ಮೈಸೂರು

ದಕ್ಷಿಣ ಕಾಶಿಯ ಪಂಚ ಮಹಾರಥೋತ್ಸವಕ್ಕೆ ಭಾರಿ ಸಿದ್ಧತೆ

ಯಶಸ್ವಿಯಾಗಿ ಜಾತ್ರೆ ನಡೆಸಲು ಶಾಸಕ, ಡಿಸಿ ಪಣ; ರಥೋತ್ಸವದ ನಂತರ ವಿವಿಧೆಡೆ ಅರವಟ್ಟಿಗೆಗಳ ಸೇವೆ 

ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ಜಾತ್ರೆಗೆ ಈ ಬಾರಿ ಸಕಲ ಸಿದ್ಧತೆ ನಡೆಸಲಾಗಿದೆ. ಪಂಚ ಮಹಾ ರಥೋತ್ಸವವನ್ನು ಲೋಪದೋಷಗಳಿಲ್ಲದೆ ಅದ್ಧೂರಿಯಾಗಿ ನಡೆಸಬೇಕು ಎಂದು ಪಣ ತೊಟ್ಟಿರುವ ಶಾಸಕ ದರ್ಶನ್ ಧ್ರುವನಾರಾಯಣ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ತಲಾಎರಡು ಸಭೆಗಳನ್ನು ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಜಿಲ್ಲಾಧಿಕಾರಿಗಳಂತೂ ಜಾತ್ರೋತ್ಸವದ ಸಿದ್ಧತೆಗಾಗಿಯೇ ಮೂರು ಬಾರಿ ಭೇಟಿ ನೀಡಿದ್ದು, ಪ್ರತಿಯೊಬ್ಬ ಅಧಿಕಾರಿಗೂ ಅವರ ಜವಾಬ್ದಾರಿಗಳನ್ನು ಹಂಚಿ ಅಡೆ ತಡೆಯಿಲ್ಲದೆ, ಲೋಪಗಳು ಬಾರದಂತೆ ಜಾತ್ರೆಯನ್ನು ಸಂಪನ್ನಗೊಳಿಸಲು ಶಾಸಕರೊಂದಿಗೆ ಮುತುವರ್ಜಿ ವಹಿಸಿದ್ದಾರೆ.

ಅರವಟ್ಟಿಗೆಗಳ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ನಂಜನಗೂಡು ಶ್ರೀಕಂಠೇ ಶ್ವರನ ಪಂಚ ಮಹಾರಥೋತ್ಸವದಲ್ಲಿ ಅರವಟ್ಟಿಗೆಗಳ ವಿತರಣೆಗೆ ಈ ಬಾರಿಯೂ ಭಾರೀ ಸಿದ್ಧತೆ ಆರಂಭವಾಗಿದೆ. ಸೋಮವಾರ ಬೆಳಿಗ್ಗೆ ೫.೫೦ರಿಂದ ೬.೩೦ರೊಳಗೆ ನಡೆಯುವ ಶ್ರೀಕಂಠೇಶ್ವರನ ರಥಾರೋಹಣದ ನಂತರ ನಂಜನ ಗೂಡಿನ ಬೀದಿಬೀದಿಗಳಲ್ಲಿ ಅರವಟ್ಟಿಗೆಗಳ ವಿತರಣೆ ಆರಂಭವಾಗಲಿದೆ.

ದೇವಾಲಯದ ದಾಸೋಹ ಭವನದಲ್ಲಿ ಹತ್ತಾರು ಸಾವಿರ ಜನರಿಗೆ ಪ್ರಸಾದ ವಿತರಣೆ ನಡೆದರೆ, ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಬೆಂಗಳೂರಿನ ಶಾರದಾ ರಾಜಗೋಪಾಲ ಕುಟುಂಬ ನೀರು, ಮಜ್ಜಿಗೆ, ಬೇಲದ ಹಣ್ಣಿನ ಪಾನಕ, ಕೋಸಂಬರಿವಿತರಣೆಗೆ ಸಿದ್ಧತೆ ನಡೆಸಿದೆ.

ಬೆಂಗಳೂರಿನ ಮಲ್ಲೇಶ್ವರಂನ ಶ್ರೀಕಂಠೇಶ್ವರ ಸೇವಾ ಸಂಘದ ನೇತೃತ್ವದಲ್ಲಿ ಸಿಹಿತಿನಿಸುಗಳ ತಯಾರಿಕೆ ಎಂದಿನಂತೆ ಈ ಬಾರಿಯೂ ಭರದಿಂದ ಸಾಗಿದೆ. ಸಂಸ್ಥೆಯ ಕಳೆದ ೪೦ ವರ್ಷಗಳಿಂದ ಶ್ರೀಕಂಠೇಶ್ವರನ ಜಾತ್ರೆಯಲ್ಲಿ ಅರವಟ್ಟಿಗೆಗಳ ಸೇವೆಯನ್ನು ನಡೆಸುತ್ತಿದ್ದು, ಆ ನೆನಪಿಗಾಗಿ ಈ ಬಾರಿ ಜಾತ್ರೆಗೆ ಆಗಮಿಸುವ ಲಕ್ಷಾಂತರ ಜನರಿಗೆ ಸಿಹಿ ಹಂಚಲು ತಯಾರಿ ನಡೆದಿದೆ ಎನ್ನುತ್ತಾರೆ ಅದರ ಸಂಸ್ಥಾಪಕರು ಹಾಗೂ ಹಾಲಿ ಗೌರವಾಧ್ಯಕ್ಷರೂ ಆಗಿರುವ ಬೆಂಗಳೂರು ನಗರಪಾಲಿಕೆಯ ಮಾಜಿ ಸದಸ್ಯ ಎನ್.ಎ.ಚಿದಂಬರ್. ಈ ವಿತರಣೆಯಲ್ಲದೆ ಕಾಮಾಕ್ಷಿ ಬಾಯಿ ಕಲ್ಯಾಣ ಮಂಟಪದಲ್ಲಿ ಭಾನು ವಾರ, ಸೋಮವಾರಗಳಂದು ಹತ್ತಾರು ಸಾವಿರ ಜನರಿಗೆ ಭೂರಿ ಭೋಜನ ಏರ್ಪಡಿಸಲಾಗಿದೆ. ದೊಡ್ಡಬಳ್ಳಾಪುರದ ನಂಜುಂಡೇಶ್ವರನ ಭಕ್ತರು ಶ್ರೀಕಂಠೇಶ್ವರ ದೇವಾಲಯದ ಹಿಂಭಾಗದ ವೀರಭದ್ರ ಮಂಟಪದ ಆವರಣ ಹಾಗೂ ನಂಜುಂಡೇಶ್ವರ ಸಂಘ, ಗಿರಿಜಾ ಕಲ್ಯಾಣ ಮಂದಿರಗಳಲ್ಲಿ ಭೂರಿ ಭೋಜನದ ವ್ಯವಸ್ಥೆ ಕೈಗೊಂಡಿದ್ದರೆ, ನಂಜುಂಡೇಶ್ವರ ಭವನದಲ್ಲಿ ಪ್ರಸಾದ ವಿತರಣೆ ನಡೆಯಲಿದೆ.

ಇದಲ್ಲದೆ, ನಂಜನಗೂಡು ಬ್ರಾಹ್ಮಣ ಯುವ ಸಮಿತಿ, ಎ.ವಿ.ನಾರಾ ಯಣ ಮಿತ್ರ ಮಂಡಳಿ, ತಾಲ್ಲೂಕು ಕಂದಾಯ ನೌಕರರ ಸಂಘ, ಆರ‍್ಯವೈಶ್ಯ ಮಂಡಳಿ, ವಿಶ್ವಕರ್ಮ ಸಂಘ, ಎಟಿ ಅಂಡ್ ಎಸ್ ನೌಕರರ ಸಂಘ, ನೆಸ್ಲೆ ಉದ್ಯೋಗಿಗಳ ಸಂಘ, ಕುಂಬಾರರ ಸಂಘ, ಜೈನ್ ಮಹಾಸಭಾ, ರೀಡ್ ಅಂಡ್ ಟೈಲರ್ ಉದ್ಯೋಗಿಗಳ ವೇದಿಕೆ, ವಿನಾಯಕ ಮಿತ್ರ ಮಂಡಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬಿಸಿಬೇಳೆ ಬಾತ್, ವಾಂಗಿ ಬಾತ್, ಚಿತ್ರಾನ್ನ, ಮೊಸ ರನ್ನ, ಪುಳಿಯೋಗರೆ ಸಹಿತ ನೀರು ಮಜ್ಜಿಗೆ, ಪಾನಕ, ಕೋಸಂಬರಿ, ಹಣ್ಣು ಗಳು, ಸಿಹಿ ತಿಂಡಿಗಳು, ಚಾಕೊಲೇಟ್, ಐಸ್‌ಕ್ರೀಮ್ ಗಳನ್ನು ರಥಬೀದಿಯ ನ್ನೊಳಗೊಂಡಂತೆ ನಗರದ ವಿವಿಧೆಡೆ ವಿತರಿಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿವೆ.

” ನಮ್ಮ ಸಂಸ್ಥೆ ಬೆಂಗಳೂರಲ್ಲಿ ಸಮಾಜ ಮುಖಿ ಕಾರ್ಯಕ್ರಮ ಗಳನ್ನು ನಡೆಸುವ ಸೇವಾ ಸಂಸ್ಥೆಯಾಗಿದ್ದು, ನಂಜನಗೂಡು ಜಾತ್ರೆಯಲ್ಲಿ ಪ್ರತಿ ವರ್ಷ ಹಸಿದು ಬಂದವರಿಗೆಲ್ಲ ಭೋಜನ ಹಾಗೂ ಜಾತ್ರೆಗೆ ಆಗಮಿಸಿದವರಿಗೆ ಸಿಹಿ ವಿತರಿಸುವ ಕೈಂಕರ‍್ಯವನ್ನು ಕಳೆದ ೪೦ ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಮುಂದೆಯೂ ನಡೆಸುತ್ತದೆ.”

-ಎನ್.ವಿ.ಚಿದಂಬರ್, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು

ಸಿಂಗಾರಗೊಂಡ ರಥಗಳು: 

ಶ್ರೀಕಂಠೇಶ್ವರ ಸೇರಿದಂತೆ ತಾಯಿ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಹಾಗೂ ಚಂಡಿಕೇಶ್ವರರ ರಥಾರೋಹಣಕ್ಕೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಅವರ ನೇತೃತ್ವದಲ್ಲಿ ಪಂಚಮಹಾರಥಗಳು ಸಿಂಗಾರಗೊಂಡಿವೆ

 

 

ಆಂದೋಲನ ಡೆಸ್ಕ್

Recent Posts

ಪಶ್ಚಿಮ ಏಷ್ಯಾದಲ್ಲಿ ಹೆಚ್ಚಾದ ಉದ್ವಿಗ್ನತೆ: ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಿಷ್ಟು.!

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಭಾರತೀಯ ನಾಗರಿಕರು ಒಗ್ಗಟ್ಟಾಗಿರುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ನರೇಂದ್ರ…

1 min ago

ಆರೋಗ್ಯ ಕೇಂದ್ರದ ಮುಂಭಾಗವೇ ವಾಹನಗಳ ಪಾರ್ಕಿಂಗ್:‌ ಸಾರ್ವಜನಿಕರಿಗೆ ಕಿರಿಕಿರಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ…

13 mins ago

ಹನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ನಿವಾಸಿಗಳಿಂದ ಪ್ರತಿಭಟನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೋವಿ ಸಮುದಾಯದ ಕಾಲೋನಿಗೆ…

20 mins ago

ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು: ಸಿಎಂ ಸಿದ್ದರಾಮಯ್ಯ

ಮೈಸೂರು: ನ್ಯಾಯ ವಿತರಣೆಯಲ್ಲಿ ಪೊಲೀಸರು ರಾಜಿಯಾಗಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರು ಘಟಕದ 46ನೇ ತಂಡದ ಸಿವಿಲ್‌ ಪೊಲೀಸ್‌…

53 mins ago

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ

ಅಮೇರಿಕಾದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧವೇ ಭುಗಿಲೆದ್ದ ಆಕ್ರೋಶ 80 ಲಕ್ಷ ಜನರಿಂದ ನೋ ಕಿಂಗ್ಸ್‌ ಚಳುವಳಿ ಟ್ರಂಪ್‌ ನೀತಿ ವಿರೋಧಿಸಿ…

1 hour ago

ರಸ್ತೆ ಇಕ್ಕೆಲಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

೫೦ ಜೆಸಿಬಿ, ೩೦ ಟಿಪ್ಪರ್‌ಗಳು, ೮ ಟ್ರಾಕ್ಟರ್‌ಗಳು, ೫೦೦ ಮಂದಿ ಪೌರಕಾರ್ಮಿಕರು ಭಾಗಿ ಮೈಸೂರು: ನಗರದ ಹೊರ ವರ್ತುಲ ರಸ್ತೆಯಲ್ಲಿ…

2 hours ago