ಮೈಸೂರು : ಅದೊಂದು ರಸ್ತೆ ಬದಿಯಲ್ಲೇ ಸೃಷ್ಟಿಯಾಗಿದ್ದ ತೆರೆದ ಸುದ್ದಿಮನೆ! ಅಲ್ಲಿ ಕ್ಷಣಕಾಲ ನಿಂತರೆ ಲೋಕದ ಪ್ರಚಲಿತ ವಿದ್ಯಮಾನಗಳು ಗಮನಕ್ಕೆ ಬರುತ್ತಿತ್ತು. ನಗರದ ಹೃದಯ ಭಾಗ ಲ್ಯಾನ್ಸ್‌ಡೌನ್ ಕಟ್ಟಡದ ಮಳಿಗೆಯಲ್ಲಿ ಮೂರ್ನಾಲ್ಕು ದಶಕಗಳ ಕಾಲ ಜಗತ್ತಿನ ಬಹುತೇಕ ಸುದ್ದಿ ಪತ್ರಿಕೆಗಳನ್ನು ಮಾರುವ ಕಾಯಕವನ್ನೇ ತಪ್ಪಸ್ಸಿನಂತೆ 70 ವರ್ಷಗಳಿಗೂ ಹೆಚ್ಚು ಕಾಲ ನಡೆಸಿಕೊಂಡು ಬರುವ ಮೂಲಕ ಎಂ.ಆರ್.ಸುಬ್ರಹ್ಮಣ್ಯ (87), ಪೇಪರ್ ಸುಬ್ಬಣ್ಣ ಎಂದೇ ಹೆಸರಾಗಿದ್ದರು.
ಬಾಲಕನಾಗಿದ್ದಾಗಲೇ ಮೈಸೂರಿಗೆ ಬಂದು ಪತ್ರಿಕಾ ಮಾರಾಟದ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಸುಬ್ಬಣ್ಣ ಅವರು, ಲ್ಯಾನ್ಸ್‌ಡೌನ್ ಕಟ್ಟಡ ಕುಸಿದು ಬಿದ್ದಾಗಲೂ ತನ್ನ ಕಾಯಕ ನಿಷ್ಠೆಯನ್ನು ಮರೆಯಲಿಲ್ಲ. ಬದಲಿಗೆ ಜಗನ್ಮೋಹನ ಅರಮನೆ ರಸ್ತೆ ಬದಿಯಲ್ಲೇ ಪತ್ರಿಕೆಗಳ ಮಾರಾಟವನ್ನು ಮುಂದುವರಿಸಿದರು. ತನ್ನ ಕೊನೆಯ ದಿನದ ವರೆಗೂ ಅವರು ತನ್ನ ಕಾಯಕವನ್ನು ಮರೆಯಲಿಲ್ಲ. ಮಳೆ-ಬಿಸಿಲೆನ್ನದೇ ಜಗನ್ಮೋಹನ ಅರಮನೆ ರಸ್ತೆಯ ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಪಾರ್ಶ್ವದಲ್ಲಿ ಪತ್ರಿಕೆಗಳನ್ನು ಹರಡಿಕೊಂಡು ಗ್ರಾಹಕರನ್ನು ನಿರೀಕ್ಷಿಸುತ್ತಾ ಕುಳಿತಿರುತ್ತಿದ್ದ ದೃಶ್ಯಆ ರಸ್ತೆಯಲ್ಲಿ ಸಾಗಿದವರಿಗೆ ಕಣ್ಣಿಗೆ ಕಟ್ಟಿದಂತಿದೆ. ಹೀಗೆ ಪತ್ರಿಕೆಗಳನ್ನು ಹರಡಿಕೊಂಡು ಕುಳಿತ ಸುಬ್ಬಣ್ಣ, ಪತ್ರಿಕೆ ಮಾರಾಟ ಮಾಡಿ ಹಣ ಏಣಿಸಿಕೊಂಡು ಹೋದವರಲ್ಲ. ಮೈಸೂರು ನಗರದಲ್ಲಿ ಪತ್ರಕರ್ತರ ಭವನ ಆರಂಭವಾಗುವುದಕ್ಕೂ ಮುನ್ನ ಸುಬ್ಬಣ್ಣನವರ ಪತ್ರಿಕಾ ಮಾರಾಟ ಮಳಿಗೆಯೇ ಸುದ್ದಿಗಳ ವಿನಿಮಯ, ಪತ್ರಕರ್ತರ ಚರ್ಚೆಯ ತಾಣವೂ ಆಗಿತ್ತು. ಹೀಗಾಗಿಯೇ ಮೈಸೂರಿನಲ್ಲಿ ಪತ್ರಿಕಾ ವೃತ್ತಿ ಆರಂಭಿಸಿ ಇಂದು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಿರಿಯ ಪತ್ರಕರ್ತರಾಗಿ ಬೆಳೆದಿರುವವರೆಲ್ಲ ಮೈಸೂರಿಗೆ ಬಂದರೆ ಇಂದಿಗೂ ಸುಬ್ಬಣ್ಣ ಅವರನ್ನು ಮಾತನಾಡಿಸದೆ ಹೋಗುತ್ತಿರಲಿಲ್ಲ.
ಶನಿವಾರ ಮುಂಜಾನೆ ನಿಧನರಾದ ಎಂ.ಆರ್.ಸುಬ್ರಹ್ಮಣ್ಯ (೮೭) ಅವರ ಪಾರ್ಥೀವ ಶರೀರವನ್ನು ಚೆಲುವಾಂಬ ಅಗ್ರಹಾರದ ಅವರ ಮನೆುಂಲ್ಲಿ ಮಧ್ಯಾಹ್ನ ೨ ಗಂಟೆುಂವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಂತ್ಯಕ್ರಿೆುಂ ನಡೆಸಲಾಯಿತು.
ಮೃತರು ಒಬ್ಬ ಪುತ್ರ, ಒಬ್ಬ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸುಬ್ಬಣ್ಣನವರ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಪತ್ರಿಕಾ ವಿತರಕರ ಸಂಘ, ಪತ್ರಿಕಾ ವಿತರಕರ ಕ್ಷೇವಾಭಿವೃದ್ಧಿ ಸಂಘ ಹಾಗೂ ಪತ್ರಿಕಾ ಏಜೆಂಟರ ಸಂಘಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ.
ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…