ಮೈಸೂರು: ಪತ್ನಿ ಜೊತೆಯಲ್ಲಿದ್ದರೂ ಕೂಡ ತನಗೆ ವಿಚ್ಛೇದನವಾಗಿದೆ ಎಂದು ನಂಬಿಸಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದಲ್ಲದೆ, ಆಕೆಯಿಂದ 50 ಲಕ್ಷ ರೂ. ಹಣವನ್ನು ಪಡೆದು ವಂಚಿಸಿರುವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ಕೇರಳರ ತ್ರಿಶೂರ್ ನಿವಾಸಿ ಶರತ್‌ರಾಮ್ ಎಂಬವರ ವಿರುದ್ಧ ಕುವೆಂಪುನಗರದಲ್ಲಿ ವಾಸಿಸುತ್ತಿರುವ ಎ.ಎಸ್.ರೋಜಾ ಹಾಗೂ ಕಮಲಮ್ಮ ಎಂಬವರು ದೂರು ದಾಖಲಿಸಿದ್ದಾರೆ.
ಕುವೆಂಪುನಗರದಲ್ಲಿ ಮಹಿಳಾ ಪಿಜಿ ನಡೆಸುತ್ತಿರುವ ರೋಜ ಅವರು 2013 ರಲ್ಲಿ ವಿವಾಹವಾಗಿದ್ದರು. ಕಾರಣಾಂತರಗಳಿಂದ ಪತಿಗೆ ವಿಚ್ಛೇದನ ನೀಡಿದ್ದರು. ನಂತರ 2022 ರಲ್ಲಿ ಅವರಿಗೆ ಡಿವೋರ್ಸ್ ಮ್ಯಾಟ್ರಮೋನಿ ಮೂಲಕ ಶರತ್ ರಾಮ್ ಪರಿಚಯವಾಗಿದೆ.
ನಂತರ ಆತ ನಾನು ಪತ್ನಿಯಿಂದ ವಿಚ್ಚೆದನ ಪಡೆದಿದ್ದೇನೆ ಎಂದು ನಕಲಿ ದಾಖಲೆಗಳನ್ನು ಆಕೆಗೆ ತೋರಿಸಿ 2023ರಲ್ಲಿ ರೋಜಾ ಅವರ ಕುಟುಂಬಸ್ಥರು ಹಾಗೂ ಶರತ್‌ರಾಮ್ ಅವರ ಸಂಬಂಽಕರ ಸಮ್ಮುಖದಲ್ಲಿ ಬೆಂಗಳೂರಿನ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾರೆ.
ನಂತರ ಆತ ಹಂತ ಹಂತವಾಗಿ ರೋಜಾ ಅವರಿಂದ 11 ಲಕ್ಷ ರೂ. ಹಣವನ್ನು ಪಡೆದಿದ್ದಾನೆ. ಜೊತೆಗೆ ಅವರ ತಾಯಿ, ತಂದೆ ಹಾಗೂ ರೋಜಾ ಅವರ ಖಾತೆಯಿಂದ ೩೯ ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ಆತ ಹರಿಲಾ ಎಂಬವರನ್ನು ವಿವಾಹವಾಗಿ ಆತನಿಗೆ ಮೂವರು ಮಕ್ಕಳಿದ್ದಾರೆ ಎಂಬುದು ರೋಜಾ ಅವರಿಗೆ ಗೊತ್ತಾಗಿದೆ. ಅಲ್ಲದೆ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಆತನ ವರ್ತನೆಯಿಂದ ಬೇಸತ್ತ ಆಕೆ ಶರತ್‌ರಾಮ್ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಕೊಲೆ ಬೆದರಿಕೆ ದೂರು ದಾಖಲಿಸಿದ್ದಾರೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಕೈಗೊಂಡಿದ್ದು, ಕೆಮಿಕಲ್ ಘಟಕದಲ್ಲಿ ಲೇಬಲ್ ಇಲ್ಲದ ಖಾಲಿ ಬಾಟಲ್‌ಗಳನ್ನು…
ಜಗಕೆ ಮಾದರಿ! ಭಲೆ ಭಲೇ ಅಂಕೇಗೌಡರೆ ಜಗಕೆ ಮಾದರಿ ನಿಮ್ಮ ಪುಸ್ತಕಪ್ರೀತಿ ಅರಿವಿನ ಆಕರಗಳು ಪುಸ್ತಕಗಳು! ದುಡಿದ ಲಕ್ಷಾಂತರ ಹಣವನು…
ಮೈಸೂರಿನ ವಿವೇಕಾನಂದ ನಗರದ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಪ್ರತಿಮೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಲಾಗಿದೆ. ಜ.೧೨ರಂದು ಸ್ವಾಮಿ ವಿವೇಕಾನಂದರ…
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದಲ್ಲಿರುವ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ (ಮಲ್ಲಯ್ಯನ ಬೆಟ್ಟ) ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ…
ಚಾಮರಾಜನಗರದ, ಸಿಂಹ ಚಲನಚಿತ್ರಮಂದಿರದ ಎದುರಿರುವ ಎಲ್‌ಐಸಿ ಕಚೇರಿಯ ಮುಂಭಾಗದಲ್ಲಿ ನಂಜನಗೂಡು-ಮೈಸೂರು ಸೇರಿದಂತೆ ವಿವಿಧ ಮಾರ್ಗಗಳ ಬಸ್‌ಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ…
ಚಾಮರಾಜನಗರ ಜಿಲ್ಲೆ ಮುಕ್ಕಡಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಮಾಯಮ್ಮ ದೇವಿ ರಥೋತ್ಸವದ ವೇಳೆ ರಥದ ಚಕ್ರದ ದಂಡ ಮುರಿದ ಪರಿಣಾಮ…