ಮೈಸೂರು

ಮೈಸೂರು ವಿವಿ ಘಟಿಕೋತ್ಸವ | ವಿದ್ಯಾರ್ಥಿನಿಯರೇ ಪ್ರಾಬಲ್ಯ; ಚಿನ್ನದ ಹುಡುಗಿಯರ ಸಾಧನೆ

ಮೈಸೂರು: ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿ, ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆಯುವಲ್ಲಿ ವಿದ್ಯಾರ್ಥಿನಿಯರೇ ಪ್ರಾಬಲ್ಯ ಮೆರೆದಿದ್ದಾರೆ.

ಶನಿವಾರ ವಿಶ್ವವಿದ್ಯಾಲಯದ ಕ್ರಾಫರ್ಡ್‌ ಭವನದಲ್ಲಿ ನಡೆದ 105ನೇ ಘಟಿಕೋತ್ಸವದಲ್ಲಿ ಮಹಿಳಾ ಮೇಲುಗೈ ಕಂಡು ಬಂತು. ಪದವಿ ಗಳಿಸಿದ 31,689 ಅಭ್ಯರ್ಥಿಗಳ ಪೈಕಿ 20,222 ವಿದ್ಯಾರ್ಥಿನಿಯರು. 304 ಪಿಎಚ್‌ಡಿ ಪದವಿದರರಲ್ಲಿ 139 ಮಹಿಳೆಯರು. ಒಟ್ಟು 413 ಚಿನ್ನದ ಪದಕದಲ್ಲಿ 139 ವಿದ್ಯಾರ್ಥಿಗಳು ಹೆಚ್ಚಿನ ಪಾಲು ತಮ್ಮದಾಗಿಸಿಕೊಂಡರು.

ಚಿನ್ನದ ಹುಡುಗಿಯರು ಇವರು…

ಚಿನ್ನದ ಹುಡುಗಿ ಭೂಮಿಕ
ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮಾನಸಗಂಗೋತ್ರಿಯ ಎಂ.ಆರ್‌ ಭೂಮಿಕ  1 8ಚಿನ್ನದ ಪದಕ, 4 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಅಪ್ಪ ಅಮ್ಮ ಕನಸಿನಂತೆ ಕ್ರಾಫರ್ಡ್‌ ಭವನದಲ್ಲಿ ಸನ್ಮಾನಿತೆಯಾಗಿದ್ದೇನೆ. ಆದರೆ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅಪ್ಪ ಈಗ ಇಲ್ಲ ಎಂದು ಭೂಮಿಕ ಹೇಳಿದರು. ಮದ್ರಾಸ್‌ ಐಐಟಿಯಲ್ಲಿ ಪಿಎಚ್‌ಡಿ ಮಾಡಬೇಕು, ಐಎಎಸ್‌ ಅಧಿಕಾರಿ ಆಗಬೇಕು ಎಂಬ ಆಸೆ ಇದು ಎಂದು ತಮ್ಮ ಕನಸನ್ನು ಹಂಚಿಕೊಂಡರು.

ಮಂಗಳೂರಿನ ಕಾವ್ಯಶ್ರೀ

ಅರ್ಬಲ್‌ ಅಂಡ್‌ ರೀಜನಲ್‌ ಪ್ಲಾನಿಂಗ್‌ ವಿಷಯದಲ್ಲಿ 16 ಚಿನ್ನದ ಪದಕ ಪಡೆದ ಮಂಗಳೂರಿನ ಯು.ಎ ಕಾವ್ಯಶ್ರೀ ಪದವಿಯಲ್ಲೂ ಚಿನ್ನದ ಪದಕ ಬೇಟೆಯಾಡಿದ್ದರು.

ವಿವಿನ ಸಾಧನೆ

ಎಂಎಸ್ಸಿ ಸಸ್ಯಶಾಸ್ತ್ರದಲ್ಲಿ 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ತಮ್ಮದಾಗಿಸಿಕೊಂಡ ವಿವಿನ ಸ್ವೀಡಲ್‌ ಥೋರಸ್‌ ಕೊಡಗಿನ ಗೋಣಿಕೊಪ್ಪದವರು. ಪಿಎಚ್‌ಡಿ ಪದವಿ ಪಡೆಯಬೇಕು. ಶಿಕ್ಷಕಿಯಾಗಬೇಕು ಎಂದು ತನ್ನ ಕನಸಿನ ಆಸೆ ಬಿಚ್ಚಿಟ್ಟರು.

ಕಾಸರಗೋಡಿನ ಸೀಮಾ
ಕೇರಳದ ಕಾಸರಗೋಡಿನ ಸೀಮಾ ಹೆಗೆಡೆ ಸಂಸ್ಕೃತ ವಿಷಯದಲ್ಲಿ 13 ಚಿನ್ನದ ಪದಕ ಮತ್ತು 1 ನಗದು ಬಹುಮಾನ ಗಳಿಸಿದ್ದಾರೆ. ಕೃಷಿಕ ಕುಟುಂಬದಲ್ಲಿ ಜನಿಸಿದ ಈಕೆ ಭಗವದ್ಗೀತೆಯ ಹಾಡುಗಾರ್ತಿಯೂ ಹೌದು. ಶಿಕ್ಷಕಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ ಎಂದು ಹೇಳಿದರು.

ಕುಣಿಗಲ್‌ ಕಾವ್ಯ
ಎಚ್‌.ಡಿ ಕೋಟೆಯ ಕುಣಿಗಲ್‌ ಗ್ರಾಮದ ಕೊಲಿ ಕೆಲಸಗಾರ ಚಿಕ್ಕನಾಯಕ-ದೇವಾಲಮ್ಮ ಪುತ್ರಿ ಸಿ.ಕಾವ್ಯ ಎಂ.ಎ ಕನ್ನಡದಲ್ಲಿ 11 ಪದಕ ಹಾಗೂ 5 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.

 

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಕಾರು ಅಪಘಾತ : ಕಾರಿನಲ್ಲಿ‌10ಕ್ಕೂ ಹೆಚ್ಚು ಕರುಗಳು ಪತ್ತೆ

ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…

1 hour ago

ಮದ್ದೂರು |‌ ದೇವಾಲಯಗಳಲ್ಲಿ ಸರಣಿ ಕಳ್ಳತನ

ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…

4 hours ago

ಎಚ್ಚೆತ್ತ ಪೊಲೀಸರು : ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ,ಪರಿಶೀಲನೆ

ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…

6 hours ago

ರಾಜೀವ್‌ಗೌಡಗೆ ಜಾಮೀನು : ಪಟಾಕಿ ಸಿಡಿಸಿ ಸಂಭ್ರಮಿಸದಂತೆ ಕೋರ್ಟ್‌ ತಾಕೀತು

ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…

6 hours ago

ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ

ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…

6 hours ago

ಸಿಎಂ,ಡಿಸಿಎಂ ವಿರುದ್ಧ ಮಾನಹಾನಿಕ ಪೋಸ್ಟ್‌ : ಬಿಜೆಪಿ ವಿರುದ್ಧ ದೂರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…

6 hours ago