ಮೈಸೂರು

ಪಿಎಚ್‌ಡಿ ಮಾರ್ಗದರ್ಶಕರ ಸಂಖ್ಯೆ ಹೆಚ್ಚಳಕ್ಕಿಲ್ಲ ಮೈಸೂರು ವಿ.ವಿಯ ಒಪ್ಪಿಗೆ

ಮೈಸೂರು : ಪಿಎಚ್.ಡಿ ಪದವಿ ಪ್ರವೇಶ ಪಡೆಯುವ ಆಕಾಂಕ್ಷಿಗಳಿಗೆ ಮಾರ್ಗದರ್ಶಕರ ಕೊರತೆಯಾಗಿದ್ದು, ಮಾರ್ಗದರ್ಶಕರಿಗಿರುವ ಸೀಮಿತಿ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಗೆ ಒಪ್ಪಿಗೆ ನೀಡಲು ಮೈಸೂರು ವಿಶ್ವವಿದ್ಯಾನಿಲಯ ಸಮ್ಮತಿಸಿಲ್ಲ.

ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಮಂಗಳವಾರ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಚಂದ್ರಶೇಖರ್ ಶೆಟ್ಟಿ ನೇತೃತ್ವದ ಸಮಿತಿ ವರದಿಯನ್ನು ಸಭೆಗೆ ಮಂಡಿಸಲಾಯಿತಾದರೂ ಯಾವುದೇ ಚರ್ಚೆ ಕೈಗೆತ್ತಿಕೊಳ್ಳಲಿಲ್ಲ. ಇದರಿಂದಾಗಿ ಹಲವು ದಿನಗಳಿಂದ ಮಾರ್ಗದರ್ಶಕರಿಗೆ ಇರುವ ನಿಗದಿತ ಮಂದಿಗೆ ಸೀಮಿತಗೊಳಿಸಿರುವ ಮಿತಿಯನ್ನು ಹೆಚ್ಚಿಸಬೇಕೆಂಬ ಪಿಎಚ್.ಡಿ ಪದವಿ ಆಕಾಂಕ್ಷಿಗಳ ಬೇಡಿಕೆಗೆ ತಣ್ಣೀರೆರಚಿದೆ.

ಪ್ರೊ.ಚಂದ್ರಶೇಖರ್ ಶೇಟ್ಟಿ ಸಮಿತಿಯ ಶಿಫರಸ್ಸಿನ ವಿಚಾರಗಳನ್ನು ಮುಂದಿನ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ಮಾಡಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲು ಒಪ್ಪಿಗೆ ಸೂಚಿಸಲಾಯಿತು. ಮಾನಸಗಂಗೋತ್ರಿಯ ಜೈವಿಕ ತಂತ್ರಜ್ಞಾನ, ಸಂಖ್ಯಾಶಾಸ, ಭೂಗೋಳಶಾಸ, ಇತಿಹಾಸ ಅಧ್ಯಯನ, ಸಾರ್ವಜನಿಕ ಆಡಳಿತ ವಿಭಾಗಗಳ ಅಧ್ಯಕ್ಷರ ನೇಮಕಕ್ಕೆ ಒಪ್ಪಿಗೆ ನೀಡಲಾಯಿತು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಥಾಯಿ ಸಮಿತಿ ಶಿಫರಸ್ಸನ್ನು ಒಪ್ಪಿಕೊಂಡ ಸಭೆಯು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಹೆಸರಿನಲ್ಲಿ ದತ್ತಿ ಸ್ಥಾಪನೆ, ಸಿ.ಎಂ.ನಾರಾಯಣಸ್ವಾಮಿ ಮತ್ತು ಬಿ.ಜೆ.ಶಾಂತಕುಮಾರಿ ದತ್ತಿ ಸ್ಥಾಪನೆಗೆ ಒಪ್ಪಿಗೆ ನೀಡಲಾಯಿತು.

ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ಮೈಸೂರು ವಿ.ವಿಯಿಂದ ಚಂದ್ರಶೇಖರ್ ಅವರನ್ನು ನಾಮ ನಿರ್ದೇಶನ ಮಾಡಲು ಸಮ್ಮತಿಸಲಾಯಿತು. ಮೈಸೂರು ವಿ.ವಿಯ ಡಾ.ಎಚ್. ರಾಜಶೇಖರ್ ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಇಲಾಖಾ ವಿಚಾರಣೆ ನಡೆಸಲು ಒಪ್ಪಿಗೆ ನೀಡಲಾಯಿತು. ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಶಾಲಿನಿ ಆರ್.ಅರಸು ಬೆಂಗಳೂರಿನ ವಿಜಿಎಸ್‌ಟಿ ವತಿಯಿಂದ ಸಂಶೋಧನೆ ನಡೆಸಲು ಪಡೆದಿದ್ದ ಸಂಶೋಧನಾ ಅನುದಾನಕ್ಕೆ ಬಡ್ಡಿ ಸಮೇತ ಹಿಂತಿರುಗಿಸುವುದಕ್ಕೆ ನೋಟಿಸ್ ನೀಡಲು ಸೂಚಿಸಲಾಯಿತು.

ಮಾನಸಗಂಗೋತ್ರಿಯ ಎಂಬಿಎ ವಿಭಾಗದಲ್ಲಿ ಇರುವ 180 ಸೀಟುಗಳಲ್ಲಿ 60 ಸೀಟುಗಳನ್ನು ಸ್ವಯಂ ಹಣಕಾಸು ನಿಧಿಯಡಿ ಪ್ರವೇಶಾತಿಮಾಡಿಕೊಳ್ಳಲು ತೀರ್ಮಾನಿಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುಮೋದನೆ ದೊರೆತ ಮೇಲೆ 60 ಸೀಟುಗಳನ್ನು ಸ್ವಯಂ ಹಣಕಾಸು ನಿಧಿಯಡಿ ಪ್ರವೇಶ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. 2025-26ನೇ ಸಾಲಿನ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೋರ್ಸ್ ತೆರೆಯಲು ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಕುಲಸಚಿವರಾದ ಎಂ.ಕೆ.ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜು, ಸಿಂಡಿಕೇಟ್ ಸದಸ್ಯರಾದ ಕ್ಯಾತನಹಳ್ಳಿ ನಾಗರಾಜು, ಡಾ.ನಟರಾಜು ಶಿವಣ್ಣ, ಗೋಕುಲ್ ಗೋವರ್ಧನ್, ಡಾ.ಶಿಲ್ಪಾ, ಪ್ರೊ.ಮುಸ್ತಫ, ಚಂದ್ರಶೇಖರ್, ಶಂಕರ್ ಮತ್ತಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ:  ಗೋಪಾಲಸ್ವಾಮಿ ಬೆಟ್ಟದ ಬಸ್ ಪ್ರಯಾಣ ದರ ಇಳಿಕೆ ಮಾಡಿ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…

1 min ago

ಓದುಗರ ಪತ್ರ: ಮಸೂದೆ ಅಂಗೀಕಾರಕ್ಕಷ್ಟೇ ವಿಧಾನಸಭೆ ಅಧಿವೇಶನ ಸೀಮಿತವಾಗದಿರಲಿ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…

4 mins ago

ಥಿಯೇಟರ್‌ಗಳಲ್ಲಿ ಡೆವಿಲ್‌ ಅಬ್ಬರ: ದರ್ಶನ್‌ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…

6 mins ago

ಚಿರತೆಗಳು ಕಾಣಿಸಿಕೊಳ್ಳುವಿಕೆ: ಮೈಸೂರಿನ ಅಭಿವೃದ್ಧಿಯ ಮತ್ತೊಂದು ಮುಖ

ಮೈಸೂರು ನಗರವು ತನ್ನ ಸಾಂಸ್ಕೃತಿಕ ಪರಂಪರೆ, ಹಸಿರು ಪರಿಸರ ಮತ್ತು ಸುಸ್ಥಿರ ಜೀವನಶೈಲಿಗಾಗಿ ಬಹಳ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ…

39 mins ago

ಮಾನವ ಹಕ್ಕುಗಳನ್ನು ಪೋಷಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ

ಯಾವುದೋ ಒಂದು ಹಕ್ಕು ಹೆಚ್ಚಿನ ಆದ್ಯತೆ ಹೊಂದಲು ಸಾಧ್ಯವೇ? ಕೆಲವು ಹಕ್ಕುಗಳು ಹೆಚ್ಚು ಮುಖ್ಯವಾಗುವವೇ? ಒಂದು ರೀತಿಯ ಹಕ್ಕಿನಿಂದ ಇನ್ನೊಂದು…

1 hour ago

ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಕಿರಿಕಿರಿ

ಮನೆ ಮುಂಭಾಗ ತ್ಯಾಜ್ಯ ನೀರು ನಿಂತು ಗಬ್ಬುನಾರುತ್ತಿರುವ ಚರಂಡಿ ; ಸಾಂಕ್ರಾಮಿಕ ರೋಗ ಹರಡುವ ಭೀತಿ, ಚುನಾವಣೆ ಬಹಿಷ್ಕಾರಕ್ಕೆ ಸ್ಥಳೀಯರ…

2 hours ago