ಮೈಸೂರು: ನಗರದ ಗೋಕುಲಂ ೨ನೇ ಹಂತದಲ್ಲಿ ಎಸ್‌ಪಿಆರ್ ರೆಸ್ಟೋರೆಂಟ್‌ನಲ್ಲಿ ಜನಾಗ್ರಹ ಸಂಸ್ಥೆ ಸಿದ್ದಪಡಿಸಿರುವ ‘ನನ್ನ ನಗರ ನನ್ನ ಜವಾಬ್ದಾರಿ’ ಸಕ್ರಿಯ ನಾಗರಿಕತ್ವದ ಕೈಪಿಡಿಯನ್ನು ಮೈಸೂರು ವಾರ್ಡ್ ಸಮಿತಿ ಬಳಗದ ಆಶ್ರಯದಲ್ಲಿ ಬಿಡುಗಡೆಗೊಳಿಸಲಾಯಿತು.
ಜನಾಗ್ರಹ ಸಂಸ್ಥೆಯ ರಾಜ್ಯ ಮುಖ್ಯಸ್ಥ ಮಂಜುನಾಥ್ ಹಂಪಾಪುರ ಮಾತನಾಡಿ, ಸಕ್ರಿಯ ನಾಗರಿಕತ್ವದ ಕೈಪಿಡಿಯು ಸ್ಥಳೀಯ ಸರ್ಕಾರ ಮತ್ತು ನಾಗರಿಕರು ಹೇಗೆ ಸಮನ್ವಯದಿಂದ ಸ್ಥಳೀಯ ಮಟ್ಟದ ಕಸದ ಸಮಸ್ಯೆಯಿಂದ ಹಿಡಿದು ಹವಾಮಾನ ವೈಪರೀತ್ಯದಂತಹ ದೊಡ್ಡ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಯೋಜನೆಗಳನ್ನು ರೂಪಿಸುವುದರ ಮೂಲಕ ಹೇಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬಹುದು ಎನ್ನುವುದನ್ನು ತಿಳಿಸುತ್ತದೆ ಎಂದರು.
ಮೈಸೂರು ವಾರ್ಡ್ ಸಮಿತಿ ಬಳಗದ ಹಿರಿಯ ಸದಸ್ಯ ವೆಂಕಟೇಶ್ ಕರಾಡಿ ಮಾತನಾಡಿ, ಮೈಸೂರು ನಗರದ ವಸ್ತುಸ್ಥಿತಿ ನೋಡಿದರೆ ಈ ನನ್ನ ನಗರ ನನ್ನ ಜವಾಬ್ದಾರಿ ಸಕ್ರಿಯ ನಾಗರಿಕತ್ವದ ಕೈಪಿಡಿಯು ನಾಗರಿಕರಿಗೆ ಹೇಗೆ ನನ್ನ ನಗರದ ಅಭಿವೃದ್ಧಿಗೆ ಸರ್ಕಾರದ ಜೊತೆಗೆ ಕಾರ್ಯನಿರ್ವಹಿಸಬೇಕು.
ಹಾಗೆಯೇ ನಾಗರಿಕನಾಗಿ ನನ್ನ ನಗರದ ನನ್ನ ವಾರ್ಡ್‌ನಲ್ಲಿ ನನ್ನ ಕೊಡುಗೆ ಮತ್ತು ಜವಾಬ್ದಾರಿ ಏನು ಎಂಬುದನ್ನು ಸ್ವವಿವರವಾಗಿ ತಿಳಿಸುವಂತಹ ಒಂದು ಉತ್ತಮ ಪ್ರಯತ್ನವಾಗಿದೆ ಎಂದರು.
ಮೈಸೂರು ವಾರ್ಡ್ ಸಮಿತಿ ಬಳಗದ ಸದಸ್ಯರಾದ ಮಾಳವಿಕಾ ಗುಬ್ಬಿವಾಣಿ, ರೇಣು ಅಗರ್‌ವಾಲ್, ಶಶಿಧರ್, ದಯಾನಂದ್ ಸಾಗರ್, ಪ್ರಭಾ ನಂದೀಶ್, ಗೀತಾ, ಲೀಲಾ ವೆಂಕಟೇಶ್, ಜೋಸೆಫ್ ರಾಬಿನ್, ಡಾ.ಜಿ.ಪಾಂಡುರಂಗ ಮೂರ್ತಿ, ರವಿಶಂಕರ್ ನಾರಾಯಣ, ಎಸ್.ವಾಸು, ಶ್ರೀಕಾಂತ್, ಶುಶ್ರುತ, ಕುಶಾಲಿ ಜೈನ್, ಕೆಂಪಣ್ಣ, ಶ್ವೇತಾ ಕೃಷ್ಣಸ್ವಾಮಿ ಇತರರು ಹಾಜರಿದ್ದರು.
ಬೆಂಗಳೂರು: ನನ್ನ ವಿರುದ್ಧ 17 ಕೇಸ್ ಇದೆ. ಇನ್ನೂ ಹಾಕೋಕೆ ಹೇಳಿ ಆದರೆ ದಾರಿ ತಪ್ಪಿಸಬೇಡಿ ಎಂದು ಮಾಜಿ ಸಂಸದ…
ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಪರಮೇಶ್ವರ್…
ಕೇರಳ: ಬೆಂಗಳೂರಿನ ಕೋಗಿಲು ಕ್ರಾಸ್ ಬಳಿಯ ಅಕ್ರಮ ಒತ್ತುವರಿ ತೆರವು ಸಂಬಂಧಪಟ್ಟಂತೆ ಅನಪೇಕ್ಷಣೀಯವಾದಂತಹ ಹೇಳಿಕೆ ನೀಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ…
ಮೈಸೂರು: ಹೊಸ ವರ್ಷಾಚರಣೆ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ನ್ಯೂ ಇಯರ್ ಆಚರಿಸಲು ಪ್ರವಾಸಿಗರು ಮೈಸೂರಿಗೆ ಲಗ್ಗೆಯಿಟ್ಟಿದ್ದಾರೆ. ಜಗತ್ಪ್ರಸಿದ್ಧ ಮೈಸೂರು ಅರಮನೆಗೆ…
ಬಳ್ಳಾರಿ: ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್ ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್…
ಬೆಂಗಳೂರು: ಪೈರಸಿ ವಿರುದ್ಧ ನವರಸ ನಾಯಕ ಜಗ್ಗೇಶ್ ಸಮರ ಸಾರಿದ್ದು, ಕೋಣ ಸಿನಿಯಾ ಪೈರಸಿ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್…