ ಬಂದಿಲ್ಲ.‌ ಈ ಬಗ್ಗೆ ಜನ ಕೇಳುತ್ತಾರೆ ಎಂದು ಈ ರೀತಿಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸರ್ಕಾರ ಏನು ಸಾಧನೆ ಮಾಡದೇ ವಿವಾದಗಳನ್ನು ಸೃಷ್ಟಿ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಆರ್ ಎಸ್ ಎಸ್ ಚಟುವಟಿಕೆಗಳಿಗೆ ಬ್ಯಾನ್ ಮಾಡಬೇಕು ಎಂದು ಹೇಳಿದ್ದಾರೆ. ಅದೇ ರೀತಿ ನಮಾಜ್ ಮಾಡುವುದನ್ನು ಬ್ಯಾನ್ ಮಾಡಿ ಎಂದರೆ ಅದನ್ನು ಸ್ವೀಕಾರ ಮಾಡುತ್ತೀರಾ ಎಂದು ಕಿಡಿಕಾರಿದರು.

ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೋಟ್ಯಂತರ ಹಣ ದುರ್ಬಳಕೆಯಾಗಿದೆ. ಈ ಬಗ್ಗೆ ಸದನದಲ್ಲಿ ಯಾವುದೇ ಬಾಯಿಬಿಟ್ಟಿಲ್ಲ. ಪಂಚಾಯತ್ ರಾಜ್ ಇಲಾಖೆ ಸಚಿವರಾಗಿ ಏನು ಮಾಡಿದ್ದೀರಿ. ಮನೆ ಕಳೆದುಕೊಂಡ ಕುಟುಂಬಗಳಿಗೆ ಪರಿಹಾರ ನೀಡಿಲ್ಲ.‌ ಮೊದಲು ಈ ರೀತಿ ಹೇಳಿಕೆ ಕೊಡುವುದನ್ನು ನಿಲ್ಲಿಸಿ ಎಂದರು.

ತಿ. ನರಸೀಪುರ ಪಟ್ಟಣದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ರೂಟ್ ಮ್ಯಾಪನ್ನು ತಹಶೀಲ್ದಾರ್ ಬದಲಾವಣೆ ಮಾಡಿದ್ದಾರೆ. ನಮಗೆ ಸ್ವಾತಂತ್ರ್ಯ ಇಲ್ಲವೇ.. ಎಲ್ಲಿ ಹೋಗಬೇಕು ಯಾವ ದಾರಿಯಲ್ಲಿ ನಡೆಯಬೇಕು ಎಂಬ ಸ್ವಾತಂತ್ರ್ಯವೂ ಇಲ್ಲವೇ. ಹನುಮ ಜಯಂತಿ ಮಾಡ್ತಾರೆ ಅಂತ ಅದಕ್ಕೂ ಬ್ಯಾನ್ ಮಾಡ್ತೀರಾ. ನಂಜನಗೂಡಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಮಾಡುತ್ತೇವೆ.‌ ಟಿ.ನರಸೀಪುರದಲ್ಲಿ ಸರಿಯಾದ ಲೀಡರ್ ಇಲ್ಲದೆ ಇರದ ಕಾರಣ ಪಥಸಂಚಲನ ನಡೆಯದೆ ಸ್ಥಗಿತಗೊಂಡಿತು.ರಾಷ್ಟ್ರ ಸೇವೆ ಮಾಡಲು ರಿಜಿಸ್ಟ್ರೇಷನ್ ಮಾಡಿಸಬೇಕಾ..‌ ಆರ್ ಎಸ್ ಎಸ್ ಒಬ್ಬ ಭಾರತೀಯ ಕಟ್ಟಿರುವ ಸಂಘಟನೆಯಾಗಿದೆ.‌ ಕಾಂಗ್ರೆಸ್ ಪಕ್ಷವನ್ನು ಬೇರೆ ದೇಶದವರು ಕಟ್ಟಿರುವುದು ಇವರಿಗೆ ತಿಳಿದಿಲ್ಲವೇ? ನಂಜನಗೂಡಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಮಾಡೇ ಮಾಡ್ತೀವಿ. ಯಾರು ತಡೆಯುತ್ತಾರೋ ನಾನು ನೋಡ್ತೀನಿ ಎಂದು ಸವಾಲ್ ಹಾಕಿದರು.

ಇದನ್ನು ಓದಿ: ಬೆಂಗಳೂರಿನಲ್ಲಿ ಪಟಾಕಿ ಅವಘಡ: ಐವರಿಗೆ ಗಾಯ

ಟಿವಿ ಸೀರಿಯಲ್ ತರ ಸರ್ಕಾರ ನಡಿತಾ ಇದೆ
ಒಳ ಮೀಸಲಾತಿ, ಸಿಎಂ ಬದಲಾವಣೆ ಹೀಗೆ ಅನೇಕ ವಿಷಯವನ್ನು ತೆಗೆದುಕೊಂಡು ಕಾಂಗ್ರೆಸ್ ನವರೆ ಬರುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೇಲೆ ಶಾಸಕರಿಗೆ ನಂಬಿಕೆ ಇಲ್ಲ. ಎರಡುವರೆ ವರ್ಷದಲ್ಲಿ ಸರಿಯಾದ ಅನುದಾನವನ್ನು ನೀಡಿಲ್ಲ. ರಾಜ್ಯದಲ್ಲಿ ಅರಾಜಕತೆ ನಿರ್ಮಾಣವಾಗಿದೆ. ಕಾಂಗ್ರೆಸ್ ಶಾಸಕರಿಗೆ ಮಾತ್ರ 50 ಕೋಟಿ ಅನುದಾನ ನೀಡ್ತಾ ಇದ್ದಾರೆ.‌ ಈ ವರ್ಷದ ಕೊನೆಯ ತಿಂಗಳಿನಲ್ಲಿ ಅಥವಾ ಜನವರಿ ಮಾರ್ಚ್ ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.

ನಿಮ್ಮ ಚಿಕ್ಕಪ್ಪನನ್ನೇ ಕೇಳಿಕೊಂಡು ಬೇಗ ಕೆಲಸ ಮಾಡಪ್ಪ..!
ಎರಡುವರೆ ವರ್ಷ ಆಗಿದೆ ಕ್ಷೇತ್ರದ ಶಾಸಕರು ಕರಪ್ಶನ್ ಫ್ರೀ ಮಾಡುತ್ತೇನೆ ಎಂದು ಅವರು ಮೊದಲೇ ಹೇಳಿದ್ದರು. ಈಗ ಕಂಬಳಿ ಹೊದ್ದುಕೊಂಡು ಮಲಗಿದ್ದಾರೆ. ನಗರಸಭೆ ನರಕಸಭೆಯಾಗಿದೆ. ನಾನು ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಮಾಡಿದ್ದೆ ಅದು ದಾಖಲೆಯಾಗಿದೆ. ಇವರ ಯೋಗ್ಯತೆಗೆ ಬರಿ ಗುದ್ದಲಿ ಪೂಜೆ ಮಾಡುತ್ತಾರೆ. ಹೊರತು, ಯಾವುದೇ ತರದ ಕೆಲಸವೂ ಆಗಿಲ್ಲ. ಪೂಜೆ ಮಾಡಿರುವ ಕೆಲಸಗಳು ಕಂಪ್ಲೀಟ್ ಆಗಿಲ್ಲ. ಅದೆಲ್ಲವನ್ನು ತೆಗೆದುಕೊಂಡು ನನ್ನ ಬಗ್ಗೆ ಮಾತನಾಡುತ್ತಾರೆ. 224 ಶಾಸಕರಲ್ಲಿ ನಾನೊಬ್ಬನೇ ಶ್ವೇತಾ ಪತ್ರ ಹೊರಡಿಸಿ ಚುನಾವಣೆಗೆ ಹೋಗಿದ್ದೆ, ನಿನಗೆ ತಾಕತ್ತಿದ್ದರೆ ಮಾಡು ನೋಡೋಣ. ಎಷ್ಟು ಖರ್ಚಾಗಿದೆ ಅನ್ನೋದನ್ನು ನಾನು ನೋಡಬೇಕು. ಅನುದಾನ ಕೇಳಿದರೆ 700 800 ಕೋಟಿ ಎಂದು ಗ್ಯಾರಂಟಿ ಸೇರಿಸಿಕೊಂಡು ಜಾಸ್ತಿ ಹೇಳೋದು. ಉತ್ತಮ ಕ್ರೀಡಾಂಗಣ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಅದು ಕೂಡ ಹಾಗೇ ಬಿದ್ದಿದೆ ಯಾಕೆ ಅನುದಾನ ಇಲ್ಲವೇ. ಅದನ್ನು ಯಾಕೆ ಕಂಪ್ಲೀಟ್ ಮಾಡಿಲ್ಲ. ಹುಲ್ಲಹಳ್ಳಿ ರಸ್ತೆಯು ನನ್ನ ಅಧಿಕಾರದ ಅವಧಿಯಲ್ಲಿ ಆಗಿದೆ. ಯುಜಿಡಿ ಕೆಲಸವನ್ನು ಕಷ್ಟಪಟ್ಟು ತೆಗೆದುಕೊಂಡು ಬಂದೆ. ಒಂದು ರಿಬ್ಬನ್ ಕಟ್ ಮಾಡಿ ನಿಮ್ಮದು ಫೋಟೋ ಹಾಕೊಳ್ಳದೆ ಆಗಿದೆ. ನಿಮ್ಮ ಚಿಕ್ಕಪ್ಪನೆ ಕೇಳಿಕೊಂಡು ಬೇಗ ಕೆಲಸವನ್ನು ಮಾಡಿ. ಪ್ರಜ್ಞಾವಂತ ಮತದಾರರು ನಿಮಗೆ ಮತವನ್ನು ಹಾಕಿದ್ದಾರೆ ಅವರ ಪರವಾಗಿ ನಾನು ಕೇಳಿಕೊಳ್ಳುತ್ತಿದ್ದೇನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ವಿರುದ್ಧ ಮಾಜಿ ಶಾಸಕ ಬಿ. ಹರ್ಷವರ್ಧನ್ ಕಿಡಿ ಕಾರಿದ್ದಾರೆ.

ಆಂದೋಲನ ಡೆಸ್ಕ್

Recent Posts

ದಿಲ್ಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರ 2026 : ಕೃಷಿ ಮತ್ತು ತಂತ್ರಜ್ಞಾನದ ಸಮಾಗಮ

ಬೆಂಗಳೂರು : ಭಾರತವನ್ನು ಆತ್ಮನಿರ್ಭರ ರಾಷ್ಟ್ರವನ್ನಾಗಿಸುವ ದಿಶೆಯಲ್ಲಿ ಕರ್ನಾಟಕದಂತಹ ಸ್ವಾವಲಂಬಿ ರಾಜ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ…

6 hours ago

ಮ.ಬೆಟ್ಟ | ಪಾದಯಾತ್ರಿ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ; ನಿಟ್ಟುಸಿರು ಬಿಟ್ಟ ಯಾತ್ರಾರ್ಥಿಗಳು

ಹನೂರು : ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

6 hours ago

ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌ : 5 ವರ್ಷ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಒಪ್ಪಿಗೆ!

ಬೆಂಗಳೂರು : ರಾಜ್ಯದ ಎಲ್ಲಾ ರೀತಿಯ ಸಿವಿಲ್ ಹುದ್ದೆಗಳಿಗೆ 2027ರ ಡಿಸೆಂಬರ್ 31ರವರೆಗೆ ಹೊರಡಿಸುವ ನೇಮಕಾತಿ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲಾ…

8 hours ago

ಇವಿ ವಾಹನ ಸವಾರರಿಗೆ ಸಿಹಿ ಸುದ್ದಿ : ಮಂಡ್ಯದಲ್ಲಿ ಮೊದಲ ಇವಿ ಫಾಸ್ಟ್‌ ಚಾರ್ಜಿಂಗ್‌ ಕೇಂದ್ರ ಆರಂಭ

ಮಂಡ್ಯ : ಸಾರ್ವಜನಿಕರಿಗೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ವು ಜಿಲ್ಲೆಯಲ್ಲಿ…

8 hours ago

ಜಾ.ದಳ ಓಡಿಸಲು ಚಲುವರಾಯಸ್ವಾಮಿಗೆ ಸಾಧ್ಯವೇ? : ಜೆಡಿಎಸ್‌ ನಾಯಕ ಸುರೇಶ್‌ ಗೌಡ ಪ್ರಶ್ನೆ

ಮಂಡ್ಯ : ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯದ್ದು ಬರಿ ಡಬಲ್ ಸ್ಟ್ಯಾಂಡರ್ಡ್ ನಾಟಕವಾಗಿದೆ. ಜಾತ್ಯತೀತ ಜನತಾದಳವನ್ನು ಓಡಿಸುವುದಕ್ಕೆ ಅವರಿಗೆ ತಾಕತ್ತಿದೆಯೇ?.…

9 hours ago

ಜಮೀನು ಕಬಳಿಕೆ ಪ್ರಕರಣ | ಸಚಿವ ಚಲುವರಾಯಸ್ವಾಮಿಯೇ ನೇರ ಹೊಣೆ : ಸುರೇಶ್‌ಗೌಡ ಆರೋಪ

ನಾಗಮಂಗಲ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಕಬಳಿಕೆ ಪ್ರಕರಣ ಮಂಡ್ಯ : ನಾಗಮಂಗಲ ತಾಲ್ಲೂಕಿನ ನಕಲಿ ದಾಖಲೆ ಸೃಷ್ಟಿ…

9 hours ago