ಮೈಸೂರು

ಯೋಗವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ವಿಸ್ತಾರಗೊಳಿಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ : ಶಾಸಕ ಶ್ರೀವತ್ಸ

ಮೈಸೂರು : ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತಾರಗೊಳಿಸಿದ ಕೀರ್ತಿ ಮೈಸೂರಿಗೆ ಸಲ್ಲುತ್ತದೆ ಎಂದು ಶಾಸಕ ಶ್ರೀವತ್ಸ ಹೇಳಿದರು.

ನಗರದ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿರುವ ಮೈಸೂರು ವಿಶ್ವ ರಾಜಧಾನಿ ಎಂದು ಗುರುತಿಸಲ್ಪಟ್ಟಿದೆ. ರಾಜಮನೆತನದ ಗತಕಾಲವನ್ನು ಹೊಂದಿರುವ ಮೈಸೂರು ನಗರವು ಯೋಗ ಅಭ್ಯಾಸವನ್ನು ಮಾಡಲು ಬರುವ ಯೋಗ ಆಸಕ್ತರಿಗೆ ಜನಪ್ರಿಯ ತಾಣವಾಗಿದೆ. ಯೋಗವನ್ನು ನಾನು ಅಭ್ಯಾಸ ವಾಡುತ್ತಿದ್ದೇನೆ ಮುಂದಿನ ದಸರಾದಲ್ಲಿ ಯೋಗ ಪ್ರದರ್ಶನ ಮಾಡಲು ಪ್ರಶಂಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಯೋಗ ದಸರ ಉಪ ಸಮಿತಿಯ ಅಧ್ಯಕ್ಷರಾದ ಎನ್.ನಾಗೇಶ್ ಮಾತನಾಡಿ, ದಸರಾ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ 2000 ಸ್ಪರ್ಧಾರ್ಥಿಗಳು ಭಾಗವಹಿಸಿದ್ದಾರೆ. ಯೋಗ ಮಾಡುವುದು ದೇಹದ ಕಸರತ್ತಿಗಲ್ಲ ಇದು ವಾನಸಿಕ ನೆಮ್ಮದಿ ಹಾಗೂ ಏಕಾಗ್ರತೆ , ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಯೋಗ ದಸರಾ ಸ್ಫರ್ಧೆ ಕೇವಲ ಸ್ಫರ್ಧೆಯಾಗಿರುವುದಿಲ್ಲ ಉತ್ತಮ ಆರೋಗ್ಯ ತಮತೋಲನ ಕಾಪಾಡಿಕೊಳ್ಳುವ ಸಂದೇಶವನ್ನು ಸಾರುತ್ತದೆ ಎಂದರು.

ಇದನ್ನು ಓದಿ : ದಸರಾ ಸಂಭ್ರಮಕ್ಕೆ ಹೊಸ ಮೆರಗು : ಸೆ.28,29 ರಂದು ಆಕರ್ಷಕ ಡ್ರೋನ್‌ ಪ್ರಾಯೋಗಿಕ ಪ್ರದರ್ಶನ

ಮುಂದಿನ ತಲೆವಾರುಗಳಿಗೆ ಯೋಗದ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಎಲ್ಲರೂ ಯೋಗ ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಸ್ಫರ್ಧೆಯಲ್ಲಿ 10 ರಿಂದ 12 ವರ್ಷದ ವಯೋಮಿತಿಯಲ್ಲಿ 385 ಸ್ಪರ್ಧಿಗಳು, 12 ರಿಂದ 14 ವರ್ಷದ ವಯೋಮಿತಿಯಲ್ಲಿ 361 ಸ್ಪರ್ಧಿಗಳು, 14 ರಿಂದ 18 ವರ್ಷದ ವಯೋಮಿತಿಯಲ್ಲಿ 219 ಸ್ಪರ್ಧಿಗಳು, 21 ರಿಂದ ವರ್ಷದ ವಯೋಮಿತಿಯಲ್ಲಿ 94 ಸ್ಪರ್ಧಿಗಳು, 35 ರಿಂದ 45 ವರ್ಷದ ವಯೋಮಿತಿಯಲ್ಲಿ 138 ಸ್ಪರ್ಧಿಗಳು, 45 ರಿಂದ 50 ವರ್ಷದ ವಯೋಮಿತಿಯಲ್ಲಿ 106 ಸ್ಪರ್ಧಿಗಳು, 55 ರಿಂದ 65 ವರ್ಷದ ವಯೋಮಿತಿಯಲ್ಲಿ 49 ಸ್ಪರ್ಧಿಗಳು, 65 ವರ್ಷ ಮೇಲ್ಪಟ್ಟವರು 42 ಸ್ಪರ್ಧಿಗಳು, ವಿಶೇಷ ಚೇತನ ವಿಭಾಗದಲ್ಲಿ 27 ಸ್ಪರ್ಧಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಿತಿಯ ಉಪವಿಶೇಷ ಅಧಿಕಾರಿ ಕೆ.ರವ್ಯಾ, ಸಮಿತಿಯ ಕಾರ್ಯಧ್ಯಾಕ್ಷರಾದ ನಿರೂಪ್ ವೆಸ್ಲಿ, ಸಹ ಕಾರ್ಯಧ್ಯಾಕ್ಷರಾದ ಶಿಲ್ಪ, ರೇಣುಕಾದೇವಿ, ಉಪ ಸಮಿತಿಯ ಉಪಾಧ್ಯಕ್ಷರುಗಳಾದ ಪ್ರಸಾದ್ ನಾಡನಹಳ್ಳಿ , ನಂಜುoಡಸ್ವಾಮಿ, ಕೆ.ಜಿ. ದೇವರಾಜ್, ಮಹೇಶ್ ಮತ್ತಿತ್ತರು ಉಪಸ್ಥಿತರಿದ್ದರು.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕಾಲೇಜು ವಿದ್ಯಾರ್ಥಿನಿಯರಿಗೆ ಬಿಸಿಯೂಟ ಶ್ಲಾಘನೀಯ

ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಫೌಂಡೇಶನ್ ಸಹಯೋಗದೊಂದಿಗೆ…

54 mins ago

ಓದುಗರ ಪತ್ರ: ಪೊಲೀಸ್ ಅಧಿಕಾರಿಯ ಅಸಭ್ಯ ವರ್ತನೆ ಅಕ್ಷಮ್ಯ

ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅವರ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ರಾಸಲೀಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್…

56 mins ago

ಓದುಗರ ಪತ್ರ: ಅಮೆರಿಕ ಅಧ್ಯಕ್ಷರ ಹುಚ್ಚುತನ

ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಇರುವ ವಿಶ್ವದ ಅತಿದೊಡ್ಡ ದ್ವೀಪವಾಗಿರುವ ಹಾಗೂ ಡೆನ್ಮಾರ್ಕ್ ದೇಶದ ನಿಯಂತ್ರಣದಲ್ಲಿರುವ ‘ಗ್ರೀನ್ ಲ್ಯಾಂಡ್’ ದ್ವೀಪವನ್ನು ತನ್ನ…

59 mins ago

ಕಾಡ್ಗಿಚ್ಚು ತಡೆಗೆ ನಾನಾ ಮುಂಜಾಗ್ರತಾ ಕ್ರಮ

ನವೀನ್ ಡಿಸೋಜ ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಾಣ ಕಾರ್ಯ ಚುರುಕು; ಜನರಲ್ಲಿ ಜಾಗೃತಿ ಮೂಡಿಸಲು ಚಿಂತ ಮಡಿಕೇರಿ: ಬೇಸಿಗೆ…

1 hour ago

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್ ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ…

1 hour ago