ಮೈಸೂರು : ಜಾತಿ ಜನಗಣತಿ ವರದಿ ಬಗ್ಗೆ ಗುರುವಾರ (Thursday) ಸಿಎಂ ಸಿದ್ದರಾಮಯ್ಯ (CM Siddaramaiah) ನಡೆಸಿದ ವಿಶೇಷ ಸಭೆ ವಿಫಲವಾಗಿದೆ. ಹೀಗೆಯೇ ಮೇ.2 ರಂದು ನಡೆಸಲು ನಿಶ್ಚಯಿಸಿರುವ ಸಭೆಯು ಕೂಡ ಸಫಲವಾಗಲ್ಲ ಎಂದು ಎಂಎಲ್‌ಸಿ ಮಂಜೇಗೌಡ (MLC Manjegowda) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿ ನೂರಕ್ಕೆ ನೂರರಷ್ಟು ಜಾರಿಗೆ ಬರಲ್ಲ. ವರದಿ ಅನುಷ್ಠಾನ ತರಲಿಕ್ಕೆ ಯಾರು ಹೊರಟಿದ್ದಾರೆ ಅವರಿಗೂ ಜಾರಿಗೆ ತರಲಿಕ್ಕೆ ಇಷ್ಟ ಇಲ್ಲ. ಇದೊಂದು ರೀತಿ ಮಗು ಚಿವುಟಿ ತೊಟ್ಟಿಲನ್ನೂ ತೂಗುವ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ಹೆಚ್ಚಿನ ಮಾಹಿತಿ:- Caste Census | ವಿಶೇಷ ಸಭೆಯಲ್ಲಿ ಸಹೋದ್ಯೋಗಿಗಳಿಗೆ ಸಿ.ಎಂ ಹೇಳಿದ್ದೇನು?
ರಾಜ್ಯದಲ್ಲಿ ಒಕ್ಕಲಿಗರು, ಲಿಂಗಾಯತರು ಒಬ್ಬರ ಪರವಾಗಿಲ್ಲ. ಎಲ್ಲ ಪಕ್ಷದಲ್ಲೂ ಹೆಚ್ಚೆ ಇದ್ದಾರೆ ಎಂದು ತಿಳಿದಿರುವ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಸಮುದಾಯವನ್ನು ಛಿದ್ರ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಡಿಸೆಂಬರ್‌ಗೆ ಸಿದ್ದರಾಮಮಯ್ಯ ಕೆಳಗಿಳಿಯುತ್ತಾರೆ
ನಾನು ಸಿಎಂ ಸಿದ್ದರಾಮಯ್ಯ ಅವರನ್ನ ಹತ್ತಿರದಿಂದ ತಿಳಿದಿದ್ದೇನೆ. ಸಿದ್ದರಾಮಯ್ಯ ಬೇರೆ ರಾಜಕಾರಣಿಗಳಂತಲ್ಲ. ಜಾತಿಗಣತಿ ವರದಿ ಸಮಿತಿಯೇ ಜನರ ಕಣ್ಣೊರೆಸುವ ಸಮಿತಿಯಾಗಿದೆ. ಈ ಜಾತಿ ಜನಗಣತಿ ಜಾರಿಯೂ ಆಗಲ್ಲ, ಏನೂ ಆಗಲ್ಲ. ಡಿಸೆಂಬರ್‌ಗೆ ಸಿಎಂ ಸಿದ್ದರಾಮಯ್ಯ ಕೆಳಗಿಳಿಯುತ್ತಾರೆ.
ಇದನ್ನೂ ಓದಿ:- ಜಾತಿಗಣತಿ ವರದಿ ತಿರಸ್ಕರಿಸಿ: ಸಿಎಂ ಸಿದ್ದುಗೆ ಶೋಭಾ ಕರಂದ್ಲಾಜೆ ಪತ್ರ
ಸಮಾಜದಲ್ಲಿ ಹಿಂದುಳಿದ ಸಮುದಾಯಗಳನ್ನು ಗುರ್ತಿಸಿ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿ ಮೇಲೆತ್ತುವ ಉದ್ದೇಶದಿಂದ ಜಾತಿ ಜನಗಣತಿ ಮಾಡಿಸುವುದು. ಈಗೀನ ವರದಿ ಅವಜ್ಞಾನಿಕ. ಬೇಕಾದರೆ ವೈಜ್ಞಾನಿಕ ಸಮೀಕ್ಷೆ ಮಾಡಿ ಅನುಷ್ಠಾನಕ್ಕೆ ತನ್ನಿ ಎಂದರು.
ಗ್ಯಾರಂಟಿಯಿಂದ ರಾಜ್ಯ ದಿವಾಳಿ
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗಿದೆ. ಸರ್ಕಾರದ ಬಳಿ ಹಣ ಇಲ್ಲ. ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮಹಿಳೆಯರಿಗೆ ಕೊಟ್ಟು ಅವಳ ಗಂಡನ ಹತ್ತಿರ ಡಬಲ್ ಕಿತ್ತುಕೊಳ್ಳುತ್ತಿದ್ದಾರೆ. ಸರ್ಕಾರ ಆರ್ಥಿಕ ನೀತಿಗಳನ್ನು ಜಾರಿಗೆ ತರುವಲ್ಲಿ ಎಡವಿದೆ ಎಂದರು.
ಇದನ್ನೂ ಓದಿ:- Caste Census Report; ಸಂಪುಟ ಸಭೆಯಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದ ಸಚಿವ ಎಂ.ಬಿ.ಪಾಟೀಲ್
ಮದ್ಯ ಬೆಲೆ ಹೆಚ್ಚು ಮಾಡಿ ಆದರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಯಾಕೆ ಮಾಡುತ್ತೀರಿ.? ಇದೆಲ್ಲ ಡೈವರ್ಟ್ ಮಾಡುವ ಕೆಲಸ. ಒಂದು ವೇಳೆ ಮಹಾತ್ಮ ಗಾಂಧಿಜೀ ಇದ್ದಿದ್ದರೆ ಬ್ರಿಟೀಷರನ್ನ ವಾಪಸ್ ಕರೆತರುತಿದ್ದರು ಎಂದು ಪರಸ್ಪರ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಎಂಎಲ್ಸಿ ಮಂಜೇಗೌಡ ಬೇಸರ ವ್ಯಕ್ತಪಡಿಸಿದರು.
ಕಠ್ಮಂಡು : ನೇಪಾಳದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಹಿರಿಯ ನಾಯಕ ಬಾಲೇಂದ್ರ ಶಾ ಅವರು ದೇಶದ ನೂತನ ಪ್ರಧಾನಿಯಾಗಿ ಇಂದು(ಮಾರ್ಚ್.27)…
ಮಂಡ್ಯ : ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಭದ್ರತೆಗಾಗಿ ಸೂಕ್ತ ಕ್ರಮಗಳನ್ನು…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಬೆಂಗಳೂರು : ವಿದ್ಯಾರ್ಥಿಗಳಿಗೆ ಹಿಂದಿ ಪಾಸ್ ಕಡ್ಡಾಯ ಮಾಡದಂತೆ ಕನ್ನಡಪರ ಸಂಘಟನೆಗಳಿಂದ ಒತ್ತಾಯ ಕೇಳಿಬಂದ ಬೆನ್ನಲ್ಲೇ ರಾಜ್ಯದಲ್ಲಿ ದ್ವಿಭಾಷಾ ಸೂತ್ರ…
ಬೆಂಗಳೂರು : ಬೆಂಗಳೂರು ಉತ್ತರ ತಾಲ್ಲೂಕು ಜಾರಕಬಂಡೆ ಶ್ರೀಗಂಧದ ಕಾವಲ್‌ನಲ್ಲಿ ವಾಯುಪಡೆಯ ವಶದಲ್ಲಿರುವ 444 ಎಕರೆ ಅರಣ್ಯಭೂಮಿಯ ಮರು ವಶಕ್ಕೆ…
ಹೊಸದಿಲ್ಲಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಆತಂಕ ಸೃಷ್ಠಿಯಾಗಿರುವ ನಡುವೆ ಕೇಂದ್ರ…