ತಿ.ನರಸೀಪುರ: ತಿ.ನರಸೀಪುರ ತಾಲೂಕು ಅತ್ಯದ್ಬುತವಾದ ಪರಂಪರೆ,ಸಂಸ್ಕೃತಿ ಹೊಂದಿರುವ ಪವಿತ್ರ ಕ್ಷೇತ್ರವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಹಾಗು ರಾಜ ವಂಶಸ್ಥರಾದ ಯದುವೀರ್ ಶ್ರೀ ಕಂಠದತ್ತ ಚಾಮರಾಜ ಒಡೆಯರ್ ಹೇಳಿದರು.
ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ಭೇಟಿ ನೀಡಿ ಗದ್ದುಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾವೇರಿ-ಕಪಿಲಾ-ಸ್ಪಟಿಕ ಸರೋವರ ಸಂಗಮ ಕ್ಷೇತ್ರವಾಗಿರುವ ಟಿ.ನರಸೀಪುರ ಕ್ಷೇತ್ರವು ಅತ್ಯಂತ ಶ್ರೇಷ್ಠ ಹಾಗು ಪವಿತ್ರವಾದ ಕ್ಷೇತ್ರವಾಗಿದೆ ಅಲ್ಲದೇ ಪರಂಪರೆ,ಸಂಸ್ಕೃತಿಯೊಂದಿಗೆ ಐತಿಹಾಸಿಕ ದೇವಾಲಯಗಳ ತವರೂರೇ ಆಗಿದೆ,ಗುಂಜಾ ನರಸಿಂಹಸ್ವಾಮಿ, ಅಗಸ್ತ್ಯೇಶ್ವರ ಹಾಗು ಮುಡುಕುತೊರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯಗಳ ಪವಿತ್ರ ಕ್ಷೇತ್ರವಾಗಿದ್ದು ಅರಮನೆಗೆ ಹತ್ತಿರವಾದ ಕ್ಷೇತ್ರವೂ ಆಗಿದೆ ಎಂದರು.
ಮಠಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಸಂಸ್ಕೃತಿಯ ಸಂರಕ್ಷಣೆ ಮತ್ತು ಉಳಿವಿಗಾಗಿ ಹೆಚ್ಚು ಹೆಚ್ಚಾಗಿ ನಡೆಯುವ ಅವಶ್ಯಕತೆ ಇದೆ,ಮಠದ ಮೂಲಕ ಜನರಿಗೆ ಅನ್ನ,ಅಕ್ಷರ,ಆರೋಗ್ಯ ದಂತಹ ಸೇವೆಗಳು ದೊರಕುತ್ತಿರುವುದು ಶ್ಲಾಘನೀಯವಾಗಿದ್ದು,ಇನ್ನೂ ದೊಡ್ಡ ಮಟ್ಟದಲ್ಲಿ ಜನರ ಸೇವೆ ಮಾಡಬಹುದೆಂಬ ಭಾವನೆ ನನ್ನದಾಗಿದೆ,ಮಠ ಇನ್ನೂ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗಿ ಜನರ ಸೇವೆಗೆ ಸಮರ್ಪಿಸಿಕೊಳ್ಳುವಂತಾಗಲಿ ಎಂದು ಆಶಿಸಿದರು.
ಮುಂದುವರೆದು ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿಸ್ತೃತ ಭಾರತಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ. ಭಾರತೀಯ ಪರಂಪರೆ ಆಧಾರದ ಮೇಲೆ ವಿಸ್ತೃತ ಭಾರತವನ್ನು ನಾವು ಸಾದಿಸುತ್ತೇವೆಂಬ ಆಸೆ ಪ್ರಧಾನಿಯವರದ್ದಾಗಿದೆ ಎಂದ ಅವರು ಭಾರತದ ಪರಂಪರೆಯನ್ನು ಋಷಿ ಮುನಿಗಳು,ಬ್ರಹ್ಮಾಂಡದ ಸತ್ಯಗಳು ಹಾಗು ವೇದಗಳ ಮೂಲಕ ನಮಗೆ ಲಭ್ಯ ಮಾಡಿಕೊಟ್ಟರೋ ಆ ಸಮಯದಿಂದಲೂ ನಮ್ಮ ಭಾರತೀಯ ಪರಂಪರೆ ಉಳಿದು ಬೆಳದುಕೊಂಡು ಬಂದಿದೆ,ಮಠಗಳ ಮೂಲಕ ಪರಂಪರೆಯ ರಕ್ಷಣೆಯಾಗಬೇಕಿದೆ,ಪ್ರಾಚೀನ ಕಾಲದಿಂದಲೂ ಪರಂಪರೆ ಉಳಿದಿರುವ ಏಕೈಕ ದೇಶ ಭಾರತವಾಗಿದ್ದು,ಬೇರಾವ ದೇಶದಲ್ಲೂ ಪರಂಪರೆ ಉಳಿದುಕೊಂಡಿಲ್ಲ,ಅದಕ್ಕಾಗಿ ಪರಂಪರೆಯ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ವಾಗಿದೆ ಎಂದರು.
ಪಟ್ಟದ ಮಠದ ಗುರುಸ್ವಾಮಿಗಳು, ಡೈರಿ ಅಧ್ಯಕ್ಷ ಮಹದೇವಸ್ವಾಮಿ,ಪುರಸಭಾ ಸದಸ್ಯ ಎಸ್. ಕೆ. ಕಿರಣ್, ಕಿರಗಸೂರು ಗ್ರಾ.ಪಂ.ಸದಸ್ಯ ಮಹದೇವಸ್ವಾಮಿ, ಶಿವರಾಜ್, ವಕೀಲ ಶಂಭುಲಿಂಗ ಸ್ವಾಮಿ,ಜ್ಞಾನೇಂದ್ರಮೂರ್ತಿ, ಗುತ್ತಿಗೆದಾರ ಮಂಟೇಲಿಂಗಪ್ಪ,ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ,ವೀರಶೈವ ಮಹಾಸಭಾದ ನಿರ್ದೇಶಕ ತೊಂಟೇಶ್, ಕಸಬಾ ಪಿ ಎ ಸಿ ಎಸ್ ನಿರ್ದೇಶಕ ಸುಂದರ ಸ್ವಾಮಿ, ಯುವ ಘಟಕದ ಅಧ್ಯಕ್ಷ ಕೈಯ್ಯಂಬಳ್ಳಿ ಅಶೋಕ್, ಕೆ ಇ ಬಿ ನಿವೃತ್ತಿ ನೌಕರ ಸಿದ್ದಲಿಂಗ ಸ್ವಾಮಿ ಹಾಜರಿದ್ದರು.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…