ಮೈಸೂರು: ಮೌಲ್ಯಮಾಪಕರು ಮಾಡಿದ ಯಡವಟ್ಟಿನಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವಿದ್ಯಾರ್ಥಿನಿಯೊಬ್ಬರು ಸಂಕಷ್ಟದಲ್ಲಿ ಸಿಲುಕಿರುವ ಘಟನೆ ಜಿಲ್ಲೆಯ ತಿ. ನರಸೀಪುರ ತಾಲೂಕಿನ ಕೊಡಗಳ್ಳಿ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ನಗರದಲ್ಲಿ ಶುಕ್ರವಾರ(ಜೂನ್.7) ಸುದ್ದಿಗೋಷ್ಠಿ ನಡೆಸಿ ವಿದ್ಯಾರ್ಥಿನಿ ಕೆ.ಎಸ್.ಶ್ರಾವ್ಯ, ಪೋಷಕರಾದ ಕೆ.ಎನ್.ಶ್ರೀನಿವಾಸ್ ಮತ್ತು ಸುಮಾ ಶ್ರಿನಿವಾಸ ಮಾತನಾಡಿದರು.
ಕಾವ್ಯ ಪೋಷಕರಾದ ಶ್ರೀನಿವಾಸ ಮಾತನಾಡಿ, ಮಂಡ್ಯ ಜಿಲ್ಲೆಯ ಅರೇಕೆರೆಯ ಜೀವೋದಯ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ತಮ್ಮ ಮಗಳು ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆ ವೇಳೆ ಉತ್ತಮ ಅಂಕ ಗಳಿಸುವ ಭರವಸೆ ಇದ್ದ ವಿದ್ಯಾರ್ಥಿಗೆ ಉತ್ತೀರ್ಣಳಾದ ಬಳಿಕ ಬಂದ ಅಂಕಗಳಲ್ಲಿ ಅಸಮಾಧಾನ ಇತ್ತು. ಇದರಿಂದಾಗಿ ಮರು ಮೌಲ್ಯಮಾಪನಕ್ಕೆ ಹಾಕಲಾಯಿತು. ಮರು ಮೌಲ್ಯಮಾಪನ ನಂತರ ವಿದ್ಯಾರ್ಥಿಗೆ 545 ಅಂಕ ಪಡೆದಿದ್ದ ವಿದ್ಯಾರ್ಥಿನಿ, ಮರು ಮೌಲ್ಯ ಮಾಪನದಲ್ಲಿ 606 ಅಂಕ ಸಿಕ್ಕಿತು.
ಮೊದಲ ಫಲಿತಾಂಶದಲ್ಲಿ ಶೇ.87 ಫಲಿತಾಂಶ ಬಂದಿದ್ದರೆ, ಮರು ಮೌಲ್ಯಮಾಪನದ ನಂತರ ಶೇ.97ರಷ್ಟು ಫಲಿತಾಂಶ ದೊರೆತಿದೆ. ಈ ಮೌಲ್ಯಮಾಪನದಲ್ಲಿ ಅಂಕಗಳು ತಪ್ಪಾಗಿ ಬರಲು ಮೌಲ್ಯಮಾಪನ ಸಿಬ್ಬಂದಿಯ ಯಡವಟ್ಟುಗಳೇ ಕಾರಣ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ನಮ್ಮ ಮಗಳು ಇಚ್ಛೆಪಟ್ಟ ಕಾಲೇಜಿನಲ್ಲಿ ಎಂದು ಒತ್ತಾಯಿಸಿದರು.
ಮೌಲ್ಯ ಮಾಪಕರು ಮಾಡಿದ ಎಡವಟ್ಟಿನಿಂದಾಗಿ ನಮ್ಮ ಮಗಳ ಭವಿಷ್ಯಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿನಿ ತಂದೆ ಅಳಲು ತೋಡಿಕೊಂಡಿದ್ದಾರೆ.
ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯದ ಚಿರಕನಹಳ್ಳಿ ಗ್ರಾಮದಲ್ಲಿ ಪೋತರಾಜು ಎಂಬುವವರ ಜಮೀನಿನಲ್ಲಿ ಅರಣ್ಯ…
ಮುಂದುವರಿದ ರಕ್ಷಣಾ ಕಾರ್ಯಾಚರಣೆ ವೆನಿಜುವೆಲಾ : ವೆನಿಜುವೆಲಾದ ಉತ್ತರ ಭಾಗದಲ್ಲಿ ಬುಧವಾರ ಸಂಜೆ ಸಂಭವಿಸಿದ ಸತತ ಎರಡು ಪ್ರಬಲ ಭೂಕಂಪಗಳ…
ಧರ್ಮಸ್ಥಳ : ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೊತೆಗಿನ ಬಾಂಧವ್ಯದ ಬಗ್ಗೆ…
‘ವೆನ್ ಯು ವಾಂಟ್ ಟು ಡು ಸಮ್‌ತಿಂಗ್ ಡು ಇಟ್; ಆರ್ ಎಲ್ಸ್ ವಿಟ್ ನೆಸ್‌ಇಟ್’ ಇದು ಅತ್ಯಂತ ಪ್ರಚಲಿತವಿರುವ…
ಮಳವಳ್ಳಿ: ಪೂರಿಗಾಲಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆ ಬದಿಯ ಕಟ್ಟಡ ನೆಲಸಮ ಮಾಡುವಾಗ ಕಟ್ಟಡದ ಗೋಡೆ ಹಿಟಾಚಿ…