ಮೈಸೂರು

ಬದುಕಿನ ವೈರಾಗ್ಯ ದಾಟುವುದು ಹೇಗೆ ಎನ್ನುವುದೆ ಕಲಿಕೆ : ಚಿತ್ರ ನಿರ್ದೇಶಕ ಸುರೇಶ್‌

ಮೈಸೂರು : ಯುವಕರು ಸಾಮಾಜಿಕ ಮಾದ್ಯಮಗಳಲ್ಲಿ ಬಹು ಕ್ರೂರಿಗಳಂತೆ ವರ್ತಿಸುತ್ತಿದ್ದಾರೆ. ಅದರಲ್ಲಿ ದಬ್ಬಾಳಿಕೆ ನಡೆಸುವ, ಇದ್ದಕ್ಕಿದ್ದಂತೆ ಸನಾತನಿಗಳಾಗಿ, ಮತ್ತೊಮ್ಮೆ ಆಧುನೀಕರಣಿಗಳಾಗಿ, ಮರುಕ್ಷಣವೇ ಸಂಸ್ಕಾರ, ಭಕ್ತಿದಾರಿಗಳಾಗಿ ಬದುಕುತ್ತಿರುವ ಇವರ ಮನಸ್ಥಿತಿಯ ಬಗ್ಗೆ ಅತೀವವಾದ ಕುತೂಹಲ, ಆತಂಕವಿದೆ ಎಂದು ಚಲನಚಿತ್ರ ನಟ, ನಿರ್ದೇಶಕ ಬಿ.ಸುರೇಶ್ ವಿಶ್ಲೇಷಿಸಿದರು.

ನಗರದ ಚಾಮರಾಜಪುರಂನ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಿನಿಮೊಟೋಗ್ರಫಿ ಮತ್ತು ಫೋಟೋಗ್ರಫಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿತ್ರಕಲೆಯ ಮೂಲಕ ಛಾಯಾಗ್ರಹಣ ಅದರಲ್ಲೂ ಸ್ಥಿರಚಿತ್ರಗ್ರಹಣ, ಚಲನಚಿತ್ರಛಾಯಾಗ್ರಹಣದ ಕಲಿಕೆ ನಿಜವಾಗಿ ಜೀವನದ ಸಾರ್ಥಕ ಮಾರ್ಗ. ಇವತ್ತಿನ ಕಾಲಘಟ್ಟದ ಮಕ್ಕಳೊಂದಿಗೆ ಮಾತನಾಡುವುದು ವೈಯಕ್ತಿಕವಾಗಿ ನನಗೆ ಬಹಳ ಸಂತಸವಾಗುತ್ತದೆ. ಚಿತ್ರಕಲೆ ಕಲಿಕೆಯಲ್ಲಿ ಹಿಂದೆ ಆಡಂಬರ ಚಿತ್ರಿಸಿ ಅದರ ಮುಂದಣ ಬಡತನವನ್ನು ಚಿತ್ರಿಸುವ ಕಲಾವಿದರು ಕಾಣಿಸುತ್ತಿದ್ದಾರೆ. ದೇಶದಲ್ಲಿ ಬಡತನದಿಂದ ಸಂಕಟದಲ್ಲಿರುವವರ ವೇದನೆ ಚಿತ್ರಿಸುವ ಕೆಲಸವಾಗುತ್ತಿದೆ. ಇವರು ನಿಜವಾಗಿ ನಾಡನ್ನು ಕಟ್ಟುವ ಮನಸ್ಸುಗಳು. ಪ್ರಸ್ತುತದಲ್ಲೂ ದಿನದಲ್ಲಿ ೪೦೦ ರೂ. ಸಂಪಾದಿಸಲು ಒದ್ದಾಡುತ್ತಿರುವವರೆ ಬಹುಸಂಖ್ಯಾಂತರು. ಬದುಕಿನ ವೈರುಧ್ಯ ದಾಟುವುದು ಹೇಗೆ ಎನ್ನುವುದೇ ಕಲಿಕೆ ಎಂದು ಹೇಳಿದರು.

ಇವತಿನ ಯುಜನತೆ ಬಗ್ಗೆ ಅಪಾರವಾದ ಕುತೂಹಲವಿದೆ. ಏಕೆಂದರೆ ಹೆಚ್ಚಿನ ಯುವಕರು ಪ್ರಸ್ತುತ ದಿನಗಳಲ್ಲಿ ವಿದೇಶಗಳ ಶಿಕ್ಷಣಕಾಗ್ಕಿ ಹಾರಿ ಹೋಗುವರ ಸಂಖ್ಯೆ ಹೆಚ್ಚಿದ್ದು, ನಮ್ಮದೇ ದೇಶದಲ್ಲಿ ಉಳಿದು ಕಲಿಕೆ ಪಡೆಯುತ್ತಿರುವ ಯುವ ಜನತೆಯ ಮೇಲೆ ಕುತೂಹಲ ಹೆಚ್ಚಿದೆ. ಇಲ್ಲಿ ಕಲಿತವರು ಎಲ್ಲಿಯೂ ಸಲ್ಲುವವರು ಎಂಬುದು ನನ್ನ ನಂಬಿಕೆ ಎಂದು ಬಣ್ಣಿಸಿದರು.

ಒಂದು ವರದಿಯ ಪ್ರಕಾರ ೨೦೨೨-೨೩ ಇಸವಿಯಲ್ಲಿ ಇಂಗ್ಲೆಂಡ್‌ನಲ್ಲಿ ಅತೀ ಹೆಚ್ಚು ವಿದ್ಯಾರ್ಥಿ ವೇತನ ಪಡೆದವರ ಪೈಕಿ ಭಾರತೀಯ ಯುವಕರೆ ಹೆಚ್ಚಿನದಾಗಿದ್ದಾರೆ. ಇವತ್ತಿನ ಯುವಜನತೆಗೆ ಹೊಸ ತಂತ್ರಜ್ಞಾನ ಹೆಚ್ಚು ಕರಗತವಾಗಿದ್ದು, ಏನನ್ನಾದರೂ ಮಾಡುವ ಸಾಮರ್ಥ್ಯ ಬೆಳಸಿಕೊಂಡಿದ್ದಾರೆ. ಇವರು ಒಂದು ರೀತಿಯಲ್ಲಿ ಏಕಕಾಲಕ್ಕೆ ಹಲವು ವೇಷ ಧರಿಸುವವರು ಎನ್ನಬಹುದು. ವೇಷದಾರಿಗಳಾದ ಇವರ ನಿಜವಾದ ಬದುಕಿನ ಬಗ್ಗೆ ಆತಂಕವಿದೆ.

ಹಿಂದೆ ಈ ದೇಶದ ಮಾದರಿ ನಾಯಕರಾಗುವವರು ಎಂದುಕೊಂಡಿದ್ದವರು ಇಂದು ರಾಜಕೀಯ ಪಕ್ಷಾಂತರಿ, ಸನಾತನವಾದಿಗಳಾಗಿ, ಮತೀಯರಾಗಿ ಮುಖವಾಡದ ಬದುಕುತ್ತಿರುವುದನ್ನು ಕಾಣುತಿದ್ದೇವೆ. ಎಂದು ಟೀಕೆ ವ್ಯಕ್ತಪಡಿಸಿದರು.
ರಂಗಭೂಮಿ ಹಾಗೂ ಚಲನಚಿತ್ರ ನೃತ್ಯಕಲಾವಿದೆ ಆರ್. ರಶ್ಮಿ, ಹಿರಿಯ ಛಾಯಾಚಿತ್ರ ಕಲಾವಿದ ಎಂ.ಆರ್. ಮಂಜುನಾಥ್, ರವಿವರ್ಮ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಶಿವಕುಮಾರ ಕೆಸರಮಡು ಉಪಸ್ಥಿತರಿದ್ದರು.

ಕಲೆಯಲ್ಲಿ ವಾಸ್ತವ ಹೇಳಬೇಕು
ಕಲೆಯಲ್ಲಿ ನಮ್ಮೆದುರಿಗಿನ ವಾಸ್ತವ ಹೇಳುವ ಕೆಲಸವಾಗಬೇಕು. ಇವತ್ತು ಬೆಂಗಳೂರಿನ ದೇವನಹಳ್ಳಿ-ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಕಳೆದ ೧೨ವರ್ಷದಿಂದ ರೈತರು ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಅಂದಿನಿಂದಲೂ ಹಲವು ಸರ್ಕಾರಗಳು ರೈತರ ಬೇಡಿಕೆ ಧಿಕ್ಕರಿಸಿ, ಭೂಮಿ ಕಬಳಿಸಿ, ಕೈಗಾರೀಕರಣ ಮಾಡುವ ಕಡೆಗೆ ಸಾಗಿದ್ದಾರೆ. ಲಾಭಕೋರರಾಗಿ ಜನಪ್ರತಿನಿಧಿಗಳು ರೈತರನ್ನು ದಿವಾಳಿಯಾಗಿಸುತ್ತಿದ್ದು, ಆ ಭಾಗದ ನೆಮ್ಮದಿ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ. ಖಾಸಗೀಯವರೆಡೆ ಒಲವಿದ್ದು ಇದೆಲ್ಲ, ಭಾವನಾತ್ಮಕವಾಗಿ ದೇವಸ್ಥಾನ ಕಟ್ಟುವವರ ಆಯ್ಕೆ ಮಾಡಿದ್ದರ ಪರಿಣಾಮ. ನಾವೆಲ್ಲರೂ ದೇಶಕಟ್ಟುವ, ಶಾಲೆ, ಆಸ್ಪತ್ರೆ ಕಟ್ಟುವವವರನ್ನು ಆಯ್ಕೆ ಮಾಡಬೇಕಿದೆ. ಇಲ್ಲದಿದ್ದಲ್ಲಿ ಸಮಾಜ ಅವನತಿಯೆಡೆಗೆ ಸಾಗುತ್ತದೆ ಎಂದು ಬಿ.ಸುರೇಶ್ ಎಚ್ಚರಿಸಿದರು.

ಆಂದೋಲನ ಡೆಸ್ಕ್

Recent Posts

ಕೊಳ್ಳೇಗಾಲ: ಅಂಬೇಡ್ಕರ್ ಪ್ರತಿಮೆಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ

ಹನೂರು : ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿರುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು…

7 hours ago

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ!

ಶಿವಮೊಗ್ಗ: ಕಾಂಗ್ರೆಸ್‌ ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಸಂಘಟನೆ ಬಲಪಡಿಸಲು ಪಾದಯಾತ್ರೆ ಆರಂಭಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.…

8 hours ago

ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ: ಸಿಎಂ ಡಿ.ಕೆ.ಶಿವಕುಮಾರ್‌

ಹನೂರು: ಚಾಮರಾಜನಗರ ಎಂದರೆ ನನಗೆ ಬಲು ಪ್ರೀತಿ, ನನ್ನ ಕ್ಷೇತ್ರದ ಪಕ್ಕದಲ್ಲೇ ಚಾಮರಾಜನಗರ ಜಿಲ್ಲೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್…

8 hours ago

ಹನೂರು ತಾಲೂಕಿನಲ್ಲಿ ಮುಂದುವರಿದ ಮಳೆ ಅವಾಂತರ: ಹಳ್ಳದಲ್ಲಿ ಗಣಪತಿ ದೇವಾಲಯ ಜಲಸಮಾಧಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ…

9 hours ago

ಹನೂರಿನಲ್ಲಿ ಮಳೆಯ ಅಬ್ಬರ: 50ಕ್ಕೂ ಹೆಚ್ಚು ಮನೆಗಳು ಜಲಾವೃತ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಳೆದ ಎರಡು ದಿನಗಳಿಂದ ಹನೂರು ತಾಲೂಕಿನಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಗೆ…

9 hours ago

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

15 hours ago