ಮೈಸೂರು

ಸುಳ್ಳು ಕೊಲೆ ಕೇಸ್‌ ಪ್ರಕರಣ : ಮೂವರು ಪೊಲೀಸರು ಅಮಾನತ್ತು

ಮೈಸೂರು: `ಕೊಲೆಯಾಗಿದ್ದ’ ಪತ್ನಿ ಜೀವಂತವಾಗಿ ಪತ್ತೆಯಾಗಿದ ಕುಶಾಲನಗರದ ಸುರೇಶ್ ಪ್ರಕರಣಕ್ಕೆ ಸಂಬಂದಿಸಿದಂತೆ ಅಂದಿನ ತನಿಖಾಧಿಕಾರಿಗಳಾದ ಮೂವರು ಪೊಲೀಸ್ ಅಧಿಕಾರಿಗಳನ್ನು ಪೊಲೀಸ್ ಇಲಾಖೆ ಅಮಾನತ್ತುಗೊಳಿಸಿದೆ.

ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸದ್ಯ ಕುಶಾಲನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಜಿ.ಪ್ರಕಾಶ್, ಇಲವಾಲ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಕುಮಾರ್ ಮತ್ತು ಜಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಯತ್ತಿನಮನಿ ಅವರುಗಳನ್ನು ಇಲಾಖೆ ಅಮಾನತ್ತುಗೊಳಿಸಿದೆ.

ನಿರ್ಲಕ್ಷ್ಯ, ಕರ್ತವ್ಯ ಲೋಪ, ಸಾಕ್ಷ್ಯಾಧಾರಗಳ ರಚನೆ, ನ್ಯಾಯಾಲಯಕ್ಕೆ ಸುಳ್ಳು ಆರೋಪಪಟ್ಟಿ ಸಲ್ಲಿಸುವುದು ಮತ್ತು ತನಿಖೆಯಲ್ಲಿ ದೋಷಪೂರಿತ ಮತ್ತು ಅಸಡ್ಡೆ ತೋರಿದ ಆರೋಪದ ಮೇಲೆ ಅವರುಗಳನ್ನು ಅಮಾನತುಗೊಳಿಸಲಾಗಿದೆ.

ಜೂ.೨೮ ರಂದು ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಅವರು ಅಮಾನತು ಆದೇಶವನ್ನು ಹೊರಡಿಸಿದ್ದು, ಅಮಾನತುಗೊಂಡ ಅಧಿಕಾರಿಗಳಿಗೆ ಭಾನುವಾರ ಅಧಿಕೃತವಾಗಿ ಅಮಾನತ್ತುಗೊಳಿಸಿರುವ ಆದೇಶಗಳನ್ನು ನೀಡಲಾಗಿದೆ. ಇದೇ ವೇಳೆ ಮೂವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಲಾಗಿದೆ.

ಪ್ರಕರಣಕ್ಕೆ ಸಂಬಂದಿಸಿದಂತೆ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಷರಶಃ ಬೇಸರಗೊಂಡಿದ್ದರು ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂದಿಸಿದಂತೆ ಕರ್ತವ್ಯಲೋಪ ಎಸಗಿರುವವರನ್ನು ಕೂಡಲೇ ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಐಜಿಪಿಗೆ ಮೌಖಿಕ ಸೂಚನೆಗಳನ್ನು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಕೊಡಗಿನ ಕುಶಾಲನಗರದ ಬಸವನಹಳ್ಳಿಯ ಬುಡಕಟ್ಟು ನಿವಾಸಿ ಸುರೇಶ್ ಅವರ ಪತ್ನಿ ವಿವಾಹವಾದ ೧೮ ವರ್ಷಗಳ ನಂತರ ನಾಪತ್ತೆಯಾಗಿದ್ದರು. ಈ ಸಂಬಂದ ಸುರೇಶ್ ಕುಶಾಲನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಆರಂಭಿಕ ತನಿಖೆಯ ಹೊರತಾಗಿಯೂ, ನಂತರ ಪ್ರಕರಣದ ತನಿಖೆ ವೇಗ ಕಳೆದುಕೊಂಡಿತ್ತು. ಅದಾದ ಏಳು ತಿಂಗಳ ನಂತರ, ಜೂನ್ ೨೦೨೧ ರಲ್ಲಿ, ಪಿರಿಯಾಪಟ್ಟಣದ ಬೆಟ್ಟದಪುರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪತ್ತೆಯಾದ ಮಹಿಳೆಯ ಅಸ್ಥಿಪಂಜರವನ್ನು ಗುರುತಿಸಲು ಸುರೇಶ್ ಅವರನ್ನು ಕರೆತಂದರು.

ಅಸ್ಥಿಪಂಜರದ ಅವಶೇಷಗಳು, ಬಟ್ಟೆಗಳು ಮತ್ತು ಚಪ್ಪಲಿಗಳು ಕಾಣೆಯಾದ ತನ್ನ ಹೆಂಡತಿಯದ್ದಾಗಿವೆ ಎಂದು ಗುರುತಿಸಲು ಅವನನ್ನು ಒತ್ತಾಯಿಸಿದ್ದರು. ಪೊಲೀಸರ ಬಲವಂತದ ಮೇರೆಗೆ, ಆಕೆಯ ಕೊಲೆಯನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿತ್ತು.

ನಂತರ ಆತನ ವಿರುದ್ಧ ಎಫ್‌ಐಆರ್ ದಾಖಲಿಸಲಾಯಿತು ಮತ್ತು ಸುರೇಶ್ ಅವರನ್ನು ಬಂಧಿಸಲಾಯಿತು. ಹೈಕೋರ್ಟ್‌ನಿಂದ ಜಾಮೀನು ಪಡೆಯುವ ಮೊದಲು ಅವರು ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು.

ನಂತರ ನಡೆದ ನಾಟಕೀಯ ತಿರುವೊಂದರಲ್ಲಿ, ಏಪ್ರಿಲ್ ೧, ೨೦೨೫ ರಂದು, ಸುರೇಶ್ ಅವರ ಸ್ನೇಹಿತರು ಅವರ ಪತ್ನಿ ಮಲ್ಲಿಗೆಯನ್ನು ಜೀವಂತವಾಗಿ ನೋಡಿದ್ದರು. ಆಕೆಯ ಪ್ರಿಯಕರನೊಂದಿಗೆ ಮಡಿಕೇರಿಯ ಹೋಟೆಲ್ ಒಂದರಲ್ಲಿ ಇದ್ದರು. ಇದರಿಂದ ಎಚ್ಚರಗೊಂಡ ಪೊಲೀಸರು ಮಲ್ಲಿಗೆಯನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆಯ ಸಮಯದಲ್ಲಿ, ಅವಳು ಕಳೆದ ಐದು ವರ್ಷಗಳಿಂದ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಗಣೇಶ್ ಜೊತೆ ವಾಸಿಸುತ್ತಿರುವುದಾಗಿ ಒಪ್ಪಿಕೊಂಡಳು. ಆಕೆಯ ಪತ್ತೆಯಿಂದಾಗಿ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಅಕ್ಷರಶಃ ತಲ್ಲಣಗೊಂಡಿತ್ತು.

ನಂತರ ಸುರೇಶ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿತು. ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಒಬ್ಬ ಅಮಾಯಕ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡ ತನಿಖೆಯ ಕ್ಷಮತೆಯ ಬಗ್ಗೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿತ್ತು.

ತನಿಖೆಯ ಸಮಯದಲ್ಲಿ ಸುಳ್ಳುಗಳನ್ನೇ ದಾಖಲು ಮಾಡಿದ್ದ ಇನ್ಸಪೆಕ್ಟರ್ ಬಿ.ಜಿ.ಪ್ರಕಾಶ್ ಬೈಲಕುಪ್ಪೆ ವೃತ್ತದ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಮಹೇಶ್ ಕುಮಾರ್ ಮತ್ತು ಪ್ರಕಾಶ್ ಯಟ್ಟಿನಮನಿ ಬೆಟ್ಟದಪುರ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾಗಿದ್ದರು. ಇದೀಗ ಮೂವರನ್ನೂ ಅಮಾನತ್ತೊಗೊಳಿಸಲಾಗಿದೆ.

 

 

ಆಂದೋಲನ ಡೆಸ್ಕ್

Recent Posts

ಬಯಲುಸೀಮೆಗೆ ಭದ್ರಾ ಜೀವಜಲ : ನವೆಂಬರ್ ಅಂತ್ಯಕ್ಕೆ ಎಲ್ಲ ಕೆರೆಗಳಿಗೂ ನೀರು ; ಸಚಿವ ಚಲುವರಾಯಸ್ವಾಮಿ ಭರವಸೆ*

ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…

37 mins ago

ಓದುಗರ ಪತ್ರ: ಕರುನಾಡ ಹೆಮ್ಮೆ…

ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…

9 hours ago

ಓದುಗರ ಪತ್ರ: ಪಾಲಿಕೆ ಯೋಜನೆ ಸ್ವಾಗತಾರ್ಹ

ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…

9 hours ago

ಓದುಗರ ಪತ್ರ: ಯುಪಿಐ ಶುಲ್ಕ: ಚರ್ಚೆಯ ನಂತರ ಕ್ರಮ ಕೈಗೊಳ್ಳಿ

ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…

9 hours ago

ಬದಲಾದ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಬ್ರಿಕ್ಸ್ ಪಾತ್ರ

ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…

9 hours ago

ಬಿಹಾರದಲ್ಲಿ ಯುಸಿಸಿಗೆ ನಿತೀಶ್, ಚಿರಾಗ್ ಪಕ್ಷಗಳ ಭಿನ್ನರಾಗ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌  ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…

9 hours ago