ಮೈಸೂರು

ಪ್ಲಾಸ್ಟಿಕ್‌ ಸಹಿತ ಬಿಸಾಡಿದ ಪ್ರಸಾದ ತಿಂದು ಹರಕೆಯ ಗೂಳಿ ಸಾವು

ನಂಜನಗೂಡು : ನಂಜುಡಪ್ಪ ಗೂಳಿ ಅಂತಲೇ ಪ್ರಸಿದ್ದಿಯಾಗಿದ್ದ ಹರಕೆಯ ಗೂಳಿಯೊಂದು ಸಾವನ್ನಪ್ಪಿದೆ.

ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸುತ್ತಮುತ್ತ ಇದ್ದ ಈ ಹರಕೆಯ ಗೂಳಿ ಪ್ಲಾಸ್ಟಿಕ್ ಸಹಿತ ಬಿಸಾಡಿದ ಪ್ರಸಾದ ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಕ್ತವಾಗಿದೆ.

ನಂಜುಡಪ್ಪ ಗೂಳಿಯು ಪ್ರತಿ ನಿತ್ಯ ಅಂಗಡಿ ಮನೆಗಳಿಗೆ ತೆರಳುತ್ತಿತ್ತು. ಸಾರ್ವಜನಿಕರು ಗೂಳಿಗೆ ಹಣ್ಣು, ಬೆಲ್ಲ, ಕಲಗಚ್ಚು, ನೀರು, ತರಕಾರಿ ನೀಡುತ್ತಿದ್ದರು. ಆದರೆ, ಇದೀಗ ಸಾವನ್ನಪ್ಪಿರುವ ಗೂಳಿಗೆ ಸ್ಥಳೀಯರು ಮರುಗಿದ್ದಾರೆ.

ನಂಜನಗೂಡು ಯುವ ಬ್ರಿಗೇಡ್ ಹಾಗೂ ಸಾರ್ವಜನಿಕರಿಂದ ಕಪಿಲಾ ನದಿ ತೀರದಲ್ಲಿ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ದೇವಾಲಯಕ್ಕೆ ಬರುವ ಜನರು ಪ್ಲಾಸ್ಟಿಕ್ ಬಳಸದಂತೆ  ಮನವಿ ಮಾಡಿದರು.

ಇದನ್ನೂ ಓದಿ:- ಮೈಸೂರು ವಿ.ವಿ | ಅಪ್ರಕಟಿತ ಹಸ್ತಪ್ರತಿ ಕೃತಿ ಕುರಿತು ಒಡಂಬಡಿಕೆ

ಆಂದೋಲನ ಡೆಸ್ಕ್

Recent Posts

ಕ್ರಿಸ್‌ಮಸ್ ಹಬ್ಬಕ್ಕೆ ಅರಮನೆ ನಗರಿ ಸಜ್ಜು

ಮೈಸೂರು: ಕ್ರಿಸ್‌ಮಸ್ ಆಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೆ, ಚರ್ಚ್‌ಗಳ ಅಂಗಳವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವ ಕಾರ್ಯ…

4 mins ago

ಡಿಎಚ್‌ಒ ವರ್ಗಾವಣೆಯಲ್ಲಿ ಎಡವಟ್ಟು

ಕೆ.ಬಿ.ರಮೇಶನಾಯಕ ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ…

7 mins ago

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

12 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

12 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

13 hours ago