ಮೈಸೂರು

ಅತ್ಯಾಚಾರ ಕೇಸ್‌| ಆರೋಪಿಗೆ 10 ವರ್ಷ ಶಿಕ್ಷೆ ವಿಧಿಸಿದ ಮೈಸೂರು ಜಿಲ್ಲಾ ನ್ಯಾಯಾಲಯ

ಮೈಸೂರು: ಅವಿವಾಹಿತ ಮಹಿಳೆ ಮೇಲೆ ಅತ್ಯಾಚಾರವೆಸೆಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡವನ್ನು ವಿಧಿಸಲಾಗಿದೆ ಎಂದು ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್‌ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಈ ಕುರಿತು ಇಂದು(ಫೆಬ್ರವರಿ.25) ವಿಚಾರಣೆ ನಡೆಸಿದ ಕೋರ್ಟ್‌, ಹುಣಸೂರು ತಾಲ್ಲೂಕಿನ(ಪಟ್ಟಣ) ಲಾಲ್‌ ಬಂದ್‌ ಸ್ಟ್ರೀಟ್‌ ನಿವಾಸಿ ಜಬೀವುಲ್ಲಾ(26) S/O ಅತಾವುಲ್ಲಾ ಎಂಬಾತ ಮಹಿಳೆಗೆ ದೆವ್ವ ಬಿಡಿಸುವ ನೆಪದಲ್ಲಿ ಅತ್ಯಾಚಾರ ಎಸಗಿರುವುದು ರುಜುವಾತಾಗಿದೆ. ಹೀಗಾಗಿ ಆರೋಪಿಯನ್ನು ಅಪರಾಧಿ ಎಂದು ಪರಿಗಣಿಸಿ ಆರೋಪಿಗೆ ಕಲಂ 376 ಐಪಿಸಿ ಅಡಿಯಲ್ಲಿ 10 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ, 30 ಸಾವಿರ ರೂ. ದಂಡ ಹಾಗೂ ಕಲಂ 506 ಐಪಿಸಿ ಅಡಿಯ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 5 ಸಾವಿ ರೂ. ದಂಡ ವಿಧಿಸಲಾಗಿದೆ ಎಂದು ಆದೇಶ ಹೊರಡಿಸಿದೆ.

ಏನಿದು ಪ್ರಕರಣ?

ಸಂತ್ರಸ್ಥೆ ಮಹಿಳೆಗೆ 33 ವರ್ಷಗಳಾದರೂ ಮದುವೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕೆಯನ್ನು ಆರೋಪಿ ಆರೋಪಿ ಜಬೀವುಲ್ಲಾ ಬಿನ್ ಅತಾವುಲ್ಲಾ ಬಳಿ ಕರೆದುಕೊಂಡು ಹೋಗಿದ್ದರು. ಈ ನಡುವೆ ಆರೋಪಿಯೇ ತಾನು ಧರ್ಮಗುರು ಎಂದು ಹೇಳಿಕೊಂಡಿದ್ದು, ಸಂತ್ರಸ್ತೆಗೆ ದೆವ್ವ ಹಿಡಿದಿದೆ ಹೇಳಿದ್ದನು. ಬಳಿಕ ಪೂಜೆ ಮಾಡಿ ಬಿಡಿಸಿದರೆ ಮದುವೆಯಾಗುತ್ತದೆ ಎಂದು ತಿಳಿಸಿದ್ದನು. ಅಂತೆಯೇ 01-06-2020 ರಂದು ಬೆಳಿಗ್ಗೆ 10-00 ಗಂಟೆಗೆ ಸಂತ್ರಸ್ಥೆಯ ಮನೆಯಲ್ಲಿ ಪೂಜೆ ಮಾಡಿದ್ದು, ಮೊಟ್ಟೆ, ನಿಂಬೆಹಣ್ಣನ್ನು ಬೋಲೆಬಾಲೆ ಹಜರತ್ ಶಾ ಖಾದ್ರಿ ಅಂಬ್ರಿಗೋರಿಯ ಬಳಿ ಒಡೆಯಬೇಕೆಂದು ಹೇಳಿ ಪಿರಿಯಾಪಟ್ಟಣದ ಬೋಲೆಬಾಲೆ ಗೋರಿಯ ಸಮೀಪ ಸಂತ್ರಸ್ಥೆ ಹಾಗೂ ಆಕೆಯ ಸಂಬಂಧಿ ಸಾದಿಕ್ ಪಾಷ ಅವರನ್ನು ಕರೆದುಕೊಂಡು ಹೋಗಿದ್ದನು.

ಈ ಮಧ್ಯೆ ಆರೋಪಿಯೂ ಸಾದಿಕ್‌ ಪಾಷ ಅವರಿಗೆ ಬೆಂಕಿ ಪೊಟ್ಟಣ ತರುವಂತೆ ಪಿರಿಯಾಪಟ್ಟಣ ನಗರಕ್ಕೆ ಕಳುಹಿಸಿದ್ದನು. ಬಳಿಕ ಅಂದು ಮಧ್ಯಾಹ್ನವೇ ಸಂತ್ರಸ್ಥೆ ಒಬ್ಬರೇ ಇದ್ದಾಗ ಬಲವಂತವಾಗಿ ಅತ್ಯಾಚಾರವೆಸಗಿದ್ದನು. ಇನ್ನು ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅರ್ಚನ ಎಸ್‌ ಎಸ್

Recent Posts

ದಕ್ಷಿಣ ಭಾರತದ ಖ್ಯಾತ ನಟಿ ಬಿಂದು ಘೋಷ್‌ ನಿಧನ

ಚೆನ್ನೈ: ಕಳೆದ ಕೆಲವು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹಾಸ್ಯ ನಟಿ ಬಿಂದು ಘೋಷ್‌ ನಿಧನರಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ…

47 mins ago

ಹಾಸನ: ಸತತ ನಾಲ್ಕು ಗಂಟೆಗಳ ನಂತರ ಸೆರೆಯಾದ ಒಂಟಿಸಲಗ: ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಹಾಸನ: ಜಿಲ್ಲೆಯ ಬೇಲೂರು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇಂದು ಕಾಡಾನೆಯೊಂದನ್ನು ಸೆರೆಹಿಡಿಯಲಾಗಿದೆ. ಬೇಲೂರು ಭಾಗದಲ್ಲಿ ಕಾಡಾನೆಗಳ ಉಪಟಳ ದಿನದಿಂದ…

1 hour ago

ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರ: ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಛಲವಾದಿ ನಾರಾಯಣಸ್ವಾಮಿ ಅವರು ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಈ…

2 hours ago

ಪಾಕಿಸ್ತಾನ ಭಾರತದ ಜೊತೆ ಪರೋಕ್ಷ ಯುದ್ಧ ಮಾಡುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ನೆರೆಯ ಪಾಕಿಸ್ತಾನ ಭಾರತದ ಜೊತೆ ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು…

2 hours ago

ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನಾದ್ಯಂತ ವರ್ಷದ ಮೊದಲ ವರ್ಷಧಾರೆ

ಎಚ್.ಡಿ.ಕೋಟೆ/ಸರಗೂರು: ತಾಲ್ಲೂಕುಗಳಾದ್ಯಂತ ಇಂದು ಸಂಜೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಕಾದ ಭೂಮಿಗೆ ತಂಪೆರೆದಿದೆ. ಎಚ್.ಡಿ.ಕೋಟೆ ಹಾಗೂ ಸರಗೂರು…

3 hours ago

ಹನೂರಿನಲ್ಲಿ ಮುಂದುವರಿದ ಕಾಡಾನೆಗಳ ಉಪಟಳ: ಸೋಲಾರ್‌ ಬೇಲಿಯನ್ನೇ ನಾಶ ಮಾಡಿದ ಆನೆಗಳು

ಹನೂರು: ತಾಲ್ಲೂಕಿನಲ್ಲಿ ಆನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಹನೂರು ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಕಾಡಾನೆಗಳ ಹಾವಳಿ…

3 hours ago