ಮೈಸೂರು

ಕಳಪೆ ಬಿತ್ತನೆ ಬೀಜ ಮಾಜಿ ಶಾಸಕರ ಜಮೀನಿನಲ್ಲಿ ಕಾಳುಕಟ್ಟದ ಬತ್ತ

ನಂಜನಗೂಡು : ಕಳಪೆ ಬಿತ್ತನೆ ಬೀಜ ಬಿತ್ತಿದ ಪರಿಣಾಮ ಮಾಜಿ ಶಾಸಕರ ಜಮೀನಿನಲ್ಲಿ ಬತ್ತದ ಪೈರು ಆಳೆತ್ತರಕ್ಕೆ ಬೆಳದಿದ್ದರೂ ಸರಿಯಾಗಿ ಕಾಳು ಕಟ್ಟದೆ ನಷ್ಠವಾಗುತ್ತಿರುವ ಘಟನೆ ನಡೆದಿದೆ.

ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ರೈತ ಮಾಜಿ ಶಾಸಕ ಹೆಜ್ಜಿಗೆ ಶ್ರೀನಿವಾಸರ ಜಮೀನೀನಲ್ಲಿ ಈ ಬಾರಿ ಬತ್ತದ ಪೈರು ಬೆಳದೂ ಬತ್ತ ಸಿಗದೆ ಕೇವಲ ಹುಲ್ಲಿಗಾಗಿ ಬತ್ತದ ಕೃಷಿ ಮಾಡಿದಂತಾಗಿದೆ.

ರಾಜ್ಯ ರೈತ ಸಂಘದ ಕಾರ್ಯದರ್ಶಿ ಆಗಿರುವ ಶ್ರೀನಿವಾಸನವರ ಪುತ್ರ ಪ್ರಕಾಶ, ನಗರದ ಕಿಸಾನ ಫರ್ಟಿಲೇಸರ‌್ಸ ಮಳಿಗೆಯಿಂದ ಕಾವೇರಿ ಸೀಡ್ಸ್ ನ ಬತ್ತದ ಬೀಜ ತಂದು ನಾಟಿ ಮಾಡಿದ್ದು ಬತ್ತದ ಪೈರು ಮಾತ್ರ ಸಖತ್ತಾಗಿ ಬೆಳೆದು ನಿಂತಿದ್ದನ್ನು ನೋಡಿದಾಗ ಬೆಳೆ ಬಂಪರ್ ಎಂದುಕೊಂಡೆ ಆದರೆ ಈಗ ಈಗ ನೋಡಿದರೆ ಶೇ% ೨೫ ರಷ್ಠು ಸಹ ಬತ್ತದ ಕಾಳು ಕಟ್ಟೇ ಇಲ್ಲಾ. ಕಳಪೆ ಬೀಜದಿಂದ ನಮಗಾಗುವ ನಷ್ಠಕ್ಕೆ ಯಾರು ಹೊಣೆ ಎನ್ನುತ್ತಾರೆ.

ಕಳಪೆ ಬೀಜದಿಂದಾಗಿ ಹೆಜ್ಜಿಗೆ ಗ್ರಾಮದಲ್ಲಿ ಒಂದು ಎಕರೆಗೆ ಈ ಬೀಜವನ್ನು ತಂದು ನಾಟಿ ಮಾಡಿದ್ದು ತಮಗೀಗ ಶೇ ೭೫ ರಷ್ಟು ನಷ್ಠವಾಗುತ್ತಿದ್ದು, ಈ ಕುರಿತು ಈಗಾಗಲೆ ತಾಲೂಕು ಕೃಷಿ ಅಧಿಕಾರಿಗಳಿಗೆ ದೂರೂ ನೀಡಿದ್ದು ಅವರು ಸ್ಥಳಕ್ಕೆ ಆಗಮಿಸಿ ಬೆಳೆ ಪರಿಕ್ಷೆ ಮಾಡಿಕೊಂಡು ಹೋಗಿದ್ದಾರೆ. ತಾಲೂಕಿನಲ್ಲಿ ಈ ಬತ್ತವನ್ನು ಸಾಕಷ್ಠು ಜನ ಖರಿದಿಸಿ ಬೆಳೆ ಬೆಳದಿದ್ದು ಎಲ್ಲಡೆ ಇದೇ ರೀತಿ ಕಾಳು ಕಟ್ಟಿಲ್ಲ. ಸರ್ಕಾರವೇ ಈಗ ಈ ಕಳಪೆ ಬೀಜದೀಂದಾಗ ನಷ್ಠ ಭರ್ತಿ ಮಾಡಿಕೊಡಲಿ ಎಂದು ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ ಎಂದು ಸಿಎಂ…

6 hours ago

ನಂಜನಗೂಡು: ಬೋನಿಗೆ ಬಿದ್ದ ಚಿರತೆ

ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು…

6 hours ago

ವಂದೇ ಮಾತರಂ ಅರ್ಧಕ್ಕೆ ಕಡಿತ: ಆದೇಶ ಮರುಪರಿಶೀಲನೆಗೆ ರಾಜ್ಯಪಾಲರ ಸೂಚನೆ

ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ…

6 hours ago

ಮದ್ದೂರಿನಲ್ಲಿ ನಿವೃತ್ತ ಹಾಸ್ಟೆಲ್ ಅಧೀಕ್ಷಕನ ಮನೆ ಮೇಲೆ ಲೋಕಾಯುಕ್ತ ದಾಳಿ

ಮದ್ದೂರು: ಮದ್ದೂರಿನಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಹಾಸ್ಟೆಲ್…

8 hours ago

ಮಂಡ್ಯದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ

ಮಂಡ್ಯ: ನಗರದ ಗಾಂಧಿನಗರದಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಗಾಂಧಿನಗರ ನಿವಾಸಿ 47 ವರ್ಷದ ಪುರುಷೋತ್ತಮ್…

10 hours ago

ಓದುಗರ ಪತ್ರ: ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಸ್ವಾಗತಾರ್ಹ

ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ…

16 hours ago