ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಮಹಿಳಾ ನಿರ್ದೇಶಕಿಯಾಗಿ ಭಾರತೀಯ ಅರಣ್ಯ ಸೇವೆ (I F S) ಅಧಿಕಾರಿ ಪಿ.ಎ ಸೀಮಾ ಅಧಿಕಾರಿ ಸ್ವೀಕರಿಸಿದ್ದಾರೆ.
ಮೂಲತ: ಮಡಿಕೇರಿಯ ನಾಪೋಕ್ಲುವಿನ ಪಾಡ್ಯಮಂಡ ಗ್ರಾಮದವರಾದ ಪಿ.ಎ ಸೀಮಾ ರವರು ಈ ಹುದ್ದೆ ಅಲಂಕರಿಸುವ ಮೂಲಕ ಕರ್ನಾಟಕದ ಮೊಟ್ಟ ಮೊದಲ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮಹಿಳೆ ನಿರ್ದೇಶಕಿ ಎಂದೆನಿಸಿಕೊಂಡಿದ್ದಾರೆ.
ಸೀಮಾ ಅವರು ಈ ಹಿಂದೆ ಹುಣಸೂರು ವಿಭಾಗದ ಡಿ.ಸಿ.ಎಫ್ ಆಗಿ ಸೇವೆ ಸಲಿಸಿದ್ದರು. 2017ರ ಬ್ಯಾಚ್ ಅಧಿಕಾರಿಯಾದ ಅವರು, ಮೈಸೂರು, ಮಂಡ್ಯ, ಹುಣಸೂರು, ಮಡಿಕೇರಿಯಲ್ಲಿ ಡಿ ಸಿ ಎಫ್ ಆಗಿ ಸೇವೆ ಸಲ್ಲಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಆನೆಗಳ ಕಾರ್ಯಪಡೆಯ ಹೆಚ್ಚುವರಿ ಡಿ.ಸಿ.ಎಫ್ ಆಗಿ ಕಾರ್ಯನಿರ್ವಹಿಸಿ ಹುಣಸೂರು ಹಾಗೂ ಕೆ ಆರ್ ನಗರದ ವಿಭಾಗದಲ್ಲಿ ಮಾನವ ಹಾಗೂ ಆನೆಗಳ ನಡುವೆ ಸಂಘರ್ಷವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ಪ್ರಶಂಸೆಗೆ ಒಳಗಾಗಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಕೇರಳ ಕರ್ನಾಟಕ ಭಾಗ ಹಾಗೂ ಕೊಡಗು ಮತ್ತು ಮೈಸೂರು ಗಡಿ ಭಾಗವನ್ನು ಕೂಡ ಹೊಂದಿದ್ದು ಇಲ್ಲಿ ನಿರಂತರ ಬೇಟೆಯಾಡುವುದು ಹಾಗೂ ಆನೆ ಮಾನವ ನಡುವೆ ಸಂಘರ್ಷವನ್ನು ತಡೆಗಟ್ಟಲು ಉತ್ತಮ ಅಧಿಕಾರಿಯ ನಿರೀಕ್ಷೆಯಲ್ಲಿದ್ದ ಸ್ಥಳೀಯರಿಗೆ ಪಿ.ಎ ಸೀಮಾ ರವರ ಆಯ್ಕೆ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…