ಕಳೆದ ಬಾರಿಗಿಂತ 4 ಕ್ಷೇತ್ರ ಹೆಚ್ಚಳ, ನಂಜನಗೂಡು ತಾಲ್ಲೂಕಿನಲ್ಲಿ 9 ಕ್ಷೇತ್ರಗಳು
ಮೈಸೂರು: ಅವಧಿ ಮುಗಿದು ವರ್ಷವೇ ಕಳೆದರೂ ಜಿಪಂ, ತಾಪಂ ಚುನಾವಣೆ ನಡೆಸಲು ವಿಳಂಬ ನೀತಿ ಅನುಸರಿಸಿದ್ದ ರಾಜ್ಯಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದ ಬಳಿಕ ಕೊನೆಗೂ ಎಚ್ಚೆತ್ತ ಸರ್ಕಾರ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಜಿಪಂ ಸದಸ್ಯರ ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಮೈಸೂರು ಜಿಲ್ಲೆಯಲ್ಲಿ 46 ಏಕ ಸದಸ್ಯ ಸ್ಥಾನಗಳು ನಿಗದಿಯಾಗಿ ದೆ. ಕಳೆದ ಬಾರಿ 42 ಸದಸ್ಯ ಸ್ಥಾನಗಳನ್ನು ಹೊಂದಿದ್ದ ಮೈಸೂರು ಜಿಲ್ಲೆಯಲ್ಲಿ 46 ಕ್ಷೇತ್ರಗಳು ನಿಗದಿಯಾಗಿ ನಾಲ್ಕು ಹೆಚ್ಚುವರಿ ಕ್ಷೇತ್ರಗಳು ರಚನೆಯಾಗಿವೆ. ಸರಗೂರು-2, ಕೃಷ್ಣರಾಜ ನಗರ-3, ಸಾಲಿಗ್ರಾಮ-4, ಹೆಗ್ಗಡದೇವನ ಕೋಟೆ-4, ಪಿರಿಯಾಪಟ್ಟಣ-6, ಹುಣಸೂರು-6, ಮೈಸೂರು-6, ತಿ.ನರಸೀಪುರ-6, ನಂಜನಗೂಡು ತಾಲ್ಲೂಕಿನಲ್ಲಿ 9 ಸದಸ್ಯ ಸ್ಥಾನಗಳು ರಚನೆಯಾಗಿದ್ದು, ಸಣ್ಣಪುಟ್ಟ ವ್ಯತ್ಯಾಸ ಸರಿಪಡಿಸಿ ಅಧಿಸೂಚನೆ ಪ್ರಕಟಿಸಲಾಗಿದೆ.
ಮೈಸೂರು ತಾಲ್ಲೂಕು: ಇಲವಾಲ, ಜಯಪುರ, ಉದ್ಭೂರು, ವರುಣ, ಸಿದ್ದಲಿಂಗಪುರ, ಹಾರೋಹಳ್ಳಿ(ಮೆಲ್ಲಹಳ್ಳಿ).
ತಿ.ನರಸೀಪುರ ತಾಲ್ಲೂಕು: ತುರಗನೂರು, ಸೋಮನಾಥಪುರ, ಸೋಸಲೆ, ತಲಕಾಡು, ಮೂಗೂರು, ಗರ್ಗೇಶ್ವರಿ.
ನಂಜನಗೂಡು ತಾಲ್ಲೂಕು: ಹುರಾ, ಹುಲ್ಲಹಳ್ಳಿ, ಹೆಗ್ಗಡಹಳ್ಳಿ, ಕಳಲೆ, ಬದನವಾಳು, ದೊಡ್ಡ ಕವಲಂದೆ, ತಗಡೂರು, ಹದಿನಾರು, ತಾಂಡವಪುರ.
ಹುಣಸೂರು ತಾಲ್ಲೂಕು: ಗಾವಡಗೆರೆ, ಬನ್ನಿಕುಪ್ಪೆ, ಬಿಳಿಕೆರೆ, ಧರ್ಮಾಪುರ, ಹನಗೋಡು, ಚಿಲ್ಕುಂದ. ಕೆ.ಆರ್.ನಗರ ತಾಲ್ಲೂಕು: ಗಂಧನಹಳ್ಳಿ, ತಿಪ್ಪೂರು, ಹೆಬ್ಬಾಳು. ಸಾಲಿಗ್ರಾಮ ತಾಲ್ಲೂಕು: ತಂದ್ರೆ, ಮಿರ್ಲೆ, ಸಾಲಿಗ್ರಾಮ, ಹಳಯೂರು. ಪಿರಿಯಾಪಟ್ಟಣ ತಾಲ್ಲೂಕು: ಹಲಗನಹಳ್ಳಿ, ಬೆಟ್ಟದಪುರ, ರಾವಂದೂರು, ಕಂಪಲಾಪುರ, ಆಲನಹಳ್ಳಿ, ಕೊಪ್ಪ.
ಎಚ್.ಡಿ.ಕೋಟೆ ತಾಲ್ಲೂಕು: ಹಂಪಾಪುರ, ಹೈರಿಗೆ, ಅಣ್ಣೂರು, ಅಂತರಸಂತೆ.
ಸರಗೂರು ತಾಲ್ಲೂಕು: ಮುಳ್ಳೂರು, ಸರಗೂರು.
• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…
ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಹೆಸರಿನಲ್ಲಿ ವರ್ಷಕ್ಕೊಮ್ಮೆ ಬೆಳಗಾವಿಯಲ್ಲಿ ನಡೆಸುವ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ಹಿರಿಯರ ಮನೆ ಎಂದೇ ಕರೆಯಲಾಗುವ…
ಸಮ್ಮೇಳನ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ ಸಚಿವ ಸಿಆರ್‌ಎಸ್ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಥ್ ಬಿ.ಟಿ.ಮೋಹನ್‌ಕುಮಾರ್…
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…