ಮೈಸೂರು: ರಾಜ ಮನೆತನದ ಇತಿಹಾಸವಿರುವ ಮೈಸೂರಿನ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ಸಂಬಂಧ ವಿರೋಧ ವ್ಯಕ್ತವಾಗಿದ್ದು ಯಾವೂದೇ ಕಾರಣಕ್ಕೂ ಮೈಸೂರು ಒಡೆಯರ ಮನೆತನಕ್ಕೆ ಅಪಮಾನ ಮಾಡಲ್ಲ ಎಂದು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಹೇಳಿದ್ದಾರೆ.
ಇಂದು (ಜ.6) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರ ಮೈಸೂರು ಡಿಸಿ ಹಾಗೂ ನಗರ ಪಾಲಿಕೆ ಕಮಿಷನರ್‌ಗೆ ಪತ್ರ ಬರದು ಈ ರಸ್ತೆಯಲ್ಲಿ ಹಲವಾರು ಆಸ್ಪತ್ರೆಗಳು ನಿರ್ಮಾಣವಾಗಿವೆ ಇದಕ್ಕೆ ಸಿದ್ದರಾಮಯ್ಯ ಕಾರಣ ಆದ್ದರಿಂದ ಅವರ ಹೆಸರಿಡಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದೆ. ಪಾಲಿಕೆಯಿಂದ ಅನುಮೋದನೆ ಸಿಕ್ಕಿದೆ ಆದರೆ ಕೌನ್ಸಿಲ್‌ನಲ್ಲಿ ಅದು ನಿರ್ಧಾರ ಆಗಿಲ್ಲ ಎಂದರು.
ಈ ಕುರಿತು ಆಕ್ಷೇಪಣೆ ಇದ್ದರೆ ತಿಳಿಸಲು ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಇದಕ್ಕೆ ಸಾಮಾಜಿಕ ಕಾರ್ಯಕರ್ತರು, ಬಿಜೆಪಿ ಸಂಸದ ಯದುವೀರ್ ಇನ್ನಿತರರು ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವುದು ರಾಜ ಮನೆತನಕ್ಕೆ ಮಾಡುವ ಅವಮಾನ ಎಂದು ಆಕ್ಷೇಪಣೆ ಸಲ್ಲಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸದ ಅವರು, ನಾನು ರಾಜಮನೆತನಕ್ಕೆ ಯಾವುದೇ ಅವಮಾನ ಮಾಡುತ್ತಿಲ್ಲ.ಮೈಸೂರು ಮಹಾರಾಜರು ಈ ರಾಜ್ಯಕ್ಕೆ ನೀಡಿರುವ ಕೊಡುಗೆ ಸೂರ್ಯ-ಚಂದ್ರ ಇರುವವರೆಗೂ ಶಾಶ್ವತ ಎಂದು ಹೇಳಿದರು.
ರಸ್ತೆಯ ವಿಚಾರವಾಗಿ ಮಾತನಾಡಿ, ದಾಸಪ್ಪ ವೃತದಿಂದ ಲಕ್ಷ್ಮೀ ವೆಂಕಟರಮಣ ದೇವಸ್ಥಾನದವರೆಗೆ ಮಾತ್ರ ಪ್ರಿನ್ಸೆಸ್ ಹೆಸರಿರೋದು ಅಲ್ಲಿಂದ ರಾಯಲ್ ಇನ್ ಜಂಕ್ಷನ್‌ವರೆಗೆ ಆ ರಸ್ತೆಗೆ ಯಾವುದೇ ಹೆಸರಿಲ್ಲ. ಬೇಕಾದರೆ ಯಾರಾದರೂ ಪರಿಶೀಲನೆ ಮಾಡಲಿ ಎಂದು ಹೇಳಿದರು.
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…
ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ ಹಬ್ಬಕ್ಕೆ ಅಗತ್ಯ ಸಿದ್ಧತೆ ವಿರಾಜಪೇಟೆ: ಕೇರಳ ಹಾಗೂ…
ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…
‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…