ಮೈಸೂರು

ಮಹಾ ಕುಂಭಮೇಳ ಸ್ನಾನ: ನಕಲಿ ಫೋಟೋ ಶೇರ್‌ ಮಾಡಿದ್ದ ಪ್ರಶಾಂತ್‌ ಸಂಬರ್ಗಿ ವಿರುದ್ಧ ದೂರು ದಾಖಲಿಸಿದ ಪ್ರಕಾಶ್‌ ರಾಜ್‌

ಮೈಸೂರು: ಮಹಾಕುಂಭಮೇಳದಲ್ಲಿ ನಟ ಪ್ರಕಾಶ್‌ ರಾಜ್‌ ಸ್ನಾನ ಮಾಡುತ್ತಿರುವ ರೀತಿಯಂತಹ ನಕಲಿ ಫೋಟೋವನ್ನು ವೈರಲ್‌ ಮಾಡಿ ಶೇರ್‌ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರ್ಗಿ ಅವರ ವಿರುದ್ಧ ಪ್ರಕಾಶ್‌ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರಿನ ಜಯಲಕ್ಷ್ಮೀಪುರ ಪೊಲೀಸ್‌ ಠಾಣೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು, ಪ್ರಶಾಂತ್‌ ಸಂಬರ್ಗಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ವಿಚಾರದ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್‌ ರಾಜ್‌ ಅವರು, ಕುಂಭಮೇಳದ ಪುಣ್ಯ ಸ್ನಾನ ದೇಶದಲ್ಲಿ ನಡೆಯುತ್ತಿದೆ. ಈ ಸ್ನಾನ ಹಿಂದೂ ಧರ್ಮದವರಿಗೆ ಮತ್ತು ದೇವರನ್ನು ನಂಬಿ, ಪೂಜಿಸುವವರಿಗೆ ಅದು ಪುಣ್ಯ ಸ್ಥಳವಾಗಿದೆ. ಹೀಗಿರುವಾಗ ಎಐ ಆಪ್‌ ಬಳಸಿ ಪ್ರಕಾಶ್‌ ರಾಜ್‌ ಕುಂಭಮೇಳದಲ್ಲಿ ಸ್ನಾನ ಮಾಡಿದರಾ? ಎಂದು ಫೋಟೋ ಶೇರ್‌ ಮಾಡಿ ವೈರಲ್‌ ಆಗುವಂತೆ ಮಾಡುತ್ತಿದ್ದಾರೆ. ಅಲ್ಲದೇ ಅಂತಹ ಪುಣ್ಯಕ್ಷೇತ್ರದಲ್ಲಿ ಸ್ನಾನ ಮಾಡುವ ವಿಚಾರದಲ್ಲೂ ಇದೀಗ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಪ್ರಶಾಂತ್‌ ಸಂಬರ್ಗಿ ಫೋಟೋ ವೈರಲ್‌ ಮಾಡಿದಲ್ಲದೇ, ಪ್ರಕಾಶ್‌ ರಾಜ್‌ ಹಿಂದೂ ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಅವರು ಪ್ರಖ್ಯಾತರೋ? ಅಥವಾ ಕುಖ್ಯಾತರೋ ನನಗೆ ತಿಳಿದಿಲ್ಲ. ಆದರೆ ದೇಶದಲ್ಲಿ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಅಭ್ಯಾಸವಾಗಿದೆ. ಆದರೆ ಇದನ್ನು ಯಾರು ಪ್ರಶ್ನಿಸುತ್ತಿಲ್ಲ, ಅವರು ದ್ವೇಷವನ್ನು ಹರಡುತ್ತಿದ್ದಾರೆ. ಇವರು ನಿಜವಾದ ಹಿಂದೂ ಧರ್ಮದವರಲ್ಲ, ಅವರು ಸಾರ್ವಜನಿಕರ ನಂಬಿಕೆಗೆ ಆಘಾತ ಮಾಡುತ್ತಿದ್ದಾರೆ. ಹೀಗಾಗಿ ನನ್ನ ವಿರುದ್ಧ ಸಾಕಷ್ಟು ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ಈ ಕಾರಣಕ್ಕೆ ಪ್ರಶಾಂತ್‌ ಸಂಬರ್ಗಿ ಮೇಲೆ ಕೇಸ್‌ ದಾಖಲಿಸಿದ್ದೇನೆ. ಹೀಗಾಗಿ ನನ್ನ ದೂರಿನ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿದೆ. 15 ದಿನಗಳಲ್ಲಿ ಆ ವ್ಯಕ್ತಿ ಠಾಣೆಗೆ ಬಂದು ಉತ್ತರ ನೀಡಬೇಕು. ಹಾಗಾಗಿ ಸತ್ಯಾಸತ್ಯತರ ಎಲ್ಲರಿಗೂ ತಿಳಿಯಬೇಕು ಎಂದು ಹೇಳಿದರು.

ಅರ್ಚನ ಎಸ್‌ ಎಸ್

Recent Posts

ಕೋಗಿಲು ಲೇಔಟ್‌ ಒತ್ತುವರಿ ತೆರವು: ಸತ್ಯಶೋಧನಾ ತಂಡ ರಚಿಸಿ ವಿಜಯೇಂದ್ರ ಆದೇಶ

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿರುವ ಕೋಗಿಲು ಲೇಟ್‍ನ ಮನೆ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ…

7 mins ago

ನನ್ನ ವಿರುದ್ಧ 17 ಕೇಸ್‌ ಇದೆ, ಇನ್ನೂ ಹಾಕೋಕೆ ಹೇಳಿ ಆದ್ರೆ ದಾರಿ ತಪ್ಪಿಸಬೇಡಿ: ಪ್ರತಾಪ್‌ ಸಿಂಹ

ಬೆಂಗಳೂರು: ನನ್ನ ವಿರುದ್ಧ 17 ಕೇಸ್‌ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ…

16 mins ago

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್‌ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಪರಮೇಶ್ವರ್‌…

44 mins ago

ಕೇರಳ ಸಿಎಂ, ಕೆ.ಸಿ.ವೇಣುಗೋಪಾಲ್‌ ಜೊತೆ ವೇದಿಕೆ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ

ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…

1 hour ago

ಹೊಸ ವರ್ಷಾಚರಣೆ: ಮೈಸೂರಿಗೆ ಲಗ್ಗೆಯಿಟ್ಟ ಪ್ರವಾಸಿಗರು

ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್‌ ಶುರುವಾಗಿದ್ದು, ನ್ಯೂ ಇಯರ್‌ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…

2 hours ago

ವಾಲ್ಮೀಕಿ ನಿಗಮ ಹಗರಣ ಪ್ರಕರಣ: ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನ ಮನೆ ಮೇಲೆ ಸಿಬಿಐ ದಾಳಿ

ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್‌ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್‌…

2 hours ago